ನಾವು ಪ್ರತಿಯೊಂದು ಜಡ – ಚೇತನದಿಂದಲೂ ಏನಾದರೊಂದು ಕಲಿಯುವುದು ಇದ್ದೇ ಇರುತ್ತದೆ. ಹದ್ದಿನಿಂದ ಕಲಿಯಬಹುದಾದ ಕೆಲವು ನಾಯಕತ್ವದ ಗುಣಗಳು ಹೀಗಿವೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಅರ್ಥ : ನಿಮ್ಮ ಕಾಲೆಳೆಯುವ ಸಣ್ಣ ಬುದ್ಧಿಯ ಜನಗಳಿಂದ ದೂರ ಇರಿ. ನಿಮ್ಮದೇ ರೀತಿಯ ಮಹತ್ವಾಕಾಂಕ್ಷೆ ಮತ್ತು ಉಚ್ಚ ವಿಚಾರಗಳನ್ನು ಹೊಂದಿರುವ ಜನರ ಸಂಗದಲ್ಲಿ ಪ್ರಯಾಣ ಮಾಡಿ.

ಅರ್ಥ : ದೂರದೃಷ್ಟಿಯನ್ನು ಬೆಳೆಸಿಕೊಳ್ಳಿ. ಎಷ್ಟೇ ಅಡತಡೆಗಳು ಎದುರಾದರೂ ನಿಮ್ಮ ಗುರಿಯನ್ನು ನಿಮ್ಮ ಫೋಕಸ್ ನಿಂದ ಹೊರತಾಗಲು ಬಿಡಬೇಡಿ.

ಅರ್ಥ : ಹಳೆಯ ಯಶಸ್ಸಿನ ಮೇಲೆ ನಿರ್ಭರರಾಗಬೇಡಿ, ಯಾವಾಗಲೂ ಹೊಸ ಹೊಸ ಸವಾಲುಗಳನ್ನು ಆಯ್ಕೆ ಮಾಡಿಕೊಳ್ಳಿ. ಹಳೆಯದನ್ನು ಅದರ ಹಳೆಯ ಜಾಗದಲ್ಲಿ ಬಿಟ್ಟುಬಿಡಿ.

ಅರ್ಥ : ಸವಾಲುಗಳಿಗೆ ಮುಖಾಮುಖಿಯಾಗಿ ಅವುಗಳನ್ನು ಧೈರ್ಯದಿಂದ ಎದುರಿಸಿ. ಸವಾಲುಗಳು ನಿಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತವೆ. ಬದುಕಿನಲ್ಲಿ ಆಗಾಗ ಕಾಣಿಸಿಕೊಳ್ಳುವ ಬಿರುಗಾಳಿಗೆ ಬೆದರಿ ಹತ್ತಾಶರಾಗದೇ ಈ ಸಂದರ್ಭವನ್ನು ಬಳಸಿಕೊಂಡು ಇನ್ನೂ ಎತ್ತರಕ್ಕೆ ಬೆಳೆಯಬೇಕು. ಸಾಧಕರು ಸವಾಲುಗಳಿಗೆ ಹೆದರುವುದಿಲ್ಲ, ಅವರು ಸವಾಲುಗಳನ್ನು ತಮ್ಮ ಯಶಸ್ಸಿನ ಮೆಟ್ಟಲಾಗಿಸಿಕೊಳ್ಳುತ್ತಾರೆ.

ಅರ್ಥ : ಕಂಫರ್ಟ್ ಝೋನ್ ನಿಂದ ಹೊರಬನ್ನಿ. ಅಲ್ಲಿ ಯಾವ ಬೆಳವಣಿಗೆಯೂ ಸಾಧ್ಯವಿಲ್ಲ.

ಬಹಳ ದಾರುಣ ಕ್ರಿಯೆ ಇದು. ಹೊಸ ರೆಕ್ಕೆ, ಕೊಕ್ಕು, ಉಗುರುಗಳು ಮೂಡುವ ತನಕ ಹದ್ದುಗಳು ತಮ್ಮ ಅಡಗುತಾಣದಲ್ಲಿರುತ್ತವೆ. ಒಮ್ಮೆ ಹೊಸ ಫೀಚರ್ ಗಳು ಕಾಣಿಸತೊಡಗಿದಕೂಡಲೆ ಅವು ಮತ್ತೆ ಬಲಶಾಲಿಯಾಗಿ ಎತ್ತರದಲ್ಲಿ ಹಾರಲು ಶುರು ಮಾಡುತ್ತದೆ.
ಅರ್ಥ : ಎಷ್ಟೇ ಕಷ್ಟ ಆದರೂ ನಾವು ಕೆಲವೊಮ್ಮೆ ನಮ್ಮ ಹಳೆಯ ಸ್ವಭಾವಗಳನ್ನು ಬಿಟ್ಟು ಹೊಸ ಹೊಸ ಗುಣಗಳನ್ನು ರೂಢಿಸಿಕೊಳ್ಳಬೇಕು. ಇದು ನಮ್ಮ ಬದುಕಿಗೆ ಮತ್ತೆ ಹೊಸ ಹುಮ್ಮಸ್ಸು ತುಂಬುತ್ತದೆ.

