ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #2

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಮ್ಮ ಬಹಳಷ್ಟು ಸಮಸ್ಯೆಗಳು ಶುರುವಾಗೋದೇ ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ ಮತ್ತು ಕೆಲವು ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ. ಶಬ್ದಗಳನ್ನು ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ. ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ ನಾವು ಕಲಿತಿರುವ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಯಾವುದನ್ನ ಶಬ್ದಗಳ ಮೂಲಕ ಹೇಳಲಾಗುವುದಿಲ್ಲವೋ ಅವನ್ನೆಲ್ಲ ಮೌನದ ಮೂಲಕ ಅರ್ಥಮಾಡಿಕೊಳ್ಳಲಾಗುತ್ತದೆ. ಮೊದಲನೆ ನಿಯಮ ಇಲ್ಲಿ ನೋಡಿ : https://aralimara.com/2019/11/14/rules/

ದೀಪದಿನಂ ಹರತು ವೋ ದುರಿತಂ : ದೀಪಾವಳಿ ಶುಭಾಶಯ

ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ… ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಂ| ರಾಮಾಯಣಮಿದಂ ಸುಭಗಂ ದೀಪದಿನಂ ಹರತು ವೋ ದುರಿತಂ || ಭವಿಷ್ಯೋತ್ತರ ಪುರಾಣ || ಅರ್ಥ: ರಾಮಾಯಣದಲ್ಲಿ ಮೇಘನಾದನು (ರಾವಣನ ಮಗ ಇಂದ್ರಜಿತ್) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿಯು ನಮ್ಮ ಸಂಕಷ್ಟಗಳನ್ನು ಹೋಗಲಾಡಿಸಲಿ. […]

ನೀರು ತುಂಬುವ ಹಬ್ಬದಂದು ಹೇಳಬೇಕಾದ ಶ್ಲೋಕ ಯಾವುದು?

ಆಶ್ವೀಜದ ಚತುರ್ದಶಿಯಂದು ‘ಅಭ್ಯಂಜನ ಸ್ನಾನ’. ಈ ದಿನ ಯಾಕೆ ನರಕ ತ್ರಯೋದಶಿ ಅನ್ನುವ ಕಥೆಯನ್ನು ನಾಳೆಯೇ ಓದೋಣ. ಮರುದಿನದ ಅಭ್ಯಂಗಕ್ಕಾಗಿ ತ್ರಯೋದಶಿ ಸಂಜೆ ನೀರು ತುಂಬುವ ಸಂಭ್ರಮವೇ ಈ ದಿನದ ಹಬ್ಬ. ಇಂದು ಸಂಜೆ ಕೆಲವರ ಮನೆಗಳಲ್ಲಿ ‘ನೀರು ತುಂಬುವ ಹಬ್ಬ’ ಆಚರಿಸಲಾಗುತ್ತದೆ ಅಲ್ಲವೆ? ಹಿಂದೆಲ್ಲಾ ಹಂಡೆಗಳು, ತೊಟ್ಟಿಗಳು ಇರುತ್ತಿದ್ದವು. ಈಗ ಮನೆಯ ಮೇಲೆ ಸಿಂಟೆಕ್ಸ್, ಬಚ್ಚಲಿನಲ್ಲಿ ನಲ್ಲಿ ಇದೆ. ಹಾಗಂತ ಹಬ್ಬವನ್ನು ಅಟ್ಟ ಹತ್ತಿಸಲಾದೀತೆ? ಖಂಡಿತ ಇಲ್ಲ! ಹಾಗೆಂದೇ ನಮ್ಮ ಅಮ್ಮಂದಿರು ನಲ್ಲಿ – ಪೈಪುಗಳಿಗೆಲ್ಲ […]

ಮುಕ್ತಿ ಮಾರ್ಗದಲ್ಲಿ ನಡೆಸುವ 7 ಬಗೆಯ ತ್ಯಾಗಗಳು

ನಮ್ಮ ಆಧ್ಯಾತ್ಮ ಶಾಸ್ತ್ರದಲ್ಲಿ ತ್ಯಾಗವನ್ನು ಏಳು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಆ ಎಳು ತ್ಯಾಗಗಳನ್ನು ಪ್ರಪಂಚದ ಪ್ರತಿಯೊಬ್ಬರೂ ಸಹ ಆಚರಿಸಬಹುದಾಗಿದೆ ಹಾಗೂ ತನ್ಮೂಲಕ ಮಾನವ ಜೀವನದ ಸರ್ವೋಚ್ಚ ಪ್ರಯೋಜನವಾದ ಮೋಕ್ಷವನ್ನು ಪಡೆಯಬಹುದಾಗಿದೆ. ಭಾರತೀಯ ಶಾಸ್ತ್ರ, ಸಾಹಿತ್ಯ, ಜಾನಪದ ಮುಂತಾದ ಎಲ್ಲ ಕಡೆಗಳಲ್ಲಿ ಆಧ್ಯಾತ್ಮಿಕ ಸಾಧನೆಯ ಅಂತಿಮ ಪ್ರಯೋಜನವಾದ “ಬಿಡುಗಡೆ”ಯನ್ನು ಮುಕ್ತಿ, ಭಗತ್ಪ್ರಾಪ್ತಿ, ನಿರ್ವಾಣ, ಮೋಕ್ಷ, ಕೈವಲ್ಯ ಮುಂತಾದ ಅನೇಕ ಹೆಸರುಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಹೇಳಿದ್ದಾರೆ. ಅಂತಹ ಮುಕ್ತಿಯನ್ನು ಪಡೆಯಬೇಕಾದರೆ ಸಾಮಾಜಿಕ ಮತ್ತು ಸಾಂಸಾರಿಕ ಜೀವನವನ್ನು ಬಿಟ್ಟು ಕಾಡಿಗೆ ಹೋಗಿ […]

ಸುಂದರ ದೇಹ, ಸ್ವಸ್ಥ ಮನಸಿಗಾಗಿ ಸ್ಪಿರಿಚುವಲ್ ಡಯೆಟ್

ಪ್ರಾರ್ಥಿಸಿ ಉಣ್ಣುವ ಉಣಿಸು ನಮಗೆ ಆಹಾರದ ಬಗ್ಗೆ ಪ್ರೀತಿಯನ್ನೂ ಗೌರವವನ್ನೂ ಉಂಟು ಮಾಡುತ್ತದೆ. ಪ್ರೀತಿಪೂರ್ಣ ಮನಸ್ಸು ಆರೋಗ್ಯಪೂರ್ಣವೂ ಆಗಿರುತ್ತದೆ ಮತ್ತು ಆರೋಗ್ಯಪೂರ್ಣ ಮನಸ್ಸು ದೇಹವನ್ನೂ ಸ್ವಸ್ಥವಾಗಿಡುತ್ತದೆ. ಸ್ವಸ್ಥ ದೇಹ ಸಹಜವಾಗಿ ಸುಂದರವಾಗಿರುತ್ತದೆ ~ ಚಿತ್ಕಲಾ ಮೊಟ್ಟ ಮೊದಲಿಗೆ, ಇಲ್ಲಿ ‘ಸುಂದರ ದೇಹ’ ಎಂದು ಹೇಳಿರುವುದು ಗ್ಲಾಮರ್ ಆಧಾರಿತ ಸೌಂದರ್ಯವನ್ನಲ್ಲ. ಬಣ್ಣ, ಎತ್ತರ, ಸುತ್ತಳತೆ ಇತ್ಯಾದಿಗಳ ಮಾಪನವನ್ನು ಇಲ್ಲಿ ಸುಂದರ ಎಂದು ಕರೆಯಲಾಗಿಲ್ಲ. ನಾವು ಪಡೆದುಬಂದ ದೇಹವನ್ನು ರೋಗರಹಿತವಾಗಿ, ಸ್ವಚ್ಛ – ಶುಭ್ರವಾಗಿ, ಕಾಂತಿಯುತವಾಗಿ ಇಟ್ಟುಕೊಳ್ಳುವುದೇ ಸೌಂದರ್ಯದ ಮಾಪನ. […]

ಮಹಾಗಿರಿ ಎಂಬ ಆನೆ #ಮಕ್ಕಳ ಕಥೆ ~ 2

ಮಹಾಗಿರಿ ಒಂದು ದೊಡ್ಡ ಆನೆ. ಎಷ್ಟು ದೊಡ್ಡದೆಂದರೆ, ಮಕ್ಕಳು ಅದರ ಬಳಿ ಹೋಗಲು ಹೆದರುತ್ತಿದ್ದರು. ಅದು ಒಬ್ಬ ವ್ಯಾಪಾರಿಗೆ ಸೇರಿದ ಆನೆಯಾಗಿತ್ತು. ಆತ ಅದನ್ನು ಹೊರಗೆ ಕೆಲಸಕ್ಕೆ ಕಳಿಸಿ ಬಹಳಷ್ಟು ಹಣ ಸಂಪಾದನೆ ಮಾಡಿಕೊಂಡಿದ್ದನು…. ಏನು ಈ ಆನೆಯ ಕಥೆ? ಹೇಮಲತಾ ಅವರು ಬರೆದು, ಕೆ.ಜಿ. ರಾಜಲಕ್ಷ್ಮಿ ಅನುವಾದಿಸಿರುವ ಮತ್ತು ಪುಲಕ್ ಬಿಸ್ವಾಸ್ ಚಿತ್ರಗಳಿರುವ ಈ ಚೆಂದದ ಪುಸ್ತಕದಲ್ಲಿದೆ, ಮಕ್ಕಳಿಗೆ ಓದಲು ಕೊಡಿ, ಅಥವಾ ಓದಿ ಹೇಳಿ! ಈ ಚಿಕ್ಕ ಕಾಮಿಕ್ ಪುಸ್ತಕದ  ಲಿಂಕ್ ಇಲ್ಲಿದೆ : […]

ಮೌನ : ಸಾದಿ ಶಿರಾಝಿಯ ಸೂಫಿ ಪದ್ಯ

ಮೂಲ :  ಶೇಖ್ ಸಾದಿ ಶಿರಾಝಿ | ಕನ್ನಡಕ್ಕೆ: ಸುನೈಫ್ ಮೂರ್ಖನಿಗೆ ಮೌನವೇ ಕಿರೀಟ ಮತ್ತು, ಇದನವ ಅರಿತ ದಿನ ಮೂರ್ಖನಾಗಿ ಉಳಿದಿರುವುದಿಲ್ಲ ನಿನ್ನ ಮಾತುಗಳು ಗೌಣವಾಗುವ ಕಡೆ ನಾಲಗೆ ಮಡಚಿಟ್ಟು ಸುಮ್ಮನಿದ್ದು ಬಿಡು. ಜಗಳವಿರದು, ನಾಲಗೆ ತೂಕವಿದ್ದರೆ; ತಿರುಳಿಲ್ಲದ ಕಾಯಿಗೆ ತೂಕವೂ ಕಮ್ಮಿ. ಪಶುಗಳು ನಿನ್ನ ಮಾತು ಕಲಿಯುವುದಿಲ್ಲ, ಅವುಗಳ ಮೌನವನ್ನು ನೀನೇ ಕಲಿತು ಬಿಡು. ಆಡುವ ಮಾತಿನಲ್ಲಿ ಉತ್ತರವಿಲ್ಲದಿದ್ದರೆ ಅವನ ಮಾತುಗಳ ಕಡೆಗಣಿಸಿ ಬಿಡು. ಬಾ ಗೆಳೆಯನೇ, ನಿನ್ನ ಮಾತುಗಳ ದಾಖಲಿಸು ಅಥವಾ, ಮೂಕಪ್ರಾಣಿಯಂತೆ […]

ಝೆನ್ ಅಂಥ ಸಿರೀಯಸ್ ಏನೂ ಅಲ್ಲ ! ~ ಒಂದು ಚುಟುಕು ಸಂಭಾಷಣೆ

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಅಮೇರಿಕದ ಒಬ್ಬ ಕವಿ ಗ್ಯಾರಿ ಸಿಂಡರ್, ಝೆನ್ ಅಭ್ಯಾಸ ಮಾಡಲು ಜಪಾನಿಗೆ ಬರುತ್ತಾನೆ. ಝೆನ್ ಅಭ್ಯಾಸ ಮಾಡುವವರು ಕವಿತೆ ಬರೆಯಬಹುದಾ ಎನ್ನುವ ಸಂದೇಹ ಅವನದು. ಅವನು ಈ ಬಗ್ಗೆ ಮಾಸ್ಟರ್ ರೋಶಿಯನ್ನು ಪ್ರಶ್ನೆ ಮಾಡುತ್ತಾನೆ. “ ಕವಿತೆ ನಿನ್ನ ಅಂತರಾಳದಿಂದ ಒಡಮೂಡಿ ಬರುವುದಾದರೆ ಕವಿತೆ ಬರೆಯುವುದಕ್ಕೆ ಝೆನ್ ನಲ್ಲಿ ಅಂಥ ಆಕ್ಷೇಪ ಏನೂ ಇಲ್ಲ” ಮಾಸ್ಟರ್ ರೋಶಿ ಉತ್ತರಿಸುತ್ತಾರೆ. ಝೆನ್ ಅಭ್ಯಾಸದಲ್ಲಿ ಸಿರೀಯಸ್ ಆಗಿ ತೊಡಗಿಕೊಳ್ಳುವ ಆಕಾಂಕ್ಷೆಯಿದ್ದುದರಿಂದ , […]