ನೀವು ಸ್ವಲ್ಪ ಅತಿಯಾದ ಎಮೋಷನಲ್ ವ್ಯಕ್ತಿ ಎನ್ನುವುದನ್ನ ಗುರುತಿಸುವ ಹತ್ತು ಸಂಗತಿಗಳು ಇಲ್ಲಿವೆ. ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
- ಯಾರಿಗೂ NO ಎಂದು ಹೇಳುವುದು ನಿಮಗೆ ಸಾಧ್ಯವಾಗುವುದೇ ಇಲ್ಲ. ಅಕಸ್ಮಾತ್ ಹೇಳಿದರೂ ನಿಮ್ಮನ್ನು ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ನೀವು ಜನರನ್ನು ಅತಿಯಾಗಿ ಪ್ರೀತಿಸುತ್ತಿರ ಮತ್ತು ಅತಿಯಾಗಿ ಹಚ್ಚಿಕೊಳ್ಳುತ್ತೀರ.
- ಒಬ್ಬರೇ ಇದ್ದಾಗ ಮಾತ್ರ ನೀವು ಅಳುತ್ತೀರ. ಜನ ಏನನ್ನುತ್ತಾರೋ ಎಂದು ನೀವು ಯಾರ ಜೊತೆಯೂ ನಿಮ್ಮ ದುಃಖವನ್ನು ಹಂಚಿಕೊಳ್ಳುವುದಿಲ್ಲ.
- ಬಹಳ ಬೇಗ ನೀವು ಜನರನ್ನ ಗೆಳೆಯರು ಎಂದು ಒಪ್ಪಿಕೊಂಡುಬಿಡುತ್ತೀರ. ನಿಮ್ಮ ಬದುಕಿನಲ್ಲಿ ಬಂದು ಹೋಗುವ ಪ್ರತಿ ತಾತ್ಕಾಲಿಕ ಜನರಿಗಾಗಿಯೂ ಚಡಪಡಿಸುತ್ತೀರ.
- ಜನರೊಂದಿಗೆ ನೀವು ಸ್ವಲ್ಪ ಅತಿಯಾಗಿಯೇ ಒಳ್ಳೆಯವರಾಗಿರುತ್ತೀರ. ಪ್ರತಿಯೊಬ್ಬರ ಜೊತೆಯೂ ನೀವು ಅಂತಃಕರಣದಿಂದ ವ್ಯವಹರಿಸುತ್ತೀರ ಮತ್ತು ಅವರಿಂದಲೂ ಇಂಥದೇ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೀರ.
- ಯಾರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ನಿಮಗೆ ಗೊತ್ತಾಗುವುದಿಲ್ಲ ಏಕೆಂದರೆ, ನೀವು ಯಾವತ್ತೂ ಅವರನ್ನು ಹಾಗೆ ಟ್ರೀಟ್ ಮಾಡಿರುವುದಿಲ್ಲ.
- ನೀವು ಸಾಫ್ಟ್ ಪರ್ಸನ್ ಆಗಿರುವುದರಿಂದ ಯಾರನ್ನೂ ಉದ್ದೇಶಪೂರ್ವಕವಾಗಿ ಹರ್ಟ ಮಾಡುವುದು ನಿಮಗೆ ಸಾಧ್ಯವಾಗುವುದಿಲ್ಲ
- ಕಣ್ಣೀರು ತುಂಬಿಕೊಳ್ಳದೇ ನಿಮ್ಮಿಂದ ಯಾವ ಎಮೋಷನ್ ನ್ನೂ ಅಭಿವ್ಯಕ್ತಿಸುವುದು ಸಾಧ್ಯವಾಗುವುದೇ ಇಲ್ಲ .
- ನೀವು ಎಷ್ಟು ಸಂವೇದನಾಶೀಲರಾಗಿರುತ್ತೀರಿ ಎಂದರೆ, ಜನರ ವರ್ತನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ನಿಮಗೆ ಕೂಡಲೇ ಗೊತ್ತಾಗಿಬಿಡುತ್ತದೆ.
- ನಿಮ್ಮ ಭಾವನೆಗಳು ತೀವ್ರವಾಗಿರುತ್ತವೆ. ನೀವು ಪ್ರತಿ ಬಾರಿಯೂ ನಿಮ್ಮನ್ನು ಜನರ ಜಾಗೆಯಲ್ಲಿಟ್ಟುಕೊಂಡು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರ.
- ನೀವು ಜನರನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹುಡುಕಲು ಸಿದ್ಧರಾಗಿಬಿಡುತ್ತೀರ. ಆದರೂ ಕೊನೆಗೆ ನೀವು ಒಂಟಿಯಾಗಿಯೇ ಉಳಿದುಕೊಂಡುಬಿಡುತ್ತೀರ.

