ಮೂಲ : ಶಾಂತಿದೇವ; ಇಂಗ್ಲೀಷ್ ಅನುವಾದ : ದಲಾಯಿ ಲಾಮ । ಕನ್ನಡಕ್ಕೆ: ಚಿದಂಬರ ನರೇಂದ್ರ
ಸಾಂಪ್ರದಾಯಿಕ ಬೌದ್ಧ ಪ್ರಾರ್ಥನೆ
ಈಗ, ಆಗ, ಯಾವಾಗಲೂ
ಆಗ ಬಯಸುತ್ತೇನೆ ನಾನು……।
ಯಾರಿಗೆ ರಕ್ಷಣೆ ಇಲ್ಲವೋ ಅವರಿಗೆ ರಕ್ಷಕ
ಯಾರು ದಾರಿ ಕಳೆದುಕೊಂಡಿದ್ದಾರೆಯೋ ಅವರಿಗೆ ಮಾರ್ಗದರ್ಶಿ
ಸಮುದ್ರ ದಾಟಬಯಸುವವರಿಗೆ ಹಡಗು
ನದಿ ದಾಟಿ ಆಚೆ ಹೋಗುವ ಇಚ್ಛೆ ಉಳ್ಳವರಿಗೆ ಸೇತುವೆ
ಕತ್ತಲೆಯಲ್ಲಿರುವವರಿಗೆ ದೀಪ
ನೆಲೆ ಇಲ್ಲದವರಿಗೆ ನೆಲೆ
ಸಹಾಯದ ಅವಶ್ಯಕತೆ ಇರುವ ಎಲ್ಲರಿಗೆ ಸೇವಕ.
ಎಲ್ಲಿಯವರೆಗೆ ಆಕಾಶ ಇದೆಯೋ
ಎಲ್ಲಿಯವರೆಗೆ ಜೀವ ಜಗತ್ತು ಬದುಕಿಕೊಂಡಿದೆಯೋ
ಅಲ್ಲಿಯವರೆಗೆ ನಾನು
ಈ ಜಗತ್ತಿನ ಸಂಕಟಗಳನ್ನು ನಿವಾರಿಸುವ
ಅವಕಾಶವನ್ನು ಕೇಳಿಕೊಳ್ಳುತ್ತೇನೆ.
ಶಾಂತಿದೇವ 8 ನೇ ಶತಮಾನದ ಬೌದ್ಧ ಸನ್ಯಾಸಿ. ಶಾಂತಿದೇವ ರಚಿಸಿದ ಈ ಪ್ರಾರ್ಥನೆಯ ಹಲವಾರು ರೂಪಗಳು ಪ್ರಚಲಿತದಲ್ಲಿವೆ.

