ಪ್ರಶ್ನೆಗೆ ಪ್ರೇಮಿಯುತ್ತರ; ರಮದಾನ್ ಕಾವ್ಯ ವ್ರತ | ಸೂಫಿ Corner

ಮೂಲ: ಖುಸ್ರೋ | ಕನ್ನಡಕ್ಕೆ: ಸುನೈಫ್
ನಾನು ಕೇಳಿದೆ,
ಚಂದಿರನಿಗೂ ಮಿಗಿಲು ಯಾವುದು?
ಉತ್ತರ ಬಂತು,
ನನ್ನ ಸುಂದರ ಮುಖ
ಸಕ್ಕರೆಗಿಂತಲೂ ಸಿಹಿ ಯಾವುದದು?
ನನ್ನ ಮಾತು

ಪ್ರೇಮಿಗಳ ದಾರಿ ಯಾವುದು?
ನಿಯ್ಯತ್ತಿನ ಹಾದಿ
ನನ್ನೊಂದಿಗಾದರೂ ಒರಟಾಗಿರಬೇಡ
ಹೀಗಿರುವುದೇ ಕಾಯಕ

ಪ್ರೇಮಿಗಳಿಗೆ ಸಾವು ಎಂದರೇನು?
ನನ್ನಿಂದ ಅಗಲುವ ಕ್ಷಣ
ಬದುಕಿನ ದರ್ದಿಗೆ ಇಲಾಜು?
ನನ್ನ ಮುಖವನ್ನೊಮ್ಮೆ ನೋಡುವುದು

ವಸಂತ, ಶರತ್ಕಾಲಗಳು?
ಬದಲಾಗುವ ನನ್ನ ಸೌಂದರ್ಯ.
ಚಿಗರೆಗಳ ಶತ್ರು?
ನನ್ನ ಚುರುಕಿನ ನಡಿಗೆ.

ಯಾರು ನೀನು? ಮಲಕ್ ಅಥವಾ ಹೂರ್?
ಸೌಂದರ್ಯದ ದೊರೆ ನಾನು!
ಖುಸ್ರೋ ಅಸಹಾಯಕನಾಗಿದ್ದಾನೆ...
ಅದಕೇನಂತೆ? ಅವ ನನ್ನ ಪ್ರೇಮಿ!

Leave a Reply