ಯಾರಿಗೆ ಮಾಡದೇ ಇರುವುದರ ಸೌಂದರ್ಯದ ಬಗ್ಗೆ ಗೊತ್ತೋ ಅವರು state of inaction ನ ಪ್ರವೇಶ ಮಾಡುತ್ತಾರೆ. State of Inaction ಎಂದರೆ ಯಾವ ಅಹಂ ಇಲ್ಲದೇ ಮಾಡುವುದು. ಆದರೆ ನಾವು ಹಾಗಲ್ಲ, ನಾವು ಮಾಡುವ ಎಲ್ಲವೂ ಅಹಂ ಕೇಂದ್ರಿತ । Eckhart Tolle ; ಕನ್ನಡ ನಿರೂಪಣೆ: ಚಿದಂಬರ ನರೇಂದ್ರ
‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.
ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.
ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.
~ ಲಾವೋತ್ಸೇ
ಟ್ರೇನ್ ಹತ್ತಿದ ಒಬ್ಬ ವ್ಯಕ್ತಿ ತನ್ನ ಜಾಗದಲ್ಲಿ ಹೋಗಿ ಕುಳಿತುಕೊಂಡ ಆದರೆ ಅವನು ತನ್ನ ಜೊತೆ ತಂದಿದ್ದ ಭಾರವಾದ ಬ್ಯಾಗ್ ಇನ್ನೂ ಅವನ ತಲೆಯ ಮೇಲಿತ್ತು. ಇದನ್ನು ನೋಡಿ ಅವನ ಸಹ ಪ್ರಯಾಣಿಕರಿಗೆ ಆಶ್ಚರ್ಯವಾಯಿತು, ಅವರು ಈ ಕುರಿತು ಅವನನ್ನು ಪ್ರಶ್ನೆ ಮಾಡಿದರು. ಬ್ಯಾಗ್ ನ ಕೆಳಗೆ ಇಟ್ಟರೆ ಟ್ರೇನ್ ನ ಮೇಲೆ ಹೆಚ್ಚಿನ ಭಾರ ಹಾಕಿದ ಹಾಗೆ ಆಗುತ್ತದೆ ಆದ್ದರಿಂದ ಆ ಭಾರವನ್ನು ನಾನೇ ಹೊತ್ತುಕೊಂಡಿದ್ದೇನೆ ಎಂದು ಆ ವ್ಯಕ್ತಿ ಉತ್ತರಿಸಿದ.
ಈ ಮಾತುಗಳನ್ನು ಕೇಳಿ ಸಹಪ್ರಯಾಣಿಕರು ನಗತೊಡಗಿದರು. ಒಬ್ಬ ಪ್ರಯಾಣಿಕ ಮಾತನಾಡಿದ, “ಬಹುಶಃ ನೀನು ಯಾರೋ ಹುಚ್ಚ ಇರಬೇಕು, ಆ ಭಾರವನ್ನು ನೀನು ನಿನ್ನ ತಲೆಯ ಮೇಲೆ ಹೊತ್ತುಕೊಂಡಿದ್ದರೂ ಕೊನೆಗೂ ಆ ಭಾರವನ್ನು ಈ ಟ್ರೇನ್ ಹೊರುತ್ತದೆ. ಯಾಕೆ ಅನಾವಶ್ಯಕವಾಗಿ ಆ ಭಾರವನ್ನು ತಲೆಯ ಮೇಲೆ ಹೊತ್ತುಕೊಂಡಿದ್ದೀಯ, ಇದು ಹುಚ್ಚುತನ ಅಲ್ಲವೆ?”
ಈ ಮಾತುಗಳನ್ನು ಕೇಳಿ ಭಾರ ಹೊತ್ತುಕೊಂಡಿದ್ದ ವ್ಯಕ್ತಿ ಜೋರಾಗಿ ನಗತೊಡಗಿದ. “ನೀವು ಮನೆ ಮಕ್ಕಳು ಇರುವ ಜನ ಎಂದುರೊಂಡಿದ್ದೆ ಆದರೆ ನೀವು ಯಾರೋ ಪಕ್ಕಾ ಸನ್ಯಾಸಿಗಳು ಇರುವ ಹಾಗಿದೆ.”
“ನಾನು ಈ ಭಾರ ಬ್ಯಾಗ್ ನನ್ನ ತಲೆಯ ಮೇಲೆ ಹೊತ್ತುಕೊಂಡಿದ್ದು ಜಗತ್ತಿನಲ್ಲಿ ಈಗ ಆಗುತ್ತಿರುವುದನ್ನ ನಿಮಗೆ ಪರಿಚಯ ಮಾಡಿಕೊಡಲಿಕ್ಕೆ. ನಿಮ್ಮ ಮುಖಗಳನ್ನು ನೋಡಿದರೆ, ಜಗತ್ತಿನ ಭಾರವನ್ನೆಲ್ಲ ನೀವು ತಲೆಯ ಮೇಲೆ ಹೊತ್ತುಕೊಂಡ ಹಾಗಿದೆ. ಆದರೆ ನಿಮಗೆ ಗೊತ್ತಿದೆ ಈ ಟ್ರೇನ್ ನ ಹಾಗೆ ಈ ಜಗತ್ತಿನ ಭಾರವನ್ನೆಲ್ಲ ದೇವರು ತಾನು ಹೊತ್ತುಕೊಂಡಿದ್ದಾನೆ. ಈ ವಿಷಯವನ್ನ ನಾನು ನಿಮಗೆ ನೆನಪು ಮಾಡಿಕೊಡಬೇಕಿತ್ತು”.
ನಂತರ ಆ ವ್ಯಕ್ತಿ ಆ ಭಾರ ಬ್ಯಾಗ್ ಕೆಳಗೆ ಇಟ್ಟ, ಅಷ್ಟೇ ಅಲ್ಲ ಅವನು ಆ ಬ್ಯಾಗ್ ಮೇಲೆ ಕುಳಿತುಕೊಂಡ. “ಇದು ಸನ್ಯಾಸಿಗಳು ಕುಳಿತುಕೊಳ್ಳುವ ಸರಿಯಾದ ವಿಧಾನ. ನಿಜದ ಸನ್ಯಾಸಿ ಯಾವುದನ್ನೂ ಹೊತ್ತುಕೊಳ್ಳುವುದಿಲ್ಲ, ಹೊತ್ತುಕೊಳ್ಳುವುದು ಎಂದರೆ ಅಹಂ ನ ಪೋಷಿಸುವುದು”.
ಯಾರಿಗೆ ಮಾಡದೇ ಇರುವುದರ ಸೌಂದರ್ಯದ ಬಗ್ಗೆ ಗೊತ್ತೋ ಅವರು state of inaction ನ ಪ್ರವೇಶ ಮಾಡುತ್ತಾರೆ. State of Inaction ಎಂದರೆ ಯಾವ ಅಹಂ ಇಲ್ಲದೇ ಮಾಡುವುದು. ಆದರೆ ನಾವು ಹಾಗಲ್ಲ, ನಾವು ಮಾಡುವ ಎಲ್ಲವೂ ಅಹಂ ಕೇಂದ್ರಿತ.
Source: Excerpt From: Tolle, Eckhart. “The Power of Now.”

