ಬಹುತೇಕ ಸೃಷ್ಟಿ ಕಥನ ಆರಂಭವಾಗುವುದೇ ಏಕದಿಂದ. ಬಹುತೇಕ ಭಾರತೀಯ (ವಿಶ್ವಾದ್ಯಂತ ಕೂಡಾ) ಧಾರ್ಮಿಕ, ಆಧ್ಯಾತ್ಮಿಕ, ಜನಪದ ನಂಬಿಕೆಗಳೂ ಏಕದಿಂದ ಅನೇಕವಾಗುವ ಸಿದ್ಧಾಂತವನ್ನೇ ಸಾರುತ್ತವೆ. ಶರಣ ಉರಿಲಿಂಗಪೆದ್ದಿ ಈ ವಚನದಲ್ಲಿ ಹೇಳಿರುವುದು ಅದನ್ನೇ.
ಒಂದೇ ವಸ್ತು ತನ್ನ ಲೀಲೆಯಿಂದ ಪರಮಾತ್ಮ ಜೀವಾತ್ಮನಾಯಿತು
ಆ ಪರಮಾತ್ಮನೇ ಲಿಂಗ, ಜೀವಾತ್ಮನೇ ಅಂಗ ಸಂಗವೇ ಏಕಾತ್ಮ
ತತ್ ಪದವೇ ಪರಮಾತ್ಮ ತ್ವಂ ಪದವೇ ಜೀವಾತ್ಮ ಅಸಿ ಪದವೇ ತಾದಾತ್ಮ್ಯವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ – ಉರಿಲಿಂಗಪೆದ್ದಿ