“ನಾನು ದೇವರನ್ನು ನಂಬುತ್ತೇನೆ” ಎಂದು ನೀವು ಬೇಕಾದರೆ ಜೋರಾಗಿ ಕೂಗಿ ಹೇಳಬಹುದು ಆದರೆ ನಿಮ್ಮ ಕೂಗುವಿಕೆ ಏನನ್ನೂ ಸಾಬೀತು ಮಾಡುವುದಿಲ್ಲ. ನಿಮ್ಮ ಈ ಜೋರು ಕೂಗುವಿಕೆ ಸಾಬೀತು ಮಾಡುವ ಒಂದೇ ಒಂದು ಸಂಗತಿಯೆಂದರೆ, ನಿಮ್ಮೊಳಗೆ ಈ ಕುರಿತು ಇನ್ನೂ ಸಂಶಯ ಇದೆಯೆಂದು! ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಮಸೀದಿ ಮಿನಾರುಗಳು
ಗುಡಿ ಗೋಪುರಗಳು
ಉರುಳಿ ಬಿಳುವ ತನಕ
ನಿಜವಾದ ಶಾಂತಿ
ಒಳಗೆ ಇಳಿಯುವುದೇ ಇಲ್ಲ.
ನಂಬಿಕೆಯನ್ನು ದ್ರೋಹ ತುಳಿಯಬೇಕು
ದ್ರೋಹವನ್ನು ನಂಬಿಕೆ
ಕುಟ್ಟಿ ಪುಡಿ ಪುಡಿ ಮಾಡಬೇಕು
ಆಗ ಮಾತ್ರ ಮನುಷ್ಯ
ಮುಸ್ಲೀಂನಾಗಬಲ್ಲ, ಹಿಂದುವಾಗಬಲ್ಲ.
– ರೂಮಿ
**************
ಜ್ಞಾನದ ಮಾಹಿತಿ ಹೊಂದುವುದು ಬಹಳ ಸುಲಭ, ಬಹಳ ಸೋವಿ ಕೂಡ. ಆದರೆ ಜ್ಞಾನವನ್ನು ಮುಟ್ಟುವುದು, ಒಂದಾಗಿಸಿಕೊಳ್ಳುವುದು ಅತ್ಯಂತ ಕಷ್ಟಕರ, ತೀವ್ರ ಪ್ರಯಾಸಕರ. ಆದ್ದರಿಂದ ಕೆಲವೇ ಕೆಲವು ಜನ, ಬಹಳ ಅಪರೂಪದವರು ಮಾತ್ರ ಧ್ಯಾನಕ್ಕೆ ಮುಂದಾಗುತ್ತಾರೆ, ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಸತ್ಯವನ್ನು ಅರಿಯಲು ಹಾತೊರೆಯುತ್ತಾರೆ. ನಿಮ್ಮ ಬಳಿ ಇರುವ ಆದರೆ ನೀವು ತಿಳಿದುಕೊಳ್ಳದ ಜ್ಞಾನ ಅರ್ಥವಿಲ್ಲದ್ದು. ನಿಮಗೆ ಆ ಕುರಿತು ಯಾವತ್ತೂ ಖಚಿತತೆ ಇರುವುದಿಲ್ಲ. ಸಂಶಯ ಎಂದೂ ಮಾಯವಾಗುವುದಿಲ್ಲ, ಸಂಶಯ ಹಣ್ಣಿನ ಒಳಗಿನ ಹುಳುವಿನಂತೆ ನಿಮ್ಮ ಬಳಿ ಇರುವ ಜ್ಞಾನವನ್ನು ನಾಶಮಾಡುತ್ತಲೇ ಇರುತ್ತದೆ.
“ನಾನು ದೇವರನ್ನು ನಂಬುತ್ತೇನೆ” ಎಂದು ನೀವು ಬೇಕಾದರೆ ಜೋರಾಗಿ ಕೂಗಿ ಹೇಳಬಹುದು ಆದರೆ ನಿಮ್ಮ ಕೂಗುವಿಕೆ ಏನನ್ನೂ ಸಾಬೀತು ಮಾಡುವುದಿಲ್ಲ. ನಿಮ್ಮ ಈ ಜೋರು ಕೂಗುವಿಕೆ ಸಾಬೀತು ಮಾಡುವ ಒಂದೇ ಒಂದು ಸಂಗತಿಯೆಂದರೆ, ನಿಮ್ಮೊಳಗೆ ಈ ಕುರಿತು ಇನ್ನೂ ಸಂಶಯ ಇದೆಯೆಂದು. ನೀವು fanatic believer ಆಗಬಹುದು ಆದರೆ ನಿಮ್ಮ ತೀವ್ರವಾದಿತನ ಸಾಬೀತು ಮಾಡುವ ಒಂದೇ ಒಂದು ಅಂಶ ಏನೆಂದರೆ ನೀವಿನ್ನೂ ಸಂಶಯಗ್ರಸ್ತರು ಎನ್ನುವುದನ್ನ.
ತನ್ನೊಳಗೆ ಇನ್ನೂ ಸಂಶಯ ಉಳಿಸಿಕೊಂಡಿರುವ ಮನುಷ್ಯ ಮಾತ್ರ ಮತಾಂಧ ಆಗಬಹುದು. ಒಬ್ಬ ಮತಾಂಧ ಹಿಂದೂ ಎಂದರೆ, ಹಿಂದೂಯಿಸಂ ನಲ್ಲಿ ಪೂರ್ಣ ನಂಬಿಕೆಯಿಲ್ಲದವನು. ಮತಾಂಧ ಕ್ರಿಶ್ಚಿಯನ್, ಮತಾಂಧ ಮುಸ್ಲೀಂ ಎಂದರೆ, ಕ್ರಿಶ್ಚಿಯಾನಿಟಿಯಲ್ಲಿ, ಇಸ್ಲಾಂ ನ ಸತ್ಯಗಳಲ್ಲಿ ಸಂಪೂರ್ಣ ನಂಬಿಕೆಯಿಲ್ಲದವರು. ಜನ ಫನ್ಯಾಟಿಕ ಆಗುವುದು, ತೀವ್ರವಾದಿಗಳಾಗುವುದು ಇನ್ನೊಬ್ಬರಿಗೆ ತಮ್ಮ ನಂಬಿಕೆಗಳನ್ನು ಸಾಬೀತು ಮಾಡುವುದಕ್ಕಲ್ಲ ಬದಲಾಗಿ, ತಾವು ಏನನ್ನು ನಂಬಿದ್ದೇವೆ ಎಂದು ತಿಳಿದುಕೊಂಡಿದ್ದೇವೆಯೋ ಅದು ನಿಜ ಎಂದು ತಮ್ಮನ್ನು ತಾವು ಒಪ್ಪಿಸಿಕೊಳ್ಳುವುದಕ್ಕೆ. ತಾವು ನಂಬಿರುವುದನ್ನ ತಮಗೆ ತಾವೇ ಪ್ರೂವ್ ಮಾಡಿಕೊಳ್ಳುವುದಕ್ಕೆ.
ಯಾವಾಗ ನಿಮಗೆ ನಿಮ್ಮ ಧರ್ಮದ ಕುರಿತು ಯಾವ ಸಂಶಯಕ್ಕೂ ಆಸ್ಪದವಿಲ್ಲದ ನಿಜವಾದ ನಂಬಿಕೆ, ತಿಳುವಳಿಕೆ ಇದೆಯೋ ಆಗ ನೀವು ಮತಾಂಧರಾಗುವುದಿಲ್ಲ. ಪೂರ್ಣ ತಿಳುವಳಿಕೆಯ ಮನುಷ್ಯ, a man of knowing, ಯಾರು ದೇವರ ಕುರಿತು, ಅವನ ಅಸ್ತಿತ್ವದ ಕುರಿತು ಕೆಲವು ಹೊಳಹುಗಳನ್ನಾದರೂ ಹೊಂದಿದ್ದಾರೋ ಅವರು ಮೃದು, ಸೂಕ್ಷ್ಮ ಮತ್ತು fragile ಆಗಿರುತ್ತಾರೆ. ಅವರು ಫನ್ಯಾಟಿಕ್ ಆಗುವುದು ಸಾಧ್ಯವಿಲ್ಲ. ಅವರು feminine ಆಗಿರುತ್ತಾರೆ. ಅವರು ತೀವ್ರವಾದಿಗಳಾಗಿರುವುದಿಲ್ಲ, ಅಂತಃಕರುಣಿಗಳಾಗಿರುತ್ತಾರೆ.
ಒಂದು ದಿನ ಶುಕ್ರವಾರದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ನಸ್ರುದ್ದಿನ್ ನ ಹೆಂಡತಿ ಹೊರಬರುತ್ತಿದ್ದಂತೆಯೇ, ಮೌಲ್ವಿ ಸಾಹೇಬರು ಓಡುತ್ತ ಬಂದು ಆಕೆಯನ್ನ ಮಾತನಾಡಿಸಿದರು.
“ನಿನ್ನ ಗಂಡನಿಗೆ ಸಿಕ್ಕಾಪಟ್ಟೆ ಕೆಮ್ಮು, ಪ್ರಾರ್ಥನೆ ಮಾಡುವ ಜನ ಎಲ್ಲ ಅವನನ್ನೇ ನೋಡುತ್ತಿದ್ದರು. ಅವನನ್ನ ಒಳ್ಳೆಯ ಹಕೀಂರಿಗೆ ತೋರಿಸಿ ಔಷಧಿ ಕೊಡಿಸು”
“ ಹಾಗೇನಿಲ್ಲ ಮೌಲ್ವಿ ಸಾಹೇಬರೆ ಅವ ನಿನ್ನೆ ತಾನೇ ಖರೀದಿಸಿದ್ದ ಹೊಸ ಡ್ರೆಸ್ ಹಾಕಿಕೊಂಡಿದ್ದ ಅಷ್ಚೇ “
ನಸ್ರುದ್ದೀನ್ ನ ಹೆಂಡತಿ ಉತ್ತರಿಸಿದಳು.
OSHO: The Art of Dying: Talks on Hassidism
Chapter_5: Peasant Wisdom

