ಭಗವಂತ ಎಂಥ ವ್ಯಕ್ತಿಯನ್ನಾದರೂ ನಿಮ್ಮ ಸಹಾಯಕ್ಕೆ ಕಳುಹಿಸಬಹುದು, ಈ ಸಹಾಯಕ್ಕಾಗಿ ಅವನು ಎಂದ ವಿಚಿತ್ರ ದಾರಿಯನ್ನೂ ಉಪಯೋಗ ಮಾಡಬಹುದು. ಎಲ್ಲ ಸಹಾಯವನ್ನೂ ಕೃತಜ್ಞತೆಯಿಂದ ಸ್ವೀಕರಿಸಿರಿ. ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ವಯಸ್ಸಾದ ಬಡ ಹೆಣ್ಣುಮಗಳೊಬ್ಬಳು ರೇಡಿಯೋ ಸಹಾಯವಾಣಿ ಕಾರ್ಯಕ್ರಮಕ್ಕೆ ಫೋನ್ ಮಾಡಿ ದೇವರು ತನಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಳು. ಈ ಕಾರ್ಯಕ್ರಮವನ್ನು ಕೇಳುತ್ತಿದ್ದ ದೇವರನ್ನು ನಂಬದ ನಾಸ್ತಿಕ ವ್ಯಕ್ತಿಯೊಬ್ಬ ಈ ಹೆಣ್ಣುಮಗಳ ಜೊತೆ ತಮಾಷೆ ಮಾಡಿ ಆಕೆಗೆ ಬುದ್ಧಿಕಲಿಸಬೇಕೆಂದು ಪ್ಲಾನ್ ಮಾಡಿದ.
ಆ ವ್ಯಕ್ತಿ ರೇಡಿಯೋ ಸ್ಟೇಷನ್ ಗೆ ಫೋನ್ ಮಾಡಿ ಹಣ್ಣು ಮಗಳ ವಿಳಾಸ ಸಂಪಾದಿಸಿದ. ಮತ್ತು ಹೆಣ್ಣು ಮಗಳ ಮನೆಗೆ ಸಾಕಷ್ಟು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಕೊಡುವಂತೆ ತನ್ನ ಸೆಕ್ರೆಟರಿಗೆ ಆದೇಶ ನೀಡಿದ.
ಹಾಗು ಯಾರು ಈ ಎಲ್ಲವನ್ನೂ ಕಳಿಸಿದವರು ಎಂದು ಹೆಣ್ಣುಮಗಳು ಕೇಳಿದರೆ, ಸೈತಾನ ಕಳುಹಿಸಿದ್ದಾನೆ ಎಂದು ಹೇಳುವಂತೆ ನಾಸ್ತಿಕ ವ್ಯಕ್ತಿ ತನ್ನ ಸೆಕ್ರೆಟರಿಗೆ ಸೂಚನೆ ಕೊಟ್ಟ.
ಸೆಕ್ರೆಟರಿ, ಆಹಾರ ಪದಾರ್ಥಗಳನ್ನೆಲ್ಲ ಹೆಣ್ಣುಮಗಳ ಮನೆಗೆ ತಲುಪಿಸಿದಾಗ, ಅವಳಿಗೆ ಬಹಳ ಸಂತೋಷವಾಯಿತು, ಆಕೆ ಎಲ್ಲವನ್ನೂ ಕೃತಜ್ಞತೆಯಿಂದ ಸ್ವೀಕರಿಸಿದಳು.
ಹೆಣ್ಣುಗಳು ಎಲ್ಲವನ್ನೂ ತನ್ನ ಪುಟ್ಟ ಮನೆಯೊಳಗೆ ಸಾಗಿಸುತ್ತಿದ್ದಾಗ ಸೆಕ್ರೆಟರಿ ಪ್ರಶ್ನೆ ಮಾಡಿದ. “ಈ ಎಲ್ಲವನ್ನೂ ಯಾರು ಕಳುಹಿಸಿದರು ಎನ್ನುವುದನ್ನ ತಿಳಿದುಕೊಳ್ಳುವ ಕುತೂಹಲ ನಿನಗೆ ಇಲ್ಲವೆ?”
“ಇಲ್ಲ ನನಗೆ ಆ ಕುತೂಹಲ ಇಲ್ಲ, ಯಾವಾಗ ದೇವರು ಆಜ್ಞೆ ಮಾಡುತ್ತಾನೋ ಆಗ ಎಂಥ ಸೈತಾನನಾದರೂ ದೇವರ ಆದೇಶವನ್ನು ಪಾಲಿಸಲೇಬೇಕಾಗುತ್ತದೆ”. ಹೆಣ್ಣುಮಗಳು ಉತ್ತರ ಕೊಟ್ಟಳು.
ಭಗವಂತ, ಭಗವಂತನೇ. ಅವನು ಎಂಥ ವ್ಯಕ್ತಿಯನ್ನಾದರೂ ನಿಮ್ಮ ಸಹಾಯಕ್ಕೆ ಕಳುಹಿಸಬಹುದು, ಈ ಸಹಾಯಕ್ಕಾಗಿ ಅವನು ಎಂದ ವಿಚಿತ್ರ ದಾರಿಯನ್ನೂ ಉಪಯೋಗ ಮಾಡಬಹುದು. ಎಲ್ಲ ಸಹಾಯವನ್ನೂ ಕೃತಜ್ಞತೆಯಿಂದ ಸ್ವೀಕರಿಸಿರಿ.

