ಸಕಲ ಧರ್ಮಗಳ ಸಾರ ಇದು… : ದಿನಕ್ಕೊಂದು ಸುಭಾಷಿತ

ಈ ಶ್ಲೋಕ ಉತ್ತರಾರ್ಧದಲ್ಲಿ ಸಕಲ ಧರ್ಮ ಸಾರವಿದೆ. “ಪರೋಪಕಾರವೇ ಪುಣ್ಯ, ಪರಪೀಡೆಯೇ ಪಾಪ!” ಇದಕ್ಕಿಂತ ಉತ್ತಮವಾದ ಬೋಧನೆ ಯಾವುದಿದೆ!?


ಶ್ಲೋಕಾರ್ಧೇನ ಪ್ರವಕ್ಷಾಮಿ,
ಯದುಕ್ತಂ ಗ್ರಂಥಕೋಟಿಭಿಃ |
ಪರೋಪಕಾರಃ ಪುಣ್ಯಾಯ,
ಪಾಪಾಯ ಪರಪೀಡನಂ ||
ಒಮ್ಮೆ ಒಬ್ಬನು ವ್ಯಾಸರ ಬಳಿ ಬಂದು ಹದಿನೆಂಟು ಪುರಾಣಗಳನ್ನು ಓದಿದರೂ, ಶ್ರುತಿ ಸ್ಮೃತಿ ಗಳನ್ನು ಅಭ್ಯಾಸ ಮಾಡಿದರೂ ಧರ್ಮ ಸೂಕ್ಷ್ಮವನ್ನು ತಿಳಿಯಲು ಸಾಧ್ಯವಾಗಲಿಲ್ಲ ಎಂದನು. ಅದಕ್ಕೆ ವ್ಯಾಸರು ಅರ್ಧ ಶ್ಲೋಕದಲ್ಲಿ ನಾನು ಅವೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಮೇಲಿನ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.
‘ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; “ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ” – ಇದು ಈ ವ್ಯಾಸ ಸುಭಾಷಿತದ ಅರ್ಥ.
ಅತ್ಯಂತ ಸರಳವಾಗಿರುವ ಈ ಶ್ಲೋಕಕ್ಕೆ ವಿವರಣೆ ಬೇರೆ ಬೇಕೆ? ಅನುಸರಣೆಯೊಂದೇ ಬಾಕಿ!

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.