ಸುಂದರವಾಗಿ ಜೀವಿಸುವ ಕಲೆ

ಸರಳವಾಗಿ, ಸುಂದರವಾಗಿ ಜೀವಿಸುವುದು ಸುಲಭ. ಮನಸ್ಸು ಮಾಡಬೇಕಷ್ಟೇ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ.

ನಗುತ್ತಿರಿ…

    • ನಗುವಿಗೆ ಯಾವದನ್ನೂ ಮತ್ತು ಎಲ್ಲವನ್ನೂ ಸರಿಯಾಗಿ ಸೆಟ್ ಮಾಡುವ ಸಾಮರ್ಥ್ಯವಿದೆ.
    • ಪ್ರತಿದಿನ ಮುಂಜಾನೆ ಎದ್ದಕೂಡಲೆ ಕನ್ನಡಿ ನೋಡಿಕೊಳ್ಳುತ್ತ ಒಂದು ನಗುವಿನೊಂದಿಗೆ ನಿಮ್ಮನ್ನು ನೀವು ಗ್ರೀಟ್ ಮಾಡಿ.
    • ಇದು ನಿಮ್ಮ ದಿನವನ್ನು ಪ್ರಕಾಶಮಾನವಾಗಿಸುತ್ತದೆ.

    ನಿಮಗಾಗಿ ಸ್ವಲ್ಪ ಹಣ ಖರ್ಚು ಮಾಡಿಕೊಳ್ಳಿ.

      • ನಿಮ್ಮ ಇಷ್ಟದ ಸಂಗತಿಗಳಿಗಾಗಿ ಹಣ ಖರ್ಚು ಮಾಡಿ ಈಗಲೇ.
      • ಚಿಕ್ಕಂದಿನಿಂದ ನೀವು ಏನನ್ನೋ ಖರೀದಿ ಮಾಡಬೇಕು, ಯಾವುದನ್ನೂ ಮಾಡಬೇಕು ಎಂದು ಕೊಂಡಿರುತ್ತೀರಿ. ಈಗ ನಿಮ್ಮ ವ್ಯಸ್ತ ಬದುಕಿನಿಂದ ಸ್ವಲ್ಪ ಸಮಯವನ್ನು ನಿಮಗಾಗಿ ಮೀಸಲಿಟ್ಟುಕೊಂಡು ನಿಮ್ಮ ಬಯಕೆಗಳತ್ತ ಗಮನ ನೀಡಿ

      ನಿಮ್ಮ ಬದುಕಿನ ಆದ್ಯತೆಗಳು ಸ್ಪಷ್ಟವಾಗಿರಲಿ.

        • ಕೆಲಸವೊಂದೇ ಬದುಕಿನ ಮುಖ್ಯ ಸಂಗತಿಯಲ್ಲ.
        • ಫ್ಯಾಮಿಲಿ, ಗೆಳೆಯರು, ನಿಮ್ಮ ಸಾಮಾಜಿಕ ಬದುಕು ಕೂಡ ಅಷ್ಟೇ ಮುಖ್ಯವಾದವುಗಳು.
        • ನಿಮ್ಮ ಸೋಷಿಯಲ್ ಲೈಫ್ ಖುಶಿಯಾಗಿದ್ದಾಗ, ನೀವು ಖುಶಿಯಾಗಿರುತ್ತೀರಿ ನಿಮ್ಮ ಬದುಕೂ ಸುಂದರವಾಗಿರುತ್ತದೆ.

        ಮನಸ್ಥಿತಿ

          • ನಿಮ್ಮ ಜೊತೆ ನೀವು ಪಾಸಿಟಿವ್ ಟೋನ್ ಲ್ಲಿ ಮಾತನಾಡಿಕೊಳ್ಳಿ.
          • ಇದು ಧನಾತ್ಮಕ ಮನಸ್ಥಿತಿಯನ್ನು ಖಚಿತಗೊಳಿಸುತ್ತದೆ ಮತ್ತು ಬದುಕನ್ನ ಹಗುರವಾಗಿಸಿಕೊಳ್ಳಲು ಬಹಳ ಸಹಾಯ ಮಾಡುತ್ತದೆ.
          • ಒಳ್ಳೆಯ ಪ್ಲಾನಿಂಗ್ ಮತ್ತು ಶಿಸ್ತನ್ನು ರೂಢಿಸಿಕೊಂಡಾಗ ನಿಮ್ಮ ಬದುಕಿನ ಎಲ್ಲ ಸಂಗತಿಗಳನ್ನ ಸರಿಯಾಗಿ ಸೆಟ್ ಮಾಡಿಕೊಳ್ಳಬಹುದು.

          ತಪ್ಪುಗಳು, ಸೋಲುಗಳಿಗೆ ಸಮ ಅಲ್ಲ.

            • ತಪ್ಪುಗಳು, ಗೆಲುವಿಗಿಂತ ಹೆಚ್ಚು ನಿಮಗೆ ಪಾಠ ಕಲಿಸುತ್ತವೆ
            • ತಪ್ಪುಗಳಿಗಾಗಿ ಬೇಸರ ಮಾಡಿಕೊಳ್ಳದೇ ಅವು ರಿಪೀಟ್ ಈಗದಂತೆ ನೋಡಿಕೊಳ್ಳಿ.
            • ತಪ್ಪುಗಳನ್ನು ಸರಿಯಾಗಿ ಪರಿಗಣಿಸಿದಾಗ ನಿಮ್ಮ ಯಶಸ್ಸಿನ ದಾರಿ ನಿಮಗೆ ಕಾಣಿಸುತ್ತ ಹೋಗುತ್ತದೆ.

            ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ.

              • ಎಲ್ಸವೂ ಸರಿಯಾಗಿರುವುದಕ್ಕೆ ನಾವು ಯಾರೂ ಪರಿಪೂರ್ಣರಲ್ಲ.
              • ಏನಾದರೂ ತಪ್ಪಾದರೆ, ಪರವಾಗಿಲ್ಲ, ಒಮ್ಮೊಮ್ಮೆ ಹೀಗಾಗುತ್ತದೆ.
              • ಒಂದು ನಗುವಿನೊಂದಿಗೆ ಮತ್ತೆ ಸರಿ ದಾರಿಯಲ್ಲಿ ಪ್ರಯಾಣ ಮುಂದುವರೆಸಿ.

              ನಿಮ್ಮ ಭಾವನೆಗಳನ್ನು ಕಟ್ಟಿಡಬೇಡಿ.

                • ನಿಮ್ಮ ಪಾಸಿಟಿವ್ ಎಮೋಷನ್ಸ್ ಗಳನ್ನ ಮುಕ್ತವಾಗಿ ವ್ಯಕ್ತಮಾಡಿ , ಅದು ಪ್ರೀತಿ, ಖುಶಿ, ಕೃತಜ್ಞತೆ ಏನೇ ಇರಬಹುದು.
                • ನೆಗೆಟಿವ್ ಎಮೋಷನ್ಸ್ ಗಳನ್ನು ಬಹಳ ವಿಚಾರಮಾಡಿ, ಬೇರೆ ಯಾರಿಗೂ ತೊಂದರೆ ಆಗದಂತೆ ಸರಿಯಾದ ರೀತಿಯಲ್ಲಿ ಹೊರ ಹಾಕಿ. ಇವುಗಳಿಗೆ ನಿಮ್ಮೊಳಗೆ ಎಂದೂ ಜಾಗಮಾಡಿ ಕೊಡಬೇಡಿ.
                • ಈ ನೆಗೆಟಿವ್ ಎಮೋಷನ್ಸ್ ಗಳ ಮೂಲ ಏನು ಎನ್ನುವುದನ್ನ ಅರ್ಥ ಮಾಡಿಕೊಂಡು ಅವು ಮುಂದೆ ಯಾವಾಗಲೂ ನಿಮ್ಮೊಳಗೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಿ.

                ಪ್ರತಿ ಗೆಲುವನ್ನೂ ಸಂಭ್ರಮಿಸಿ.

                  • ಮುಂದಿನ ಗುರಿಗಳ ಭಾರದಿಂದ ನಲುಗಿ ಹೋಗಿ ಬಿಡಬೇಡಿ.
                  • ನಿಮ್ಮ ಪ್ರತಿಯೊಂದು ಗೆಲುವನ್ನು ಅದು ಎಷ್ಟೇ ಚಿಕ್ಕದಾಗಿದ್ದರೂ ಸಂಭ್ರಮಿಸಿ. ಈ ಸಂಭ್ರಮ ನಿಮ್ಮೊಳಗಿನ ಧನಾತ್ಮಕ ಅಂಶಗಳಿಗೆ ಉತ್ತೇಜನ ನೀಡುತ್ತದೆ.

                  ಪ್ರಕೃತಿಯೊಂದಿಗೆ ಸ್ವಲ್ಪ ಹೊತ್ತು ಕಳೆಯಿರಿ.

                    • ಪ್ರಕೃತಿಯೊಳಗೆ ಸಂಚರಿಸುತ್ತ ಒಂದು ಒಳ್ಳೆ ಕಾಫೀ ಎಂಜಾಯ್ ಮಾಡಿ.
                    • ಕೆಲ ಸಿಂಪಲ್ ಆದ ಸಂಗತಿಗಳು ನಿಮ್ಮ ಬದುಕಿನಲ್ಲಿ ಬಹಳ ದೊಡ್ಡ ವ್ಯತ್ಯಾಸಗಳಿಗೆ ಕಾರಣವಾಗುತ್ತವೆ.
                    • ಈ ಎಲ್ಲವನ್ನೂ ಗುರುತಿಸಿಟ್ಟುಕೊಳ್ಳಿ ಇವು ಮುಂದೆ ಮತ್ತೆ ನಿಮ್ಮ ಸಹಾಯಕ್ಕೆ ಬರಲಿವೆ.

                    Unknown's avatar

                    About ಅರಳಿ ಮರ

                    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

                    Leave a Reply

                    This site uses Akismet to reduce spam. Learn how your comment data is processed.