ಯಾರೋ ಏನೋ ಮಾಡಿದರು, ಯಾರೋ ಏನೇನೋ ಆದರು… ಅವೆಲ್ಲ ನಮಗೆ ಬೇಕಿಲ್ಲ. ನಾವೇನು ಮಾಡಬೇಕು, ನಾವೇನು ಆಗಬೇಕು ಅನ್ನುವುದಷ್ಟೇ ಮುಖ್ಯ. । ಚಿದಂಬರ ನರೇಂದ್ರ
- ಯಾರೋ ಒಬ್ಬರು ತಮ್ಮ 22 ನೇ ವಯಸ್ಸಿಗೆ ಪದವೀಧರರಾದರು ಆದರೆ ಒಳ್ಳೆಯ ಸಿಗಲು ಅವರಿಗೆ ಮತ್ತೆ 5 ವರ್ಷ ಬೇಕಾಯಿತು.
- ಯಾರೋ ಒಬ್ಬರು ತಮ್ಮ 25 ನೇಯ ವಯಸ್ಸಿಗೆ ಕಂಪನಿಯ CEO ಆಗಿ ನೇಮಕಗೊಂಡರು, ತಮ್ಮ 50 ನೇ ವಯಸ್ಸಿಗೆ ತೀರಿಕೊಂಡರು.
- ಯಾರೋ ಒಬ್ಬರು ತಮ್ಮ 50 ನೇ ವಯಸ್ಸಿಗೆ ಕಂಪನಿಯ ಚೇರಮನ್ ಆದರು, ತಮ್ಮ 90 ನೇ ವಯಸ್ಸಿನವರೆಗೆ ಬಾಳಿ ಬದುಕಿದರು
- ಯಾರೋ ಒಬ್ಬರು ಇನ್ನೂ ಸಿಂಗಲ್ ಆಗಿ ಇದ್ದಾರೆ ಆದರೆ ಶಾಲಾ ಗೆಳೆಯನೊಬ್ಬ ಆಗಲೇ ಅಜ್ಜನಾಗಿಬಿಟ್ಟಿದ್ದಾನೆ.
- ಓಬಾಮಾ 50 ನೇ ವಯಸ್ಸಿಗೆ ಪ್ರಸಿಡೆಂಟ್ ಆಗಿ ನಿವೃತ್ತನಾದರೆ, ಟ್ರಂಪ್ ತನ್ನ 70 ನೇ ವಯಸ್ಸಿನಿಂದ ಅಧ್ಯಕ್ಷನಾಗಿ ಕೆಲಸ ಶುರು ಮಾಡಿದ.
- ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಟೈಂ ಝೋನ್ ಪ್ರಕಾರ ಕೆಲಸ ಮಾಡುತ್ತಿದ್ದಾರೆ.
- ನಿಮ್ಮ ಸುತ್ತ ಕೆಲವರು ನಿಮಗಿಂತ ಮುಂದೆ ಇದ್ದಾರೆ ಎಂದು ಅನಿಸಬಹುದು, ಕೆಲವರು ನಿಮಗಿಂತ ಹಿಂದೆ ಇದ್ದಾರೆ ಎಂದು ಅನಿಸಬಹುದು.
- ಆದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಟೈಂ ಝೋನ್ ಲ್ಲಿ ತಮ್ಮ ತಮ್ಮ ರೇಸ್ ಓಡುತ್ತಿದ್ದಾರೆ.
- ಅವರ ಬಗ್ಗೆ ತಾತ್ಸಾರ ಬೇಡ.
- ಅವರ ಕುರಿತು ಅಸೂಯೆ ಬೇಡ.
- ಅವರು ತಮ್ಮ ಟೈಂ ಝೋನ್ ಲ್ಲಿದ್ದಾರೆ ಮತ್ತು ನೀವು ನಿಮ್ಮ ಟೈಂ ಝೋನ್ ಲ್ಲಿ ಇದ್ದೀರಿ.
- ಹಾಗಾಗಿ ನಿರಾಳವಾಗಿರಿ.
- ನೀವು ಬದುಕಿನಲ್ಲಿ ತಡ ಅಲ್ಲ
- ಬೇಗ ಕೂಡ ಅಲ್ಲ.
- ನೀವು ನಿಮ್ಮ ಟೈ ಝೋನ್ ಲ್ಲಿ ಇದ್ದೀರಿ ಅಷ್ಟೇ ಮತ್ತು ಖಂಡಿತ ಯಶಸ್ಸು ನಿಮ್ಮದಾಗುತ್ತದೆ.
- ನಿರಾಶರಾಗಬೇಡಿ, Be encouraged.

