ಪ್ರೇಮವೇ ದಾರಿ, ಪ್ರೇಮವೇ ಧರ್ಮ; ರಮದಾನ್ ಕಾವ್ಯ ವ್ರತ | ಸೂಫಿ Corner

ಮೂಲ :  ಇಬ್ನ್ ಅರಬಿ | ಕನ್ನಡಕ್ಕೆ: ಸುನೈಫ್
ನನ್ನ ಹೃದಯಕೆ
ಹಲವು ರೂಪಗಳು;

ಚಿಗರೆಗಳ ಬಯಲು
ಸಂತರ ಕುಟೀರ

ಮೂರ್ತಿಗಳಿಗೆ ದೇವಾಲಯ
ಕಾಬಾವಿದು ತೀರ್ಥಯಾತ್ರಿಕರಿಗೆ

ತೌರಾತಿನ ಫಲಕಗಳು
ಕುರಾನಿನ ಪುಟಗಳು
ಎಲ್ಲವೂ ನನ್ನ‌ ಹೃದಯ

ಮತ್ತು,
ಪ್ರೇಮವೇ ನನ್ನ ನಂಬಿಕೆ
ಪ್ರೇಮದ ಕಾರವಾನು ಹೊರಟ ದಿಕ್ಕು
ನನಗೆ ದಾರಿ ಮತ್ತು ಧರ್ಮ

Leave a Reply