ಹೊಸ ಒಡಂಬಡಿಕೆಯಲ್ಲಿ having ಮತ್ತು being… : To have or to be #22

ಮೂಲ: ಎರಿಕ್ ಫ್ರಾಮ್ । ಕನ್ನಡಕ್ಕೆ: ಚಿದಂಬರ ನರೇಂದ್ರ.

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2023/04/30/from-2/

ಹಳೆಯ ಒಡಂಬಡಿಕೆಯಲ್ಲಿನ, ಅಸ್ತಿತ್ವದ having ಸಂರಚನೆಯ ವಿರುದ್ಧದ ಪ್ರತಿಭಟನೆಯನ್ನ ಹೊಸ ಒಡಂಬಡಿಕೆ ಮುಂದುವರೆಸುತ್ತದೆ. ಹೊಸ ಒಡಂಬಡಿಕೆಯ ಪ್ರತಿಭಟನೆ ಹಿಂದಿನ ಜ್ಯೂಯಿಶ್ ಪ್ರತಿಭಟನೆಗಿಂತಲೂ ಅಮೂಲಾಗ್ರವಾಗಿತ್ತು. ಹಳೆಯ ಒಡಂಬಡಿಕೆ, ಬಡವರು ಮತ್ತು ದುರ್ಬಲ ವರ್ಗದವರು ರೂಪಿಸಿದ್ದಾಗಿರದೇ, ಅಲೆಮಾರಿ ಕುರಿಗಾಹಿಗಳು ಹಾಗು ಸ್ವತಂತ್ರ ರೈತ ಸಮುದಾಯದಿಂದ ಮೂಡಿಬಂದಂಥದು. ಸಾವಿರ ವರ್ಷಗಳ ನಂತರ, ಫರಿಸಾಯರು (Pharisees), ಪುರಾತನ ಜ್ಯೂಯಿಶ್ ಸಂಪ್ರದಾಯದ ಓದು ಬರಹ ಕಲಿತ ಜನ, ಯಾರ ಸಾಹಿತ್ಯಿಕ ಕೃತಿಯಾಗಿ ಯಹೂದಿಗಳ ಸಾಂಪ್ರದಾಯಿಕ ಕಾನೂನು Talmud ಮೂಡಿ ಬಂದಿತೋ ಅವರು ಮಧ್ಯ ವರ್ಗವನ್ನು (ಹಾಗೆಂದರೆ ಕೆಲವು ಅತೀ ಬಡವರಿಂದ ಹಿಡಿದು ಕೆಲವು ತುಂಬ ಸ್ಥಿತಿವಂತರನ್ನು ಒಳಗೊಂಡ ಗುಂಪು) ಪ್ರತಿನಿಧಿಸಿದರು. ಎರಡು ಗುಂಪುಗಳಲ್ಲೂ ಸಾಮಾಜಿಕ ನ್ಯಾಯದ, ಬಡವರ ರಕ್ಷಣೆಯ, ಎಲ್ಲ ದುರ್ಬಲರಿಗೆ ಸಹಾಯ ಮಾಡುವ (ಉದಾಹರಣೆಗೆ ವಿಧವೆಯರ, ರಾಷ್ಟ್ರೀಯ ಅಲ್ಪಸಂಖ್ಯಾತರ (gerim) ) ಸ್ಪೂರ್ತಿ ತುಂಬಿಕೊಂಡಿತ್ತು. ಆದರೆ ಅವರು ಇಡಿಯಾಗಿ ಸಂಪತ್ತನ್ನು ಕೇಡು ಎಂದು ಅಥವಾ, being ನ ತತ್ವಗಳಿಗೆ ಇದು ಸರಿಹೊಂದದು ಎಂದು ಖಂಡಿಸಲಿಲ್ಲ (See Louis Finnkelstein’s book on The Pharisees)

ಇದಕ್ಕೆ ವ್ಯತಿರಿಕ್ತವಾಗಿ ಮೊದಮೊದಲಿನ ಕ್ರಿಶ್ಚಿಯನ್ನರದ್ದು ಮುಖ್ಯವಾಗಿ ಬಡವರ ಮತ್ತು ಸಾಮಾಜಿಕವಾಗಿ ತಿರಸ್ಕೃತರ, ಬಹಿಷ್ಕೃತರ, ಶೋಷಿತರ ಗುಂಪಾಗಿತ್ತು. ಕೆಲವು ಹಳೆಯ ಒಡಂಬಡಿಕೆಯ ಪ್ರವಾದಿಗಳಂತೆ ಅವರು ಶ್ರೀಮಂತರನ್ನ, ಪ್ರಭಾವಶಾಲಿಗಳನ್ನ ನಿಂದಿಸಿದರು, ಸಂಪತ್ತು ಮತ್ತು ಸೆಕ್ಯುಲರ್ ಹಾಗು ಪುರೋಹಿತಶಾಹಿ ಅಧಿಕಾರಗಳನ್ನು ಖಡಾಖಂಡಿತ ಕೇಡು ಎನ್ನುವುದನ್ನ ಕಾಂಪ್ರಮೈಸ್ ಮಾಡಿಕೊಳ್ಳದೆ ಖಂಡಿಸಿದರು (see the dogma of Christ). ಖಂಡಿತ, ಪರ್ವತ ಶಿಖರದ ಮೇಲೆ ನಡೆದ ಧರ್ಮೋಪದೇಶ (sermon) ಗುಲಾಮಗಿರಿಯ ವಿರುದ್ಧದ ಮಹಾ ದಂಗೆಯ ಭಾಷಣವಾಗಿತ್ತು. ಮೊದಮೊದಲಿನ ಕ್ರಿಶ್ಚಿಯನ್ನರ ಮನಸ್ಥಿತಿ ಪೂರ್ಣ ಮಾನವ ಒಗ್ಗಟ್ಟಿನದಾಗಿತ್ತು, ಕೆಲವೊಮ್ಮೆ ಎಲ್ಲ ಭೌತಿಕ ವಸ್ತುಗಳ ಸ್ವಾಭಾವಿಕ ಸಾಮುದಾಯಿಕ ಹಂಚಿಕೆಯ ಐಡಿಯಾದಲ್ಲಿ ಅಭಿವ್ಯಕ್ತಿಗೊಂಡಂತೆ (A.F Utz discusses the early Christian communal ownership and earlier Greek examples of whom Luke probably knew).

ಮೊದಲಿನ ಕ್ರಿಶ್ಚಿಯನ್ ರಲ್ಲಿನ ಈ ಕ್ರಾಂತಿಕಾರಿ ಸ್ಪಿರಿಟ್ ಹೆಚ್ಚು ಸ್ಪಷ್ಟವಾಗಿ, ಜ್ಯೂಡಾಯಿಸಂ ನಿಂದ ಇನ್ನೂ ಪ್ರತ್ಯೇಕವಾಗದ ಕ್ರಿಶ್ಚಿಯನ್ ಸಮುದಾಯಗಳಿಗೆ ಪರಿಚಿತವಾಗಿದ್ದ ಏಸುವಿನ ಉಪದೇಶಗಳ (gospels) ಅತ್ಯಂತ ಹಳೆಯ ಭಾಗಗಳಲ್ಲಿ ಕಾಣಸಿಗುತ್ತದೆ. [ ಗಾಸ್ಪಲ್ ನ ಆ ಹಳೆಯ ಭಾಗಗಳನ್ನ ಮ್ಯಾಥ್ಯೂ ಮತ್ತು ಲ್ಯೂಕ್ ರ ಕಾಮನ್ ಮೂಲದಿಂದ ಪುನರ್ನಿರ್ಮಾಣ ಮಾಡಬಹುದು ಮತ್ತು ಹೊಸ ಒಡಂಬಡಿಕೆಯ ಇತಿಹಾಸದ ತಜ್ಞರು ಇದನ್ನ “Q” ( Q from German Quelle, “sources”) ಎಂದು ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಮೂಲಭೂತ ಕಾರ್ಯ ಮಾಡಿದ್ದು Siegried Schulz, ಅವನು ಹೊಸ ಮತ್ತು ಹಳೆ “Q” ಸಂಪ್ರದಾಯಗಳಲ್ಲಿನ ವಿಭಿನ್ನತೆಗಳನ್ನು ಪಟ್ಟಿ ಮಾಡಿದವನು. ]*

ಈ ಹೇಳಿಕೆಗಳಲ್ಲಿ ನಾವು ಕಾಣುವ ಕೇಂದ್ರ ಆಧಾರ ಸೂತ್ರ ಏನೆಂದರೆ ಜನ ತಮ್ಮನ್ನು ತಾವು ಸ್ವಾಧೀನತೆಯ ಎಲ್ಲ ದುರಾಸೆಗಳಿಂದ, ತುಡಿತಗಳಿಂದ ಮುಕ್ತಗೊಳಿಸಿಕೊಳ್ಳಬೇಕು ಹಾಗು, having ನ ಸಂರಚನೆಯಿಂದ ಸಂಪೂರ್ಣ ಬಿಡುಗಡೆ ಹೊಂದಬೇಕು ಎನ್ನುವುದು. ಹಾಗು ಎಲ್ಲ ಧನಾತ್ಮಕ ನೈತಿಕ ರೂಢಿಗಳ ಬೇರು ಇರುವುದು being ನ, ಹಂಚಿಕೊಳ್ಳುವ (sharing) ಹಾಗು ಒಗ್ಗಟ್ಟಿನ ನೈತಿಕತೆಗಳಲ್ಲಿ (ethical solidarity) ಎನ್ನುವುದು. ಈ ಮೂಲಭೂತ ನೈತಿಕತೆಯನ್ನ, ಒಬ್ಬರ ಇನ್ನೊಬ್ಬರ ಜೊತೆಗಿನ ಸಂಬಂಧ ಹಾಗು ಒಬ್ಬರ ವಸ್ತುಗಳೊಡನೆಯ ಸಂಬಂಧ ಎರಡಕ್ಕೂ ಅನ್ವಯಿಸಬಹುದು. ಒಬ್ಬರ ಸ್ವಂತದ ಹಕ್ಕುಗಳ ಅಮೂಲಾಗ್ರ ತ್ಯಜಿಸುವಿಕೆ (Matthew 5:39-42; Luke 6:29f.) ಹಾಗು ಒಬ್ಬರು ವೈರಿಯನ್ನು ಪ್ರೀತಿಸಲು ನೀಡಲಾಗಿರುವ ಆದೇಶ (Matthew 5:44-48; Luke 6:27 f., 32-36) ಎರಡೂ ಹಳೆಯ ಒಡಂಬಡಿಕೆಯ “love thy neighbor “ ಗಿಂತಲೂ ಹೆಚ್ಚು radical ಆಗಿವೆ, ಇನ್ನೊಬ್ಬ ಮನುಷ್ಯರ ಬಗ್ಗೆ ಸಂಪೂರ್ಣ ಸಹಾನುಭೂತಿ ವ್ಯಕ್ತಪಡಿಸುತ್ತ ಹಾಗು ಎಲ್ಲ ಬಗೆಯ ಸ್ವಾರ್ಥಗಳನ್ನ ಪೂರ್ಣವಾಗಿ ಶರಣಾಗಿಸುತ್ತ. ಇನ್ನೊಬ್ಬರನ್ನು ಜಡ್ಜ್ ಮಾಡಬಾರದು ಎನ್ನುವ ನಿಯಮ (norm) (Matthew 7:1-5; Luke 6:37 f., 41 f.) ಅಹಂ ನ ಮರೆತುಬಿಡುವಿಕೆ ಹಾಗು ಇನ್ನೊಬ್ಬರನ್ನು ತಿಳಿದುಕೊಳ್ಳುವ ಹಾಗು ಅವರ ಯೋಗಕ್ಷೇಮಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ತತ್ವದ ಮುಂದುವರಿಕೆಯಾಗಿದೆ.

ವಸ್ತುಗಳ ವಿಷಯದಲ್ಲಿ ಕೂಡ, having ಸಂರಚನೆಯ ಸಂಪೂರ್ಣ ತ್ಯಜಿಸುವಿಕೆಯನ್ನ ಒತ್ತಾಯಿಸಲಾಗಿದೆ. ಅತ್ಯಂತ ಹಳೆಯ ಸಮುದಾಯ, ಆಸ್ತಿಯ ಅಮೂಲಾಗ್ರ ತ್ಯಜಿಸುವಿಕೆಗಾಗಿ ಒತ್ತಾಯಿಸುತ್ತದೆ ; ಅದು ಸಂಪತ್ತು ಸಂಗ್ರಹಿಸುವುದರ ವಿರುದ್ಧ ಎಚ್ಚರಿಸುತ್ತದೆ : “ ನಿಮಗಾಗಿ ಭೂಮಿಯ ಮೇಲೆ ಯಾವ ಸಂಪತ್ತನ್ನೂ ಕೂಡಿಡಬೇಡಿ, ಅದನ್ನ ಹುಳುಗಳು ನಾಶ ಮಾಡಬಹುದು, ಅದಕ್ಕೆ ತುಕ್ಕು ಹಿಡಿಯಬಹುದು, ಅದನ್ನ ಕಳ್ಳರು ಕಳುವು ಮಾಡಬಹುದು. ನಿಮ್ಮ ಸಂಪತ್ತನ್ನ ಸ್ವರ್ಗದಲ್ಲಿ ಸಂಗ್ರಹಿಸಿ, ಅಲ್ಲಿ ಯಾವ ಹುಳು, ಯಾವ ತುಕ್ಕು ನಿಮ್ಮ ಸಂಪತ್ತನ್ನು ನಾಶ ಮಾಡುವುದು ಸಾಧ್ಯವಿಲ್ಲ, ನಿಮ್ಮ ಸಂಪತ್ತನ್ನು ಕದಿಯಲು ಅಲ್ಲಿ ಯಾವ ಕಳ್ಳನೂ ಇಲ್ಲ. ನಿಮ್ಮ ಸಂಪತ್ತು ಎಲ್ಲಿದೆಯೋ ಅಲ್ಲಿ ನಿಮ್ಮ ಹೃದಯವೂ ಇದೆ” (Matthew 6:19-21; Luke 12:33 f.). ಇದು ಜೀಸಸ್ ಹೇಳಿದ ಸ್ಪಿರಿಟ್ ನಲ್ಲೇ ಇದೆ : “ ನೀವು ಬಡವರು ಧನ್ಯರು, ನಿಮ್ಮದು ದೇವರ ರಾಜ್ಯ” (Luke 6:20; Matthew 5:3). ಹೌದು ಮೊದಮೊದಲಿನ ಕ್ರಿಶ್ಚಿಯಾನಿಟಿ, ಬಡವರ ಮತ್ತು ದುಃಖಿತರ ಸಮುದಾಯವಾಗಿತ್ತು, ಮತ್ತು ಅವರ ಕಾಲಜ್ಞಾನದ ಧೃಡ ವಿಶ್ವಾಸವೆಂದರೆ, ದೇವರ ಬಿಡುಗಡೆಯ ಯೋಜನೆಯ ಪ್ರಕಾರ, ಇರುವ ವ್ಯವಸ್ಥೆಯ ಅಂತಿಮ ಮಾಯವಾಗುವಿಕೆಗೆ ಕಾಲ ಹತ್ತಿರವಾಗುತ್ತಿದೆ.

ಕಾಲಜ್ಞಾನ ಪರಿಕಲ್ಪನೆಯ (apocalyptic concept) (ಅಂತಿಮ ನಿರ್ಣಯ) “Last judgement” , Messianic ಐಡಿಯಾದ ಒಂದು ಆವೃತ್ತಿ, current in Jewish circles of the time. ಅಂತಿಮ ಮೋಕ್ಷ ಮತ್ತು ನಿರ್ಣಯಕ್ಕಿಂತ ಮೊದಲು ಅರಾಜಕತೆಯ (chaos) ಮತ್ತು ವಿನಾಶದ ಅವಧಿ. ಈ ಅವಧಿ ಎಷ್ಟು ಭಯಾನಕವೆಂದರೆ, Talmudic ರಬ್ಬೀಗಳು ತಾವು messianic time ಪೂರ್ವದಲ್ಲಿ ಬದುಕುತ್ತಿರುವುದರಿಂದ ತಮ್ಮನ್ನು ಈ ವಿನಾಶದಿಂದ ಹೊರತಾಗಿಸಬೇಕು ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. ಕ್ರಿಶ್ಚಿಯಾನಿಟಿಯಲ್ಲಿ ಹೊಸದು ಏನಿತ್ತೆಂದರೆ ಜೀಸಸ್ ಮತ್ತು ಅವನ ಹಿಂಬಾಲಕರು ಆ ಸಮಯ “ಈಗ” (ಅಥವಾ ಹತ್ತಿರದ ಭವಿಷ್ಯದಲ್ಲಿ) ಎಂದು ನಂಬಿದ್ದರು ಮತ್ತು, ಅದು ಈಗಾಗಲೇ ಶುರುವಾಗಿದೆ ಜೀಸಸ್ ಕಾಣಿಸಿಕೊಳ್ಳುವುದರೊಂದಿಗೆ ಎಂದು ತಿಳಿದಿದ್ದರು.

ಹೌದು ಮೊದಲಿನ ಕ್ರಿಶ್ಚಿಯನ್ ರ ಪರಿಸ್ಥಿತಿಯನ್ನ ಇವತ್ತು ಜಗತ್ತಿನಲ್ಲಿ ಆಗುತ್ತಿರುವುದರೊಂದಿಗೆ ಹೋಲಿಕೆ ಮಾಡದೇ ಇರುವದಕ್ಕಾಗುವುದಿಲ್ಲ. ಸ್ವಲ್ಪ ಜನ ಮಾತ್ರ ಅಲ್ಲ, ಧಾರ್ಮಿಕರಷ್ಟೇ ಅಲ್ಲ, ವಿಜ್ಞಾನಿಗಳು ಕೂಡ (with the exception of the Jehovah’s Witnesses), ನಾವು ಜಗತ್ತಿನ ಅಂತಿಮ ದುರಂತವನ್ನ ಸಮೀಪಿಸುತ್ತಿದ್ದೇವೆ ಎನ್ನುವುದನ್ನ ನಂಬಿದ್ದಾರೆ. ಇದು ತಾರ್ಕಿಕ ಮತ್ತು ವೈಜ್ಞಾನಿಕವಾಗಿ ಸಮರ್ಥನೀಯವಾದ ದರ್ಶನ. ಆದರೆ ಮೊದಲಿನ ಕ್ರಿಶ್ಚಿಯನ್ ರ ಸ್ಥಿತಿ ಪೂರಾ ವಿಭಿನ್ನವಾಗಿತ್ತು. ಅವರು ಬದುಕಿದ್ದು ತನ್ನ ಅಮೋಘ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ರೋಮನ್ ಸಾಮ್ರಾಜ್ಯದ ಸಣ್ಣ ಭಾಗದಲ್ಲಿ. ಆಗ ಅಂತಿಮ ದುರಂತದ ಕುರಿತಾಗಿನ ಯಾವ ಮುನ್ಸೂಚನೆಯೂ ಇರಲಿಲ್ಲ. ಆದರೂ ಈ ಬಡವ ಪ್ಯಾಲೆಸ್ಟೈನ್ ಜ್ಯೂ ಗಳ ಸಣ್ಣ ಗುಂಪು, ಈ ಶಕ್ತಿಶಾಲಿ ಜಗತ್ತು ಆದಷ್ಟು ಬೇಗ ನಾಶವಾಗುತ್ತದೆ ಎನ್ನುವ ಧೃಡ ನಂಬಿಕೆಯನ್ನ ಹೊಂದಿದ್ದರು. ಆದರೆ ವಾಸ್ತವದಲ್ಲಿ ಇದು ಅವರ ತಪ್ಪುತಿಳುವಳಿಕೆಯಾಗಿತ್ತು. ಜೀಸಸ್ ನ ಪುನರ್ದರ್ಶನ ವಿಫಲವಾದ ಕಾರಣದಿಂದ, ಜೀಸಸ್ ನ ಸಾವು ಮತ್ತು ಪುನರುತ್ಥಾನವನ್ನ gospel ಗಳಲ್ಲಿ ಹೊಸ ಯುಗದ (eon) ಶುರುವಾತು ಎಂದು ವ್ಯಾಖ್ಯಾನ ಮಾಡಲಾಯಿತು, ಮತ್ತು ಚಕ್ರವರ್ತಿ ಕಾನ್ಸಟಂಟೈನ್ ನ ನಂತರ, ಜೀಸಸ್ ನ ಸಂಧಾನದ ಪಾತ್ರವನ್ನು (mediating role of Jesus) ಚರ್ಚನ ಪೋಪ್ (papal church) ರೀತಿಯ ಪಾತ್ರಕ್ಕೆ ಬದಲಾಯಿಸುವ ಪ್ರಯತ್ನ ಮಾಡಲಾಯಿತು. ಅಂತಿಮವಾಗಿ ಹೊಸ ಯುಗಕ್ಕೆ, ಥಿಯರಿಯಲ್ಲಿ ಅಲ್ಲದಿದ್ದರೂ ಪ್ರ್ಯಾಕ್ಟಿಕಲ್ ಆಗಿ ಚರ್ಚ ಬದಲಿ (substitute) ಎನ್ನುವಂತೆ ಸ್ಥಾಪಿತವಾಯಿತು.

(ಮುಂದುವರೆಯುತ್ತದೆ…)


(ಎರಿಕ್ ಫ್ರಾಂ ಬಹುಚರ್ಚಿತ ಕೃತಿ To have or To Be ಇನ್ನು ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸರಣಿಯಾಗಿ ಅರಳಿಮರದಲ್ಲಿ ಪ್ರಕಟಗೊಳ್ಳಲಿದೆ. ಫ್ರಾಂ ಅವರ “The art of Loving” ಅನುವಾದ ಮಾಡಿದ್ದ ಚಿದಂಬರ ನರೇಂದ್ರ ಅವರು ಅರಳಿಮರ ಓದುಗರಿಗಾಗಿ ಈ ಸರಣಿಯನ್ನು ಅನುವಾದಿಸುತ್ತಿದ್ದಾರೆ. )

Leave a Reply