ಒಂದೇ ಕಪಾಟು! ~ ನಸ್ರುದ್ದೀನ್ ಕಥೆ : Tea time story

ಮುಲ್ಲಾ ನಸ್ರುದ್ದೀನ್ ಕೋರ್ಟಿನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ. ವಿಚಾರಣೆಯ ದಿನ ಕೋರ್ಟಿನಲ್ಲಿ ಹಾಜರಾದ ನಸ್ರುದ್ದೀನ್, ನ್ಯಾಯಾಧೀಶರ ಎದುರು ತನ್ನ ಅಹವಾಲು ಮಂಡಿಸಿದ.

“ ಮಹಾಸ್ವಾಮಿ, ಇನ್ನು ನನಗೆ ಹೆಂಡತಿಯ ಜೊತೆ, ಒಂದೇ ಸೂರಿನ ಕೆಳಗೆ ಬದುಕಲು ಸಾಧ್ಯವಿಲ್ಲ. ಪ್ರತೀದಿನ ರಾತ್ರಿ ನಾನು ಮನೆಗೆ ವಾಪಸ್ ಬಂದಾಗ, ನನ್ನ ಹೆಂಡತಿ ಒಬ್ಬ ಗಂಡಸನ್ನು ಕಪಾಟಿನಲ್ಲಿ ಅಡಗಿಸುತ್ತಾಳೆ.”

ಈ ಆಪಾದನೆ ಕೇಳಿ ದಿಗ್ಭ್ರಮೆಗೆ ಒಳಗಾದ ನ್ಯಾಯಾಧೀಶರು, “ ಪ್ರತೀದಿನ ಅಡಗಿಸುತ್ತಾಳಾ?”

“ ಹೌದು ಸ್ವಾಮಿ, ಒಬ್ಬನೇ ಗಂಡಸಲ್ಲ, ಪ್ರತೀದಿನ ಬೇರೆ ಬೇರೆ ಗಂಡಸರು” ಮುಲ್ಲಾ ತನ್ನ ವಾದವನ್ನು ಮುಂದುವರೆಸಿದ.

“ ಹಾಗಾದರೆ, ನಿನಗೆ ಬಹಳ ನೋವಾಗಿರಬಹುದು. ದಿನದ ಶ್ರಮ ಮುಗಿಸಿ ರಾತ್ರಿ ಮನೆಗೆ ಬಂದಾಗ, ನೀನು ಹೆಂಡತಿಯಿಂದ ಪ್ರೇಮ, ಆದರಾಥಿತ್ಯ ಬಯಸಿರುತ್ತೀ ಆದರೆ ನಿನ್ನ ಹೆಂಡತಿ ಪ್ರತೀದಿನ ಬೇರೆ ಬೇರೆ ಗಂಡಸರನ್ನು ಕಪಾಟಿನಲ್ಲಿ ಅಡಗಿಸುವುದನ್ನ ಕಂಡು ನಿನಗೆ ವಿಪರೀತ ಸಿಟ್ಟು ಬಂದಿರಬೇಕಲ್ಲ ? “ ನಸ್ರುದ್ದೀನ್ ನನ್ನು ಸಂತೈಸಲು ನ್ಯಾಯಾಧೀಶರು ಪ್ರಶ್ನೆ ಮಾಡಿದರು.

“ ಹೌದು ಮಹಾಸ್ವಾಮಿ, ನನಗೆ ಸಿಕ್ಕಾಪಟ್ಟೆ ನೋವಾಗಿದೆ. ಮನೆಯಲ್ಲಿ ನನಗೆ ಬಟ್ಟೆ ತೂಗು ಹಾಕಲು ಅದೊಂದೇ ಕಪಾಟು ಇರೋದು” ನಸ್ರುದ್ದೀನ್ ಉತ್ತರಿಸಿದ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.