ಸಂತ ರವಿದಾಸರ ದೋಹೆಗಳು : ಬೆಳಗಿನ ಹೊಳಹು

ಮೂಲ : ಸಂತ ಕವಿ ರವಿದಾಸ | ಕನ್ನಡಕ್ಕೆ : ಎಚ್. ಎಸ್ ಶಿವಪ್ರಕಾಶ್

ಹೇಳಿದ ರೈದಾಸ: ಯಾವ ಹೃದಯದಲ್ಲಿ
ನಿಶಿದಿನ ಇರುವನು ರಾಮ
ಅಲ್ಲಿ ಮೂಡದು ಕಾಮ ಕ್ರೋಧ
ಅದೇ ದೇವರ ಸಮ

ರವಿದಾಸ ಜನುಮದ ಕಾರಣ
ಯಾರೂ ಕೀಳಲ್ಲ
ಅವರು ನೀಚರಾಗುವುದು
ಕೀಳು ಕರ್ಮಫಲ

ಕರ್ಮವನೆಂದೂ ಮಾಡಿರಿ
ಫಲದ ಆಸೆ ತೊರದು
ಕರ್ಮವೆ ಧರ್ಮ ನರರಿಗೆ
ರವಿದಾಸನ ಮಾತಿದು

ಜಾತಿಯೊಳಗೆ ಜಾತಿಯಿದೆ
ಎಲೆ ಕೆಳಗೆ ಎಲೆಯ ಹಾಗೆ
ರವಿದಾಸ, ನರರೊಂದಾಗರು
ಜಾತಿಯಿರುವವರೆಗೆ

ಮನದಲೆ ಪೂಜೆ
ಮನದಲೆ ಧೂಪ
ಮನದಲೆ ಸೇವೆ
ಸಹಜ ಸ್ವರೂಪ

Leave a Reply