ಇಂದಿನ ಸುಭಾಷಿತ

“ಕೊನೆಗೂ ಉಳಿಯುವುದು ಧರ್ಮವೊಂದೇ…” ಅನ್ನುತ್ತದೆ ಈ ಸುಭಾಷಿತ. ಇಲ್ಲಿ ಧರ್ಮ ಅಂದರೆ ಸತ್ಕರ್ಮ ಮತ್ತು ನೈತಿಕತೆ.

ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ
ಆಪಾತಮಾತ್ರ ಮಧುರೋ ವಿಷಯೋಪಭೋಗಃ
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ

ಗಾಳಿಗೆ ಸಿಕ್ಕಿದ ಮೋಡವೆಷ್ಟು ಅಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಆಸ್ಥಿರವಾದದ್ದು. ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರವೆಂದೆನಿಸುವವು.
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಇಬ್ಬನಿ ಯ ಹಾಗೆ ನಮ್ಮ ಪ್ರಾಣವು ಕೂಡ ಕ್ಷಣಿಕ.
ಪರಲೋಕ ಪ್ರಯಾಣದಲ್ಲಿ ನಮ್ಮೊಂದಿಗಿರುವ ಪರಮಸಖ ಧರ್ಮವೊಂದೇ ಅಲ್ಲವೇ?

Leave a Reply