ಪರಿತ್ಯಾಗದಲ್ಲಿಯೂ ಸೂಕ್ಷ್ಮವಾದ ಅಹಂ ಕಂಡುಬರುತ್ತದೆ. ಆದ್ದರಿಂದ ಬಿಟ್ಟು ಬಿಡುವ ಸೆನ್ಸ್ ಅನ್ನೇ ಬಿಟ್ಟು ಬಿಡಬೇಕು. ಅಂಥ ಮನುಷ್ಯ ಮಾತ್ರ ಸಂಪೂರ್ಣ ಸಮಾಧಾನಿ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಪರಿತ್ಯಾಗದಲ್ಲಿಯೂ (RENUNCIATION) ಕೂಡ ಸೂಕ್ಷ್ಮವಾದ ಅಹಂ ಕಂಡುಬರುತ್ತದೆ. ಖಾಲೀ ತಲೆಯೊಂದಿಗೆ ಓಡಾಡುವ ಬಗ್ಗೆ ಶಮ್ಸ್ ತಬ್ರೀಝಿ ಆಗಿಂದಾಗ್ಗೆ ಹೇಳುತ್ತಿದ್ದ. ಹಾಗೆಂದರೇನು ಎಂದು ಕೇಳಿದಾಗ ಶಮ್ಸ್ ಹೇಳಿದ,
ಸರ್ ಬರ್ಹಾನಾ, ನೇಸ್ತಂ ದರಂ, ಕುಲ್ಹಿ ಚಾರ್ ತರ್ಕ್
ತರ್ಕ ಏ ದುನಿಯಾ
ತರ್ಕ್ ಏ ಉಕ್ವಾ
ತರ್ಕ್ ಏ ಮೌಲಾ
ತರ್ಕ್ ಏ ತರ್ಕ್
ಹೀಗೆಂದರೆ ನನ್ನ ತಲೆ ಈ ನಾಲ್ಕು ಕಿರೀಟಗಳಿಂದ ಕವರ್ ಆಗಿದೆ.
ಮೊದಲನೇಯದು ಜಗತ್ತಿನ ಪರಿತ್ಯಾಗ, ತರ್ಕ ಏ ದುನಿಯಾ.
ಎರಡನೇಯದು ಸ್ವರ್ಗದ ಪರಿತ್ಯಾಗ, ತರ್ಕ್ ಏ ಉಕ್ವಾ.
ಮೂರನೇಯದು ಭಗವಂತನ ಪರಿತ್ಯಾಗ, ತರ್ಕ್ ಏ ಮೌಲಾ.
ನಾಲ್ಕನೇಯದು ಇಚ್ಛಾಶಕ್ತಿಯ ಪರಿತ್ಯಾಗ, ತರ್ಕ್ ಏ ತರ್ಕ.
ಈ ನಾಲ್ಕನೇಯದರ ಮೂಲಕ ಮೊದಲ ಮೂರು ಪರಿತ್ಯಾಗಗಳನ್ನು ಸಾಧಿಸಲಾಗುತ್ತದೆ.
ತರ್ಕ್ ಏ ಮೌಲಾ, ಭಗವಂತನ ಪರಿತ್ಯಾಗ ಎಂದರೆ ಭಗವಂತನನ್ನು ಮರೆಯುವುದಲ್ಲ, ನಾಸ್ತಿಕರಾಗುವುದಲ್ಲ. ದೇವರನ್ನ ಹೊರಗೆ ಹುಡುಕುವುದನ್ನ ನಿಲ್ಲಿಸುವುದು, ಏಕೆಂದರೆ ದೇವರು ಸದಾ ಭಕ್ತರ ಹೃದಯದಲ್ಲಿ ವಾಸ ಮಾಡುತ್ತಾನೆ. ಆದ್ದರಿಂದ ಸ್ವಂತ (oneself) ಮತ್ತು ದೇವರ (him) ನಡುವೆ ವ್ಯತ್ಯಾಸ ಮಾಡುವುದು ಬಹಳ ಕಠಿಣ. ಯಾವಾಗ ಒಬ್ಬರಿಗೆ ತಾನು ಮತ್ತು ದೇವರು ಒಂದೇ ಎನ್ನುವುದು ಅರ್ಥವಾಗುತ್ತದೋ ಆಗ ಹುಡುಕಲಿಕ್ಕೆ ಬೇರೆ ಏನಿದೆ?
ಯಾರನ್ನ ಹುಡುಕಬೇಕಿದೆ?
ಆಗ ಅವನನ್ನು, ಹುಡುಕುವ ಹುಕಿ ತಾನೇ ಬಿಟ್ಟು ಹೋಗುತ್ತದೆ.
ತರ್ಕ್ ಏ ತರ್ಕ್ ಬಹಳ ಮುಖ್ಯವಾದದ್ದು. ಹಾಗೆಂದರೆ ಬಿಟ್ಟು ಬಿಡುವ ಸೆನ್ಸ್ ಅನ್ನೇ ಬಿಟ್ಟು ಬಿಡಬೇಕು. ಅಂಥ ಮನುಷ್ಯ ಮಾತ್ರ ಸಂಪೂರ್ಣ ಸಮಾಧಾನಿ.

