ಇಂದಿನ ಸುಭಾಷಿತ, ಯೋಗ ವಾಸಿಷ್ಟದಿಂದ…

ಇಂದಿನ ಸುಭಾಷಿತ, ಯೋಗ ವಾಸಿಷ್ಠದಿಂದ…

ಅಪಿ ಮೇರು ಸಮಂ ಪ್ರಾಜ್ಞಮಪಿ ಶೂರಮಪಿ ಸ್ಥಿರಂ ।
ತೃಣೀ ಕರೋತಿ ತೃಷ್ಣೈಕಾ ನಿಮೇಷೇಣ ನರೋತ್ತಮಮ್ ॥

ಮನುಷ್ಯನು ಮೇರು ಪರ್ವತದಂತೆ ದೊಡ್ಡವನಾಗಿರಲಿ, ಪ್ರಾಜ್ಞನೇ ಆಗಿರಲಿ, ಶೂರನೇ ಆಗಿರಲಿ, ಸ್ಥಿರವಾದ ಬುದ್ಧಿಯನ್ನು ಹೊಂದಿರಲಿ; ಏನೇ ಆಗಿದ್ದರೂ ಸಹ ಆಸೆ ಎನ್ನುವುದು ಒಂದೇ ಒಂದು ನಿಮಿಷದಲ್ಲಿ ಅವನನ್ನು ಹುಲ್ಲುಕಡ್ಡಿಗೆ ಸಮನಾಗಿ ಮಾಡಿ ಬಿಡುತ್ತದೆ ॥ ಯೋಗ ವಾಸಿಷ್ಠ 17:50 ॥

Leave a Reply