ಒಂಟಿತನ ಎನ್ನುವ ಭಯದ ಕಾರಣವಾಗಿಯೇ ದೇವರು ಎನ್ನುವ ಐಡಿಯಾದ ಸೃಷ್ಟಿಯಾಗಿದ್ದು. ನೀವು ಕಣ್ಣು ಮುಚ್ಚಿಕೊಂಡಾಗ ನೀವು ಒಂಟಿಯಾಗಿದ್ದಾರ ಆದರೂ ದೇವರು ಅಲ್ಲಿದ್ದಾನೆ. ನಿಮ್ಮ ಅಂತರಂಗದಲ್ಲಿಯೂ ದೇವರು ಒತ್ತಾಯಪೂರ್ವಕವಾಗಿ ನುಗ್ಗಿ ಬಿಟ್ಟಿದ್ದಾನೆ. ಇದು ಒಂದು ಬಗೆಯ ವಾಯಲೆನ್ಸ್. ದೇವರು ಇಲ್ಲ, ಅದು ಕೇವಲ ನಿಮ್ಮ ಐಡಿಯಾ ಅಷ್ಟೇ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದೇವರು ಒಬ್ಬ ವ್ಯಕ್ತಿ ಎಂಬ ಐಡಿಯಾ, ಒಂಟಿಯಾಗಿ ಇರಲು ಆಗದ ಜನ ಕಟ್ಟಿದ ಕಾಲ್ಪನಿಕ ಕತೆ. ತಮ್ಮ ಒಂಟಿತನದಿಂದ ಗಾಬರಿಯಾಗಿ ಅವರು ದೇವರು ಎನ್ನುವ ವ್ಯಕ್ತಿಯನ್ನ ಸೃಷ್ಟಿ ಮಾಡಿದ್ದಾರೆ. ದೇವರು ಎಲ್ಲಕಡೆಯೂ ಇದ್ದಾನೆ ಎನ್ನುವುದೇ ತಮ್ಮ ಒಂಟಿತನವನ್ನು ನೀಗಿಸಿಕೊಳ್ಳಲು ಜನ ಹರಿಬಿಟ್ಟಿರುವ ಸುಳ್ಳು ಸುದ್ದಿ. ದೇವರು ಯಾವಾಗಲೂ ನಿಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತಿರುತ್ತಾನೆ. ಅವನು ಯಾವಾಗಲೂ ನಿಮ್ಮೊಡನೆ ಇರುತ್ತಾನೆ, ನೀವು ಬಾತ್ ರೂಮಿನಲ್ಲಿ ಇರುವಾಗಲೂ. ಆಗಲಾದರೂ ನಿಮ್ಮನ್ನು ಒಂಟಿಯಾಗಿರಲು ಬಿಡದ ಜಂಟಲ್ ಮನ್ ಅಲ್ಲ ಅವನು. ನೀವು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವಾಗಲು ಅವನು ನಿಮ್ಮ ಪಕ್ಕ ಕೂತಿದ್ದಾನೆ. ನೀವು ನಿಮ್ಮ ಪ್ರೇಮಿಯೊಂದಿಗೆ ಪ್ರೇಮಿಸುತ್ತಿರುವಾಗಲೂ ಅವನು ಅಲ್ಲೇ ನಿಂತಿದ್ದಾನೆ. ಅವನನ್ನು ಜಂಟಲ್ ಮನ್ ಆಗಿರಲು ಬಿಡುವುದೇ ಇಲ್ಲ ನೀವು.
ಒಂಟಿತನ ಎನ್ನುವ ಭಯದ ಕಾರಣವಾಗಿಯೇ ದೇವರು ಎನ್ನುವ ಐಡಿಯಾದ ಸೃಷ್ಟಿಯಾಗಿದ್ದು. ನೀವು ಕಣ್ಣು ಮುಚ್ಚಿಕೊಂಡಾಗ ನೀವು ಒಂಟಿಯಾಗಿದ್ದಾರ ಆದರೂ ದೇವರು ಅಲ್ಲಿದ್ದಾನೆ. ನಿಮ್ಮ ಅಂತರಂಗದಲ್ಲಿಯೂ ದೇವರು ಒತ್ತಾಯಪೂರ್ವಕವಾಗಿ ನುಗ್ಗಿ ಬಿಟ್ಟಿದ್ದಾನೆ. ಇದು ಒಂದು ಬಗೆಯ ವಾಯಲೆನ್ಸ್. ದೇವರು ಇಲ್ಲ, ಅದು ಕೇವಲ ನಿಮ್ಮ ಐಡಿಯಾ ಅಷ್ಟೇ.
ಇದು ಹೇಗೆಂದರೆ ನೀವು ಕತ್ತಲರಾತ್ರಿಯಲ್ಲಿ ಒಂಟಿಯಾಗಿ ಒಂದು ರಸ್ತೆಯ ಮೂಲಕ ಹಾಯ್ದು ಹೋಗುವಾಗ ಅಥವಾ ಕಾಡಿನಲ್ಲಿ ದಾರಿ ಕಳೆದುಕೊಂಡು ಬಿಟ್ಟಾಗ ನಿಮಗೆ ನೀವು ಧೈರ್ಯ ತುಂಬಿಕೊಳ್ಳಲು, ನೀವು ಸಿಳ್ಳೆ ಹೊಡೆಯಲು ಶುರು ಮಾಡುತ್ತೀರಿ. ಇದು ಶುದ್ಧ ಮೂರ್ಖತನ ಆದರೂ ಮಾನಸಿಕವಾಗಿ ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಸೀಟಿ ಹೊಡೆಯುವುದು, ಸಣ್ಣದಾಗಿ ಹಾಡು ಗುನುಗಲು ಶುರುಮಾಡುವುದು ನಿಮ್ಮ ಒಂಟಿತನವನ್ನು ನೀಗಿಸಿಕೊಳ್ಳಲು. ಇದು ನಿಮಗೆ ದಾರಿ ಹುಡುಕಲು ಯಾವ ಸಹಾಯವನ್ನು ಮಾಡುವುದಿಲ್ಲವಾದರೂ ನಿಮಗೆ ನಿಮ್ಮ ಒಂಟಿತನದ ಭಯದಿಂದ ಸ್ವಲ್ಪಕಾಲ ಮುಕ್ತಿಯನ್ನಂತೂ ಕೊಡುತ್ತದೆ.
ನಿಮ್ಮ ಎಲ್ಲ ಆರಾಧನೆಗಳು ಕತ್ತಲೆಯಲ್ಲಿ ಶಿಳ್ಳೆ ಹೊಡೆದಂತೆ ಅಷ್ಟೇ ಹೊರತು ಬೇರೇನೂ ಅಲ್ಲ.
Source: Øshø | The Dhammapada: The Way of the Buddha, Vol 12

