ಎಲ್ಲ ಅಡೆತಡೆಗಳ ಹೊರತಾಗಿಯೂ ಬಾಕಿ ಉಳಿದಿರುವ ಸಮಯವನ್ನು ಪ್ರಶಾಂತತೆಯಿಂದ ಎದುರುಗೊಳ್ಳೋಣ. ‘ಆಮೇಲೆ’ ಎನ್ನುವ ಎಲ್ಲವನ್ನೂ ತೆಗೆದುಹಾಕಿಬಿಡೋಣ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಈಗ ಇನ್ನೂ ಬೆಳಕಾಗುತ್ತಿತ್ತು ಆಗಲೇ ನೋಡಿದರೆ ಸಂಜೆಯಾಗಿಬಿಟ್ಟಿದೆ. ಸೋಮವಾರ ಈಗ ಶುರುವಾದಂತಿತ್ತು ಆಗಲೇ ನೋಡಿದರೆ ಶುಕ್ರವಾರ ಬಂದುಬಿಟ್ಟಿದೆ. ನಿನ್ನೆ ಮೊನ್ನೆ ಶುರುವಾದಂತಿದ್ದ ತಿಂಗಳು ಆಗಲೇ ಮುಗಿಯುತ್ತ ಬಂದಿದೆ. ಹೊಸ ವರ್ಷ ಶುರು ಆಗಿದ್ದ ನೆನಪು ಇನ್ನೂ ತಾಜಾ ಆಗಿರುವಾಗಲೇ ಡಿಸೆಂಬರ ಬಂದುಬಿಟ್ಟಿದೆ.
ನೋಡ ನೋಡುತ್ತಿದ್ದಂತೆಯೇ ನಮ್ಮ ಬದುಕಿನ 20, 30,40,50,60,70 ವರ್ಷಗಳು ಕಳೆದುಹೋದವು, ನಮ್ಮ ತಂದೆ ತಾಯಿ, ಆಪ್ತರು, ಬಂಧುಗಳನ್ನು ಕಳೆದುಕೊಂಡುಬಿಟ್ಟಿದ್ದೆವೆ. ಮತ್ತೆ ವಾಪಸ್ ಹೋಗುವುದು ಸಾಧ್ಯವೇ ಇಲ್ಲ.
So ಈ ಎಲ್ಲವು ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವಾಗಲೂ ಉಳಿದ ಬಾಕಿ ಸಮಯವನ್ನಾದರೂ ಸಂತೋಷದಿಂದ ಅನುಭವಿಸೋಣ. ನಮಗಿಷ್ಟವಾದ ಕೆಲಸಗಳನ್ನು ಗುರುತುಹಾಕಿಕೊಂಡು ಪೂರ್ಣ ಮಾಡೋಣ, ನಮ್ಮ ಕಪ್ಪು ಬಿಳುಪು ಬದುಕಿನಲ್ಲಿ ಕೆಲವೊಂದಿಷ್ಟು ಬಣ್ಣಗಳನ್ನು ಸೇರಿಸೋಣ. ನಮ್ಮ ಹೃದಯದಲ್ಲಿ ಹೆಚ್ಚು ಪ್ರೇಮವನ್ನು ತುಂಬುವ ಬದುಕಿನ ಪುಟ್ಟ ಪುಟ್ಟ ಸಂಗತಿಗಳನ್ನು ನಗುನಗುತ್ತ ಅನುಭವಿಸೋಣ.
ಎಲ್ಲ ಅಡೆತಡೆಗಳ ಹೊರತಾಗಿಯೂ ಬಾಕಿ ಉಳಿದಿರುವ ಸಮಯವನ್ನು ಪ್ರಶಾಂತತೆಯಿಂದ ಎದುರುಗೊಳ್ಳೋಣ. ‘ಆಮೇಲೆ’ ಎನ್ನುವ ಎಲ್ಲವನ್ನೂ ತೆಗೆದುಹಾಕಿಬಿಡೋಣ. ಆಮೇಲೆ ಮಾಡುತ್ತೇನೆ, ಆಮೇಲೆ ಹೇಳುತ್ತೇನೆ, ಆಮೇಲೆ ವಿಚಾರ ಮಾಡಿದರಾಯ್ತು ಎಲ್ಲ ಸಾಕು ಇನ್ನು. ನಾವು ‘ಆಮೇಲೆ’ ಯನ್ನ ನಮ್ಮ ಸ್ವಂತದ್ದು ಎನ್ನುವಷ್ಟು ನಂಬಿಬಿಟ್ಟಿದ್ದೆವೆ.
ನೆನಪಿರಲಿ, ಆಮೇಲೆ ಕಾಫಿ ಕೋಲ್ಡ್ ಆಗುತ್ತದೆ, ಆಮೇಲೆ ನಮ್ಮ ಆದ್ಯತೆಗಳು ಬದಲಾಗುತ್ತವೆ, ಆಮೇಲೆ ನಮ್ಮ ಚಾರ್ಮ್ ಕಡಿಮೆಯಾಗುತ್ತದೆ, ಆಮೇಲೆ ಆರೋಗ್ಯ ಕ್ಷೀಣಿಸುತ್ತ ಹೋಗುತ್ತದೆ, ಆಮೇಲೆ ಮಕ್ಕಳು ದೊಡ್ಡವರಾಗುತ್ತ ಹೋಗುತ್ತಾರೆ.
ಆಮೇಲೆ ತಂದೆ ತಾಯಿಗೆ ವಯಸ್ಸಾಗುತ್ತದೆ, ಆಮೇಲೆ ಪ್ರಾಮಿಸ್ ಗಳು ಮರೆತು ಹೋಗುತ್ತವೆ, ಆಮೇಲೆ ಬೆಳಕು ಸರಿದು ಹೋಗಿ ಕತ್ತಲಾಗುತ್ತದೆ, ಆಮೇಲೆ ಬದುಕು ಕೊನೆಯಾಗುತ್ತದೆ. ಆಮೇಲೆ ಗಡಿಯಾರವನ್ನು ಹಿಂದಕ್ಕೆ ತಿರುಗಿಸುವುದು ಸಾಧ್ಯವೇ ಇಲ್ಲ. So ಹೇಳಬೇಕಾದ್ದನ್ನ, ಮಾಡಬೇಕಾದ್ದನ್ನ ಈಗಲೇ ಹೇಳಿ, ಈಗಲೇ ಮಾಡಿ.
So ಯಾವುದನ್ನೂ ಆಮೇಲಿಗಾಗಿ ಮಿಸಲಾಗಿಡುವುದು ಬೇಡ. ಒಂದು ವೇಳೆ ನಾವೇನಾದರೂ “ಆಮೇಲೆ’ ಯ ಮೋಹಕ್ಕೆ ಬಿದ್ದೆವಾದರೆ, ಸುಂದರ ಕ್ಷಣಗಳನ್ನ, ಮಧುರ ಅನುಭವಗಳನ್ನ, ಒಳ್ಳೆಯ ಗೆಳೆಯರನ್ನ, ಅತ್ಯುತ್ತಮ ಕೌಟುಂಬಿಕ ಕ್ಷಣಗಳನ್ನ ಮಿಸ್ ಮಾಡಿಕೊಳ್ಳುತ್ತೇವೆ.
ದಿನ ಎಂದರೆ ಅದು ಇವತ್ತು, ಕ್ಷಣ ಎಂದರೆ ಅದು ಈಗ. ಸಂಗತಿಗಳನ್ನ ಮುಂದೂಡುವ ಐಷಾರಾಮಿ ನಮಗಿಲ್ಲ.
ಬದುಕು ಎಟರ್ನಲ್ ನಿಜ ಆದರೆ ನಮ್ಮದು ಕಿರು ಪ್ರವಾಸ ಮಾತ್ರ. ಬದುಕಿನ ಎಲ್ಲ ಕ್ಷಣಗಳನ್ನು ಆನಂದಿಸಿ. ಈಗ ಅನುಭವಿಸಬೇಕಾಗಿರುವುದನ್ನ ಈಗಲೇ ಅನುಭವಿಸಿ ಪೋಸ್ಟಪೋನ್ ಮಾಡಬೇಡಿ. ಸಮಯ ಸಂಕೋಚದ ಪ್ರೇಮಿ ನೀವು ಬಾಯಿಬಿಟ್ಟು ಹೇಳದೇ ಹೋದರೆ ಕಳೆದುಕೊಳ್ಳುತ್ತೀರಿ.

