Thich Nhat Hanhರ ಒದು ಝೆನ್ ಪದ್ಯ. ಕನ್ನಡಕ್ಕೆ : ಚಿದಂಬರ ನರೇಂದ್ರ
ಒಂದು
ಕಪ್ಪೆಯನ್ನು ತಟ್ಟೆಯಲ್ಲಿಟ್ಟಾಗ
ಕೆಲ ಕ್ಷಣಗಳ ನಂತರ ಕಪ್ಪೆ
ತಟ್ಟೆಯಿಂದ ಆಚೆ ಜಿಗಿಯುತ್ತದೆ.
ಮತ್ತೆ ಆ ಕಪ್ಪೆಯನ್ನು ತಂದು
ತಟ್ಟೆಯ ಮಧ್ಯೆ ಇಟ್ಟಾಗ
ಮತ್ತೆ ಜಿಗಿಯುತ್ತದೆ ಕಪ್ಪೆ
ತಟ್ಟೆಯಿಂದ ಆಚೆ
ನಿಮ್ಮ ಯೋಜನೆಗಳು ಸಾಕಷ್ಟು
ಏನೋ ಆಗಬೇಕೆಂದುಕೊಂಡಿದ್ದೀರಿ
ಹಾಗಾಗಿಯೇ ನೀವು
ದಾಟಿ ಹೋಗಬಯಸುತ್ತೀರಿ
ದೊಡ್ಡದೊಂದು ಹಾರುವಿಕೆಯನ್ನ
ಎದುರು ನೋಡುತ್ತಿದ್ದೀರಿ.
ಕಪ್ಪೆಯನ್ನು
ತಟ್ಟೆಯ ನಡುವೆ ಸುಮ್ಮನಿರಿಸುವುದು
ಸಾಧ್ಯವಿಲ್ಲದ ಮಾತು
ನಿಮ್ಮಲ್ಲಿ
ಮತ್ತು ನನ್ನಲ್ಲಿ ಬುದ್ಧ ಸ್ವಭಾವವಿದೆ
ಇದು ಧೈರ್ಯ ತುಂಬುವ ವಿಷಯ
ಆದರೆ ನನ್ನಲ್ಲಿ ಮತ್ತು ನಿಮ್ಮಲ್ಲಿ ಇದೆ
ಕಪ್ಪೆಯ ಸ್ವಭಾವವೂ
ಹಾಗಾಗಿ ಸಾಧನೆ
ಬುದ್ಧನಾಗುವುದಲ್ಲ ಕಪ್ಪೆಯಾಗದಿರುವುದು
ಬುದ್ಧ ಅಲ್ಲೇ ಇರುತ್ತಾನೆ, ಹೋಗುವುದಿಲ್ಲ
ಎಲ್ಲಿಯೂ.
Thich Nhat Hanh | ಕನ್ನಡಕ್ಕೆ : ಚಿದಂಬರ ನರೇಂದ್ರ