ಈಶಾವಾಸ್ಯದಿಂದ, ಇಂದಿನ ಸುಭಾಷಿತ

ಈಶಾವಾಸ್ಯ ಉಪನಿಷತ್ತಿನ ಈ ಮಂತ್ರ, ಎಲ್ಲರಲ್ಲೂ ನಮ್ಮನ್ನೆ ಕಂಡು ದ್ವೇಷರಹಿತ ಬದುಕು ಸಾಗಿಸಲು ದಾರಿ ತೋರಲಿ…

ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನುಪಶ್ಯತಿ| ಸರ್ವಭೂತೇಶು ಚಾತ್ಮಾನಂ ತತೋ ನವಿಜುಗುಪ್ಸತೇ||

ಅರ್ಥ: ತನ್ನನ್ನು ಎಲ್ಲರೊಳಗೆ, ಎಲ್ಲರನ್ನು ತನ್ನೊಳಗೆ ಭಾವಿಸಬಲ್ಲವರು ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ.

ಮನುಷ್ಯರ ವ್ಯಕ್ತಿತ್ವವನ್ನು ತೀವ್ರವಾಗಿ ಹಾಳುಗೆಡಿಸುವ ಅಂಶಗಳಲ್ಲಿ ದ್ವೇಷ ಮುಖ್ಯವಾದುದು. ದ್ವೇಷದಲ್ಲಿ ನಾವು ನಮ್ಮ ಅಭಿವೃದ್ಧಿಯ ಆಲೋಚನೆ ಬದಿಗೊತ್ತಿ ಮತ್ತೊಬ್ಬರ ವಿನಾಶದ ಬಗ್ಗೆ ಆಲೋಚಿಸುತ್ತಾ ಇರುತ್ತೇವೆ. ಇದರಿಂದ ಅಂತರಂಗ ಕಲುಷಿತವಾಗುವುದು ಮಾತ್ರವಲ್ಲ, ನಮ್ಮ ಬಾಹ್ಯ ಪ್ರಗತಿಯೂ ಕುಂಠಿತವಾಗುತ್ತದೆ ಅಥವಾ ನಿಂತೇಹೋಗುತ್ತದೆ.

ಎಲ್ಲರಲ್ಲೂ ಇರುವುದುಆತ್ಮವೇ, ಮತ್ತೊಬ್ಬ ವ್ಯಕ್ತಿಯೂ ನಾನೇ, ಅವರ ಪ್ರಗತಿ ನನ್ನ ಪ್ರಗತಿ – ಅವರ ವಿನಾಶ ನನ್ನ ವಿನಾಶ ಎಂಬುದನ್ನು ಅರ್ಥಮಾಡಿಕೊಂಡರೆ, ನಾವು ಇಂಥ ಸರ್ವ ವಿನಾಶಿ ದ್ವೇಷ ಭಾವನೆಯಿಂದ ಹೊರಬರಲು ಸಾಧ್ಯವಾಗುತ್ತದೆ.

Leave a Reply