ಪಂಚತಂತ್ರದಿಂದ, ಈ ದಿನದ ಸುಭಾಷಿತ…
ಸಕೃತ್ ಕಂದುಕಪಾತೇನ ಪತತ್ಯಾರ್ಯಃ ಪತನ್ನಪಿ|
ತಥಾ ಪತತಿ ಮೂರ್ಖ ಸ್ತುಮೃತ್ಪಿಂಡಪತನಂ ಯಥಾ|ಪಂಚತಂತ್ರ||
ಅರ್ಥ : ಒಂದೊಮ್ಮೆ ಬುದ್ಧಿವಂತನು ಬಿದ್ದರೆ ಚೆಂಡು ಬಿದ್ದಂತೆ ಬೀಳುತ್ತಾನೆ. ಆದರೆ ಮೂರ್ಖನು ಮಣ್ಣಿನ ಮುದ್ದೆ ಬೀಳುವಂತೆ ಬೀಳುತ್ತಾನೆ.
ತಾತ್ಪರ್ಯ: ಚೆಂಡು ಬಿದ್ದನಂತರ ಪುಟಿದೇಳುತ್ತದೆ. ಬಿದ್ದಷ್ಟೇ ವೇಗವಾಗಿ ಮತ್ತು ಖಚಿತವಾಗಿ ಮೇಲೆ ಬರುತ್ತದೆ. ಆದರೆ ಮಣ್ಣಿನ ಮುದ್ದೆ ಬಿದ್ದಲ್ಲೆ ಬಿದ್ದಿರುತ್ತದೆ. ಬುದ್ಧಿವಂತರು ಯಾವುದಾದರೂ ಕಾರ್ಯದಲ್ಲಿ ಎಡವಿದರೆ ಪುನಃ ಪ್ರಯತ್ನ ಪಟ್ಟು ಮೇಲೇಳುತ್ತಾರೆ. ಆದರೆ ಮೂರ್ಖರು ಒಮ್ಮೆ ಸೋಲುಂಡರೆ ತಮ್ಮ ಜೀವನವೇ ಮುಗಿದು ಹೋದಂತೆ ನೆಲಕಚ್ಚುತ್ತಾರೆ.
ಚೆಂಡಿನಂತೆ ಆಗಬೇಕೋ, ಮಣ್ಣಿನ ಮುದ್ದೆಯಂತೆಯೋ… ಆಯ್ಕೆ ನಮ್ಮ ಕೈಲೇ ಇದೆ.