ರಾತ್ರಿ ಇದೆಯೆಂದ ಮೇಲೆ ಬೆಳಗೂ ಇದೆ, ಈಗ ಕತ್ತಲು ಇರಬಹುದು ಆದರೆ ಬೆಳಕು ಹತ್ತಿರದಲ್ಲಿಯೇ ಇದೆ. ಯಾವಾಗಲೂ ನಿಮ್ಮ ನಿರ್ಧಾರಗಳನ್ನು ಬೆಳಗಿನ ಸ್ಥಿತಿಯಲ್ಲಿ, ಬೆಳಕು ಇರುವಾಗ ತೆಗೆದುಕೊಳ್ಳಿ. ಆಗ ನಿಮ್ಮ ಬದುಕಿನಲ್ಲಿ ಧನಾತ್ಮಕತೆ ಇರುತ್ತದೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನನ್ನ ಸಂಗಾತಿಯೊಡನೆಯ ಸಂಬಂಧವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧವನ್ನು ಮುಂದುವರೆಸಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ, ಯಾವುದು ಸರಿ ನಿರ್ಧಾರ? ಏನು ಮಾಡುವುದು? ಇದು ಬಹುತೇಕರ ಪ್ರಶ್ನೆ.
ಯಾವುದಕ್ಕೂ ಅವಸರ ಬೇಡ. ಏಕೆಂದರೆ ನಮ್ಮ ಮನಸ್ಸು ಬೇರೆ ಬೇರೆ ಸ್ಥಿತಿಗಳನ್ನು ಹಾಯ್ದು ಹೋಗುತ್ತಿರುತ್ತದೆ, Light moments ಮತ್ತು Dark moments, Day moments ಹಾಗು Night moments. ಮನಸ್ಸು Day moment ಲ್ಲಿ ಇರುವಾಗ ಪ್ರತಿಯೊಂದೂ ಸುಂದರ, ಎಲ್ಲವೂ ನಿಮಗೆ ಸ್ಪಷ್ಟವಾಗಿ ಕಾಣಿಸುತ್ತಿರುತ್ತದೆ ; ಆದರೆ ನಿಮ್ಮ ಮನಸ್ಸು Night moment ಲ್ಲಿರುವಾಗ, ಯಾವುದೂ ಸ್ಪಷ್ಟವಾಗಿ ಕಾಣುವುದಿಲ್ಲ, ಎಲ್ಲೆಲ್ಲೂ ಕತ್ತಲು. ಬಹುತೇಕ ನಿರ್ಧಾರಗಳು ಇಂಥ Dark moment ಗಳಲ್ಲಿಯೇ ಸಂಭವಿಸುತ್ತವೆ. ಈ ಕ್ಷಣಗಳು ನಿಮ್ಮ ಹತಾಶೆಯ ಕ್ಷಣಗಳು, ಇಂಥ ಸಮಯದಲ್ಲಿ ನೀವು low energy ಫೀಲ್ ಮಾಡುತ್ತಿರುತ್ತೀರ. ಇಂಥ ಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಬಹುತೇಕ ತಪ್ಪಾಗಿರುತ್ತವೆ ಏಕೆಂದರೆ ನೀವು ನಿಮ್ಮ ಈ ಸಂಗಾತಿಯೊಂದಿಗೆ ಮಧುರವಾದ ಕ್ಷಣಗಳನ್ನೂ ಅನುಭವಿಸಿದ್ದೀರ.
ರಾತ್ರಿ ಇದೆಯೆಂದ ಮೇಲೆ ಬೆಳಗೂ ಇದೆ, ಈಗ ಕತ್ತಲು ಇರಬಹುದು ಆದರೆ ಬೆಳಕು ಹತ್ತಿರದಲ್ಲಿಯೇ ಇದೆ. ಯಾವಾಗಲೂ ನಿಮ್ಮ ನಿರ್ಧಾರಗಳನ್ನು ಬೆಳಗಿನ ಸ್ಥಿತಿಯಲ್ಲಿ, ಬೆಳಕು ಇರುವಾಗ ತೆಗೆದುಕೊಳ್ಳಿ. ಆಗ ನಿಮ್ಮ ಬದುಕಿನಲ್ಲಿ ಧನಾತ್ಮಕತೆ ಇರುತ್ತದೆ. Dark moment ನಲ್ಲಿ ತೆಗೆದುಕೊಂಡ ನಿರ್ಧಾರಗಳು ನಿಮ್ಮ ಬದುಕಿನಲ್ಲಿ ಋಣಾತ್ಮಕತೆಯನ್ನು ತುಂಬುತ್ತವೆ. ಧಾರ್ಮಿಕ ಮತ್ತು ಅಧಾರ್ಮಿಕ ಮನುಷ್ಯನಲ್ಲಿಯ ವ್ಯತ್ಯಾಸವನ್ನು ನಾನು ಹೀಗೆಯೇ ಗುರುತಿಸುತ್ತೇನೆ. ಧಾರ್ಮಿಕ ಮನುಷ್ಯ ತನ್ನ ನಿರ್ಧಾರಗಳನ್ನು Day moments ಲ್ಲಿ ತೆಗೆದುಕೊಂಡರೆ, ಅಧಾರ್ಮಿಕ ಮನುಷ್ಯನ ನಿರ್ಧಾರಗಳು ಯಾವಾಗಲೂ Dark moments ಲ್ಲಿ.
ಆದ್ದರಿಂದ ಬೆಳಕು ಬರುವ ತನಕ ಯಾವ ನಿರ್ಧಾರಗಳಿಗೂ ಮುಂದಾಗಬೇಡಿ. ಮತ್ತೆ ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸುತ್ತಿರುವಾಗ, ಎಲ್ಲವೂ ಸುಂದರ, ಆಪ್ತವಾಗಿರುವಾಗ ನಿರ್ಧಾರ ಮಾಡಿ. ನೀವು ಬೇರೆಯಾಗಲೇಬೇಕಾಗಿದ್ದರೆ ಈಗ ಬೇರೆಯಾಗಿ. ಕತ್ತಲಿನ ಕ್ಷಣಗಳಲ್ಲಿ ಯಾವ ನಿರ್ಧಾರಕ್ಕೂ ಮುಂದಾಗಬೇಡಿ, ಸಾಧ್ಯವಾದಷ್ಟು ನಿಮ್ಮ ನಿರ್ಧಾರವನ್ನು ಮುಂದೂಡಿ, ಬೆಳಕು ಬರುವ ತನಕ ಕಾಯ್ದು ನಿಮ್ಮ ನಿರ್ಧಾರ ಮಾಡಿ. ಆಗ ನಿಮ್ಮ ನಿರ್ಧಾರ ನಿಮ್ಮ ಮುಂದಿನ ಬದುಕಿನಲ್ಲಿ ಧನಾತ್ಮಕತೆಯನ್ನು ಸಾಧ್ಯಮಾಡುತ್ತದೆ.
ನಿಮ್ಮ ಮನಸಿಗೆ ಸಾಧ್ಯವಾಗುವ ಮೂರನೇಯ ಸ್ಥಿತಿಯೂ ಒಂದಿದೆ, ಅದೇ ಮೀರುವಿಕೆಯ ಸ್ಥಿತಿ TRANSCENDENTAL moment. ಮತ್ತೆ ಮತ್ತೆ ನಿಮ್ಮ ಮನಸ್ಸು ರಾತ್ರಿ ಮತ್ತು ಬೆಳಗಿನ ಸ್ಥಿತಿಗಳನ್ನು ಅನುಭವಿಸುತ್ತಿದ್ದರೆ ಆಗ ನಿಮಗೆ ಈ ಎರಡೂ ಸ್ಥಿತಿಗಳಿಗಿಂತ ಎತ್ತರದ ಈ ಸ್ಥಿತಿಯ ಬಗ್ಗೆ ಗೊತ್ತಾಗುತ್ತದೆ. ಈ ಸ್ಥಿತಿಯಲ್ಲಿ ನಿಮ್ಮ ಸಾಕ್ಷಿ ಪ್ರಜ್ಞೆ ಇನ್ನೂ ಎತ್ತರದಲ್ಲಿರುತ್ತದೆ.
ಹಾಗಾಗಿ ಮೂರು ರೀತಿಯ ನಿರ್ಧಾರಗಳು ನಿಮ್ಮಿಂದ ಸಾಧ್ಯ ಎಂದಾಯ್ತು. ಮೊದಲನೇಯದು Night moments ಲ್ಲಿ ತೆಗೆದುಕೊಂಡ ನಿರ್ಧಾರ, ಇದು ನಿಮ್ಮ ಬದುಕನ್ನು ಮರುಭೂಮಿಯನ್ನಾಗಿಸುತ್ತದೆ. ಮುಂದೆ ಇಲ್ಲಿ ಯಾವುದೂ ಅರಳುವುದಿಲ್ಲ ಹತಾಶೆಯ ಹೊರತಾಗಿ. ಸಂಪೂರ್ಣ ಋಣಾತ್ಮಕತೆಯ ಬದುಕು.
ಎರಡನೇಯದು ಬೆಳಕಿನ ಕ್ಷಣಗಳಲ್ಲಿ ತೆಗೆದುಕೊಂಡ ನಿರ್ಧಾರ. ಈ ನಿರ್ಧಾರ ನಿಮ್ಮ ಬದುಕಿನಲ್ಲಿ ಸಂಭ್ರಮ, ಆನಂದಕ್ಕೆ ಕಾರಣವಾಗುತ್ತದೆ. ಪ್ರತಿಯೊಂದರಲ್ಲೂ ಖುಶಿ ಇದೆ, ಧನಾತ್ಮಕತೆ ಇದೆ, ಸ್ವರ್ಗ ಎಂದರೆ ಇದು.
ಮೂರನೇಯದು ಕತ್ತಲು, ಬೆಳಕು ಎರಡೂ ಅಲ್ಲದ ಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರ. ಕತ್ತಲು ಬೆಳಕು ಎರಡನ್ನೂ ಸಾಕ್ಷಿಯಾಗಿಟ್ಟುಕೊಂಡು ತೆಗೆದುಕೊಂಡ ನಿರ್ಧಾರ. ಇದು ಪರಿಪೂರ್ಣ ನಿರ್ಧಾರ.
Source: Öshö / This is it.

