ಮರದ ಮೂರು ಭಾಗಗಳಂತೆ ಮೂರು ಥರದ ಜನರು ಇವರು… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಬೇರು ಕೂಡು ಹೂವು,
ಆದರೆ ಅದು
ಪ್ರಚಾರ ಬಯಸುವುದಿಲ್ಲ ಅಷ್ಟೇ.
~ ಖಲೀಲ್ ಜಿಬ್ರಾನ್
ನಮ್ಮ ಬದುಕಿನಲ್ಲಿ ಮೂರು ರೀತಿಯ ವ್ಯಕ್ತಿಗಳು ಬಂದು ಹೋಗುತ್ತಾರೆ
- ಎಲೆ ಮನುಷ್ಯರು
- ರೆಂಬೆ ಮನುಷ್ಯರು
- ಬೇರು ಮನುಷ್ಯರು
ಎಲೆ ಮನುಷ್ಯರು : ಇವರು ನಮ್ಮ ಬದುಕಿನಲ್ಲಿ ಪ್ರವೇಶ ಮಾಡುವುದು ಕಾಲಕ್ಕನುಗುಣವಾಗಿ. ಅವರು ನಿಮ್ಮ ಬಳಿ ಇರುವುದನ್ನ ತೆಗೆದುಕೊಳ್ಳಲು ಬರುತ್ತಾರೆ. ಇಂಥವರ ಮೇಲೆ ನೀವು ಡಿಪೆಂಡ್ ಆಗುವುದು ಸಾಧ್ಯವಿಲ್ಲ. ಎಲ್ಲ ಸರಿ ಇದ್ದಾಗ ಮಾತ್ರ ಇವರು ನಿಮ್ಮ ಜೊತೆ ಇರುತ್ತಾರೆ, ಜೋರಾದ ಗಾಳಿ ಬೀಸತೊಡಗಿದಾಗ ಉದುರಿ ಹೋಗುತ್ತಾರೆ. ಇಂಥವರ ಜೊತೆ ವ್ಯವಹರಿಸುವಾಗ ಎಚ್ಚರದಿಂದ ಇರಬೇಕು.
ರೆಂಬೆ ಜನ : ಇವರು ಗಟ್ಟಿಗರು ಆದರೂ ಇವರೊಂದಿಗೆ ಎಚ್ಚರದಿಂದ ಇರುವುದು ಅನಿವಾರ್ಯ. ಬದುಕು ಕಠಿಣ ಆದಾಗ, ದೊಡ್ಡ ಭಾರಗಳನ್ನ ಹೊರಸತೊಡಗಿದಾಗ ಇವರು ಮುರಿದು ಬೇಳುತ್ತಾರೆ. ಕೆಲವು ಸಿಸನ್ ಮಾತ್ರ ಇವರು ನಿಮ್ಮೊಡನಿರಬಹುದು ಆದರೆ ಇವರು ಬಹುಕಾಲ ನಿಮ್ಮ ಜೊತೆ ಬದುಕುವವರಲ್ಲ.
ಬೇರು ಜನ : ಇವರ ಪ್ರಾಮುಖ್ಯತೆ ನಿಮ್ಮ ಬದುಕಿನಲ್ಲಿ ಅಪಾರ. ಇವರು ಕಾಣಿಸಿಕೊಳ್ಳಲಿಕ್ಕೆ ಏನೂ ಪ್ರಯತ್ನ ಮಾಡದೇ ನಿಮ್ಮನ್ನು ಬಲಗೊಳಿಸುತ್ತಲೇ ಇರುತ್ತಾರೆ. ಎಂಥ ಕಠಿಣ ಸಮಯದಲ್ಲೂ ನಿಮಗೆ ಆಧಾರವಾಗಿರುತ್ತಾರೆ. ನೀವು ಎಷ್ಟು ಬೆಳೆದರೂ ನೀವು ನೆಲಕ್ಕೆ ಕನೆಕ್ಟ ಆಗಿರುವಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ರಸಿದ್ಧಿಯನ್ನು ಹಿಂದೆ ಮಾಡಿ ನಿಮ್ಮ ಬೆಳವಣಿಗೆಯನ್ನು ಪೋಷಿಸುತ್ತಿರುತ್ತಾರೆ.
ನೀವು ಬದುಕಿನಲ್ಲಿ ಭೇಟಿ ಮಾಡುವ ಪ್ರತಿಯೊಬ್ಬರೂ ನಿಮ್ಮ ಜೊತೆ ಕೊನೆ ತನಕ ಉಳಿದುಕೊಳ್ಳುವಂಥ ಗೆಳೆಯರಲ್ಲ. ಕೇವಲ ಬೇರು ಜನ ಮಾತ್ರ ಎಲ್ಲ ಸೀಸನ್ಗಳಲ್ಲಿಯೂ ನಿಮ್ಮ ಜೊತೆ ಇರುವಂಥವರು.

