ಖಂಡಿತವಾಗಿ ನೋಡಲು ಆಕರ್ಷಕವಾಗಿರುವುದು ಒಂದು ಪ್ಲಸ್ ಪಾಯಿಂಟ್. ಅದು ಒಬ್ಬರ ಆತ್ಮವಿಶ್ವಾಸ ಹೆಚ್ಚಿಸುವಿಕೆಯಲ್ಲಿ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ತಕ್ಕಮಟ್ಟಿಗೆ ಸಹಾಯ ಮಾಡಬಹುದು ಆದರೆ ಸುಂದರವಾಗಿರುವುದು ಎಂದರೆ ಇಷ್ಟೇನೇ? ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ತುಂಟ ನಲವತ್ತು ನಮ್ಮನ್ನೆಲ್ಲ ಆವರಿಸಿಕೊಂಡಿದ್ದಾಗ ಒಮ್ಮೆ ನಾವೆಲ್ಲ ಸ್ಕೂಲ್ ಗೆಳೆಯರು ಸ್ಕೂಲ್ ರೀ ಯುನಿಯನ್ ಅಂತ ಒಟ್ಟಿಗೆ ಸೇರಿಕೊಂಡಿದ್ದೆವು. ನನ್ನ ಗೆಳೆಯನೊಬ್ಬ ಹೇಳಿದ, “ನೋಡು ಇವತ್ತಿಗೂ ಕೆಲ ಹುಡುಗಿಯರು ಎಷ್ಟು ಸುಂದರವಾಗಿದ್ದಾರೆ, ನನ್ನ ಸ್ಕೂಲ್ ಕ್ರಶ್ ನ ನೋಡುತ್ತಿದ್ದರೆ ಇವತ್ತಿಗೂ ನನಗೆ ಎದೆಬಡಿತ ನಿಂತುಹೋದಂತಾಗುತ್ತದೆ. ಆದರೆ ಈ ಹುಡುಗರು ಎಷ್ಟು ವಯಸ್ಸಾದಂತೆ ಕಾಣುತ್ತಿದ್ದಾರೆ, ಕೆಲವರಿಗೆ ಕೂದಲು ಬಿದ್ದುಹೋಗಿ ತಲೆ ಬೋಳು ಬೋಳಾಗಿದೆ, ಕೆಲವರಿಗೆ ಹೊಟ್ಟೆ ಬಂದಿದೆ, ಕೆಲವರ ಮುಖ ಕಿವಿಚಿದಂತಾಗಿದೆ”.
ಗೆಳೆಯನ ಈ ಮಾತುಗಳು ನನ್ನ ತಲೆಕೆಡೆಸಿದವು, ಹಾಗಾದರೆ ಒಬ್ಬ ವ್ಯಕ್ತಿಯನ್ನ ಸುಂದರವಾಗಿಸುವುದು ಏನು? ಕೇವಲ ಲುಕ್ಸ್ ?
ಖಂಡಿತವಾಗಿ ನೋಡಲು ಆಕರ್ಷಕವಾಗಿರುವುದು ಒಂದು ಪ್ಲಸ್ ಪಾಯಿಂಟ್. ಅದು ಒಬ್ಬರ ಆತ್ಮವಿಶ್ವಾಸ ಹೆಚ್ಚಿಸುವಿಕೆಯಲ್ಲಿ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ತಕ್ಕಮಟ್ಟಿಗೆ ಸಹಾಯ ಮಾಡಬಹುದು ಆದರೆ ಸುಂದರವಾಗಿರುವುದು ಎಂದರೆ ಇಷ್ಟೇನೇ?
ನನ್ನ ಪ್ರಕಾರ “ಸುಂದರವಾಗಿ ಕಾಣಿಸಿಕೊಳ್ಳುವುದು” ಮತ್ತು “ಸುಂದರವಾಗಿ ಇರುವುದು” ಈ ಎರಡರ ನಡುವೆ ಅಗಾಧ ವ್ಯತ್ಯಾಸವಿದೆ.
ಹೆಂಗಸೊಬ್ಬಳು ಪ್ರೆಗ್ನೆನ್ಸಿಯ ಸಮಯದಲ್ಲಿ ಬದಲಾದ ತನ್ನ ದೇಹದ ಕುರಿತು ಕಾಂಪ್ಲೆಕ್ಸ್ ಬೆಳೆಸಿಕೊಂಡಿರಬಹುದು ಆದರೆ ಆಕೆ, ತನ್ನ ಕುಟುಂಬದ ಅನ್ ಕಂಡಿಷನಲ್ ಲವ್ ನ ಮೂಲ ಸ್ರೋತ ……… ಇದು ಬ್ಯೂಟಿಫುಲ್.
ಪ್ರೊಫೆಷನಲ್ ಸವಾಲುಗಳಿಂದ ನಲುಗಿ ಹೋಗಿರುವ ಬಕ್ಕ ತಲೆಯ ಧಡೂತಿ ವ್ಯಕ್ತಿ ತನ್ನ ದೇಹದ ಕಾರಣವಾಗಿ ಜನರ ಮಾತುಗಳಿಗೆ ಸಿಲುಕಿರಬಹುದು ಆದರೆ, ಆ ವ್ಯಕ್ತಿ ತನ್ನ ಇಡಿ ಕುಟುಂಬವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾನೆ…… ಇದು ಸುಂದರ.
ವರ್ಕಿಂಗ್ ಲೇಡಿಯೊಬ್ಬಳಿಗೆ ತನ್ನ ಆಫೀಸು ಮತ್ತು ಮನೆ ಕೆಲಸಗಳ ನಡುವೆ ತನ್ನ ದೇಹ ಸೌಷ್ಚವದ ಬಗ್ಗೆ ಮುತುವರ್ಜಿ ವಹಿಸುವುದು ಸಾಧ್ಯವಾಗುತ್ತಿಲ್ಲ ಆದರೆ, ಆಕೆ ತನ್ನ ಕಾಯಿಲೆಯ ಅತ್ತೆ ಮತ್ತು ಹಟಮಾರಿ ಮಕ್ಕಳನ್ನು ಯಶಸ್ವಿಯಾಗಿ ಮ್ಯಾನೇಜ್ ಮಾಡುತ್ತಿದ್ದಾಳೆ….. ಇದು ಆಕರ್ಷಕ.
ಅವರ ಪ್ರೀತಿ ಮತ್ತು ಕಾಳಜಿಯಿಂದಾಗಿ ಅವರು ಹರಡುತ್ತಿರುವ ಸುಗಂಧ ಎಂಥ ಬೆಲೆಬಾಳುವ ಪರಫ್ಯೂಂ ನ ಸುಗಂಧಕ್ಕಿಂತಲೂ ಬೆಸ್ಟ್.
ಕೊನೆಗೂ ಒಮ್ಮೆ ದೇಹದ ಸೌಂದರ್ಯ ಕಡಿಮೆಯಾಗುವಂಥದೇ ಆದರೆ ಆತ್ಮದ ಚೆಲುವು ಸದಾ ಕಾಲ ನಮ್ಮನ್ನು ಆಕರ್ಷಕವಾಗಿ ಪ್ರಸ್ತುತಪಡಿಸುತ್ತಿರುತ್ತದೆ.
ವೈಯಕ್ತಿಕವಾಗಿ ನೀವು ಹೇಗೆ “ಕಾಣಿಸುತ್ತೀರಿ” ಎನ್ನುವುದು ಕೆಲ ನಿಮಿಷಗಳವರೆಗೆ ಮಾತ್ರ ಮ್ಯಾಟರ್ ಆಗುತ್ತದೆ ಆದರೆ ನೀವು ಹೇಗೆ “ಇದ್ದೀರಿ” ಎನ್ನುವುದು ಮಾತ್ರ ಇಡೀ ಲೈಫ್ ಟೈಂ ಗೆ ಮ್ಯಾಟರ್ ಆಗುವ ವಿಷಯ.
ಸ್ಟೇ ಬ್ಯೂಟಿಫುಲ್……

