ನಾವು ಬದುಕುತ್ತಿರುವ ಸಮಯದಲ್ಲಿ…

ಸೃಷ್ಟಿ, ವಿಪರ್ಯಾಸಗಳ ಮೊತ್ತ. ಅದರಲ್ಲೂ ನಾವು ಬದುಕುತ್ತಿರುವ ಈ ಕಾಲಮಾನ ಹೇಗಿದೆ ಎಂದರೆ…

ನಾವು ಇಂಥ ಆಸಕ್ತಿಕರ ತಮಾಷೆಯ ಸಮಯದಲ್ಲಿ ಬದುಕುತ್ತಿದ್ದೇವೆ.

  • ನಾವು ಬದುಕುತ್ತಿರುವ ಕಾಲದಲ್ಲಿ ಮನುಷ್ಯರು ಜಾಸ್ತಿ ಇದ್ದರೂ ಮನುಷ್ಯತ್ವದ ಕೊರತೆ ಅಪಾರವಾಗಿದೆ.
  • ನಾವು ಬದುಕುತ್ತಿರುವ ಕಾಲದಲ್ಲಿ, ಶ್ರೀಮಂತರ ಮನೆಗಳಲ್ಲಿ ಮಕ್ಕಳಿಗಿಂತ ಕೋಣೆಗಳು ಜಾಸ್ತಿ ಇದ್ದರೆ, ಬಡವರ ಮನೆಗಳಲ್ಲಿ ಕೋಣೆಗಿಂತ ಜಾಸ್ತಿ ಮಕ್ಕಳಿದ್ದಾರೆ.
  • ನಾವು ಬದುಕುತ್ತಿರುವ ಕಾಲದಲ್ಲಿ, ಸ್ಮಾರ್ಟ ಫೋನ್ ದೂರದ ಜಗತ್ತನ್ನು ಹತ್ತಿರವಾಗಿಸುತ್ತಿದ್ದರೆ, ಹತ್ತಿರದ ಜನರನ್ನು ದೂರವಾಗಿಸುತ್ತಿದೆ.
  • ನಾವು ಬದುಕುತ್ತಿರುವ ಕಾಲದಲ್ಲಿ, ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕಬಲ್ಲಳಾದರೆ, ಹತ್ತು ಮಕ್ಕಳು ಸೇರಿ ಒಬ್ಬ ತಾಯಿಯನ್ನು ಸಾಕಲಾರರು.
  • ನಾವು ಬದುಕುತ್ತಿರುವ ಕಾಲದಲ್ಲಿ, ಶ್ರಿಮಂತರು ಉಂಡದನ್ನು ಕರಗಿಸಲು ಮೈಲುಗಟ್ಟಲೇ ವಾಕ್ ಮಾಡುತ್ತಾರಾದರೆ, ಬಡವರು ಊಟ ಹುಡುಕಲು ಮೈಲುಗಟ್ಟಲೆ ನಡೆದು ಹೋಗುತ್ತಾರೆ.
  • ನಾವು ಬದುಕುತ್ತಿರುವ ಕಾಲದಲ್ಲಿ, ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ದೊಡ್ಡದಿದ್ದರೂ ನಮ್ಮ ರಿಲೇಷನಶಿಪ್ ಲಿಸ್ಟ ಬಹಳ ಸಣ್ಣದು.
  • ನಾವು ಬದುಕುತ್ತಿರುವ ಕಾಲದಲ್ಲಿ, ನಮ್ಮ ಪೊಸೆಷನ್ ಸಾಕಷ್ಟು ಇದ್ದರೂ ನಮ್ಮ ಅಪ್ರಿಸಿಯೇಶನ್ ಬಹಳ ಕಡಿಮೆ.
  • ನಾವು ಬದುಕುತ್ತಿರುವ ಕಾಲದಲ್ಲಿ, ಒಳ್ಳೆಯ ಬದುಕಿಗಾಗಿ ಗಳಿಸುವುದು ಗೊತ್ತಿದ್ದರೂ, ಒಳ್ಳೆಯ ಬದುಕು, ಬಾಳುವುದು ಗೊತ್ತಿಲ್ಲ.
  • ನಾವು ಬದುಕುತ್ತಿರುವ ಕಾಲದಲ್ಲಿ, ನಮಗೆ ಎಲ್ಲದರ ಬೆಲೆ ಹೊತ್ತು ಆದರೆ ಯಾವುದರ ಮೌಲ್ಯವೂ ಗೊತ್ತಿಲ್ಲ.

ನಾವು ವಿಚಿತ್ರ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ದೇವರು ನಮ್ಮನ್ನು ಕೈ ಹಿಡಿದು ಮುನ್ನಡೆಸಲಿ.


(ಸಂಗ್ರಹಾನುವಾದ : ಚಿದಂಬರ ನರೇಂದ್ರ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.