ಕೆಲವು ಸಾಧಕರ ಜೀವನ – ಸಾಧನೆಯಿಂದ ನಾವು ಕಲಿಯಬಹುದಾದ ಪಾಠಗಳು ಹೀಗಿವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಮೊದಲ ಕಂತು ಇಲ್ಲಿದೆ: https://aralimara.com/2024/05/20/models/
ಬಿಷಪ್ ಡೇವಿಡ್ ಓಯೆಡೆಪೊ

ನಾನು ಫೇತ್ ಚರ್ಚ್ ಶುರು ಮಾಡಿದ್ದು ಒಂದು ಟೆನಿಸ್ ಕೋರ್ಟ ಲ್ಲಿ, ಆಗ ಕೇವಲ ಮೂರು ಜನ ಸೇರುತ್ತಿದ್ದರು. ನಾನು ಸಮೃದ್ಧಿಯ ಕುರಿತು ಬೋಧನೆ ಮಾಡುತ್ತಿದ್ದೆ. ನನ್ನ ಕೆಲವು ಗೆಳೆಯರು ಈ ಕುರಿತು ನನ್ನ ಟೀಕೆ ಮಾಡಿದರು. ಆದರೆ ಇಂದು, ನಾವು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಚರ್ಚ ಹೊಂದಿದ್ದೇವೆ ಮತ್ತು ಎರಡು ವರ್ಲ್ಡ್ ಕ್ಲಾಸ್ ವಿಶ್ವವಿದ್ಯಾಲಯಗಳನ್ನ.
ಪಾಠ : ಬೇರೆ ಯಾರಿಗೂ ಇರದಿದ್ದರೂ ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ ಮತ್ತು ಯಾವಾಗಲೂ ನಿಮ್ಮ ಕ್ರಿಯೆಯನ್ನ ಅರ್ಧಕ್ಕೆ ನಿಲ್ಲಿಸುವ ಬಗ್ಗೆ ಯೋಚನೆ ಮಾಡಬೇಡಿ.
ನೆಲ್ಸನ್ ಮಂಡೇಲಾ

ನಾನು 27 ವರ್ಷಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದೆ ಆದರೆ ನಾನು ವಿಶ್ವಾಸ ಕಳೆದುಕೊಳ್ಳಲಿಲ್ಲ. ಕೊನೆಗೆ ನಾನು ಸೌಥ್ ಆಫ್ರಿಕಾದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ.
ಪಾಠ : ನೀವು ಎಂಥ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದರೂ, ಆತ್ಮಸ್ಥೈರ್ಯ ಧೃಡವಾಗಿದ್ದರೆ ನಿಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತೀರಿ.
ರೀಸಿ (Reece)

ನನ್ನ ಯುನಿವರ್ಸಿಟಿ ಶಿಕ್ಷಣದ ಖರ್ಚಿಗಾಗಿ ನಾನು ಟ್ಯಾಕ್ಸಿ ಓಡಿಸುತ್ತಿದ್ದೆ. ಇವತ್ತು ನಾನು ಬಿಲಿಯನಿಯರ್.
ಪಾಠ : ನಿಮ್ಮ ಭೂತ ಕಾಲಕ್ಕೆ ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಅವಕಾಶವನ್ನು ನಿರಾಕರಿಸಿರಿ.
ಹರ್ಲ್ಯಾಂಡ್ ಸ್ಯಾಂಡರ್ಸ್ (KFC ಯ ಫೌಂಡರ್)

ನಾನು ನೇವಿಯಲ್ಲಿನ ಕುಕ್ ಕೆಲಸದಿಂದ ನಿವೃತ್ತನಾದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದೆ, ರೆಸ್ಟೊರೆಂಟ್ ಓಪನ್ ಮಾಡುವ ಐಡಿಯಾ ಹೊಳೆಯುವ ಮೊದಲು.
ಪಾಠ : ಯಾವುದೂ Too Late ಅಲ್ಲ. Too Late ಎನ್ನುವುದು ಫೆಲ್ಯೂರ್ ಗಳ ಭಾಷೆ. ನಿಮ್ಮ ಅಭ್ಯುದಯ ನಿಮ್ಮ ಯಾವ ವಯಸ್ಸಿನಲ್ಲಾದರೂ ಶುರು ಆಗಬಹುದು. ವಯಸ್ಸಿಗೆ ನಿಮ್ಮನ್ನು ತಡೆಯುವ ಅಧಿಕಾರ ಕೊಡಬೇಡಿ.
ಅಲೀಕೊ ಡ್ಯಾಂಗೋಟ್ (Aliko Dangote)

ನಾನು ಚಿಕ್ಕವನಾಗಿದ್ದಾಗ ನನ್ನ ಅಂಕಲ್ ಕೈ ಕೆಳಗೆ ಕೆಲಸ ಮಾಡುತ್ತಿದ್ದೆ. ನಂತರ ನಾನು ಅಂಕಲ್ ಇಂದ ಲೋನ್ ತೆಗೆದುಕೊಂಡು ಒಂದು ಸಣ್ಣ ಅಂಗಡಿ ಶುರು ಮಾಡಿದೆ. ಇಂದು ನಾನು ಆಫ್ರಿಕಾದ ಅತ್ಯಂತ ಶ್ರೀಮಂತ ವ್ಯಕ್ತಿ.
ಪಾಠ : ಹಿಂದಿನ ಸೋಲುಗಳು ಮತ್ತು ಮಿತಿಗಳು ನಿಮ್ಮ ಗ್ರೇಟ್ ನೆಸ್ ಮೇಲೆ ಹತೋಟಿ ಸಾಧಿಸಲಾರವು. ಯಾರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದೆಯೋ ಅವರಿಗೆ ಎಲ್ಲವೂ ಸಾಧ್ಯವಾಗುವುದು.
ಬರಾಕ್ ಒಬಾಮಾ

ನಾನು ಕೆನ್ಯಾದಿಂದ ಅಮೆರಿಕೆಗೆ ಬಂದ ಕಪ್ಪು ವಲಸೆಗಾರರ ಮಗ. ಕಷ್ಟಪಟ್ಟು ಹಾರ್ವರ್ಡ್ ನಲ್ಲಿ ಪದವಿ ಪಡೆದು, ಶಿಕಾಗೋದ ಸೆನೆಟರ್ ಆಗಿ ಆಯ್ಕೆಗೊಂಡೆ. ನಂತರ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರದ ಅಧ್ಯಕ್ಷನೂ ಆದೆ.
ಪಾಠ : ನಿಮ್ಮ ಬದುಕನ್ನ ಎಲ್ಲರೂ ಬಂದು ಹೋಗುವ ಗಾರ್ಡನ್ ಥರ್ ಡಿಸೈನ್ ಮಾಡಿಕೊಳ್ಳಬೇಡಿ. ನಿಮ್ಮ ಬದುಕು ಎಲ್ಲರೂ ಮುಟ್ಟ ಬಯಸುವ ಆಕಾಶದ ಥರ ಇರಲಿ.
Arnold Schwarzenegger

15 ವರ್ಷ ವಯಸ್ಸಿನಲ್ಲಿ ಆರ್ಥಿಕ ಸ್ವಾತಂತ್ರ್ಯ ಹುಡುಕಿಕೊಂಡು ಅಮೇರಿಕಾಕ್ಕೆ ಬಂದೆ. 7 ಬಾರಿ ಮಿ. ಯುನಿವರ್ಸ್ ಆಗಿ ಆಯ್ಕೆ ಆದೆ. ನಂತರ ಎಕನಾಮಿಕ್ಸ್ ಲ್ಲಿ ಪದವಿ ಪಡೆದೆ, ಹಾಲಿವುಡ್ ನಟನಾದೆ, ನಂತರ ಎರಡು ಬಾರಿ ಕ್ಯಾಲಿಫೋರ್ನಿಯಾದ ಗವರ್ನರ್ ಈಗಿ ಆಯ್ಕೆಯಾದೆ.
ಪಾಠ : ಎಲ್ಲರೂ ನಿನ್ನ ಕನಸು ಮತ್ತು ಸಾಮರ್ಥ್ಯಗಳನ್ನು ನಂಬುವ ತನಕ ಕಾಯಬೇಡ.

