ಗ್ರಹಿಸಿದಷ್ಟು ಜ್ಞಾನ : ಇಂದಿನ ಸುಭಾಷಿತ

ಇಂದಿನ ಸುಭಾಷಿತ ಉತ್ತರ ರಾಮಚರಿತದಿಂದ …

ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇ |
ನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ||
ಭವತಿ ಚ ಪುನರ್ಭೂಯಾನ್ ಭೇದಃ ಫಲಂ ಪ್ರತಿ ತದ್ಯಥಾ |
ಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ ||

ಗುರುವು ದಡ್ಡರಿಗೂ ಜಾಣರಿಗೂ ಕೂಡಿಯೇ ಸಮಾನವಾಗಿಯೇ ವಿದ್ಯೆಯನ್ನು ಕಲಿಸುತ್ತಾನೆ. ಆದರೆ ಅವರಿಬ್ಬರ ಬುದ್ಧಿಶಕ್ತಿಯಲ್ಲಿ ಭೇದವಿರುವುದು. ಅವರ ಗ್ರಹಣಶಕ್ತಿಯು ಗುರುವಿನ ಅಧೀನವಲ್ಲ. ಸೂರ್ಯನ ಕಿರಣಗಳು ಮಣಿಗಳಲ್ಲಿ ಹಾಯ್ದುಹೋಗುವುದರಿಂದ ಅವು ಬೆಳಕು ಬೀರುವವು. ಆದರೆ ಮಣ್ಣಿನಲ್ಲಿ ಸೂರ್ಯಕಿರಣಗಳು ಹಾಗೆ ಹಾಯಲಾರವು.

Leave a Reply