ಸುಳ್ಳರ ಮಾತು, ಸತ್ಯವಂತರ ಮಾತು… | ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ಅಸದ್ಭಿಃ ಶಪಥೇನ ಉಕ್ತಂ ಜಲೇ ಲಿಖಿತಂ ಅಕ್ಷರಂ | 
ಸದ್ಭಿಃ ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮ್ ಅಕ್ಷರಮ್ ||

ಅರ್ಥ: ಸತ್ಯವಂತರಲ್ಲದವರು (ಸುಳ್ಳರು) ಪ್ರಮಾಣ ಮಾಡಿ ಹೇಳಿದರೂ, ಅದು ನೀರ ಮೇಲಿನ ಬರಹದಂತೆ ಅಲ್ಪಾಯುಷಿಯಾಗಿ ಹೊರಟುಹೋಗುತ್ತದೆ. ಆದರೆ, ಸತ್ಯವಂತರು ಸುಮ್ಮನೆ ಆಡಿದ ಮಾತು ಕೂಡಾ ಶಿಲಾಶಾಸನದಂತೆ ದೀರ್ಘಕಾಲ ದೃಢವಾಗಿ ಉಳಿಯುತ್ತದೆ.

Leave a Reply