ಯಾವತ್ತೂ ಎದೆಗುಂದಬೇಡಿ. ನಿಮ್ಮಲ್ಲಿ ನಿಮಗೆ ನಂಬಿಕೆಯಿರಲಿ. Be Passionate. ಕಷ್ಟಪಟ್ಟು ಇಷ್ಟಪಟ್ಟು ಕೆಲಸ ಮಾಡಿ. It’s never too late… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
17 ವೇ ವಯಸ್ಸಿನಲ್ಲಿ ಆಕೆ ಕಾಲೇಜಿನಿಂದ ತಿರಸ್ಕೃತಳಾದಳು.
ಆಕೆಯ 25 ವಯಸ್ಸಿನಲ್ಲಿ ಅವಳ ತಾಯಿ ಕಾಯಿಲೆಯಿಂದ ತೀರಿಕೊಂಡಳು.
26 ನೇಯ ವಯಸ್ಸಿನಲ್ಲಿ ಆಕೆಗೆ ಗರ್ಭಪಾತವಾಯಿತು.
27 ನೇಯ ವಯಸ್ಸಿನಲ್ಲಿ ಅವಳ ಮದುವೆಯಾಯಿತು.
ಅವಳ ಗಂಡ ಆಕೆಯನ್ನ ಹೊಡೆದು ಬಡೆದು ಮಾಡುತ್ತಿದ್ದ, ಈ ಎಲ್ಲದರ ನಡುವೆಯೇ ಆಕೆಗೆ ಮಗಳು ಹುಟ್ಟಿದಳು.
28 ನೇಯ ವಯಸ್ಸಿನಲ್ಲಿ ಆಕೆಯ ಡಿವೋರ್ಸ್ ಆಯಿತು. ಆಕೆ ತೀವ್ರ ಡಿಪ್ರೆಶ್ಶನ್ ಗೆ ಗುರಿಯಾದಳು.
30 ನೇಯ ವಯಸ್ಸಿನಲ್ಲಿ ಆಕೆಗೆ ಈ ಜೀವನ ಸಾಕು ಅನಿಸತೊಡಗಿತು. ಆದರೂ ಧೃತಿಗೆಡದೆ ತನ್ನ ಸಮಯವನ್ನೆಲ್ಲ ತನಗೆ ಚೆನ್ನಾಗಿ ಗೊತ್ತಿದ್ದ ಒಂದು ಪ್ಯಾಶನ್ ಮೇಲೆ ಆಕೆ ಕೇಂದ್ರೀಕರಿಸಿದಳು.
31 ನೇಯ ವಯಸ್ಸಿನಲ್ಲಿ ಆಕೆ ತನ್ನ ಮೊದಲ ಬುಕ್ ಪ್ರಕಟಿಸಿದಳು.
35 ನೇಯ ವಯಸ್ಸಿನಲ್ಲಿ ಅವಳ 4 ಪುಸ್ತಕಗಳು ಪ್ರಕಟಗೊಂಡವು ಮತ್ತು ಅವಳನ್ನು ವರ್ಷದ ಲೇಖಕಿ ಎಂದು ಗುರುತಿಸಲಾಯಿತು.
42 ನೇಯ ವಯಸ್ಸಿನಲ್ಲಿ ಅವಳ ಹೊಸ ಪುಸ್ತಕ ಪ್ರಕಟವಾದ ಮೊದಲ ದಿನವೇ 11 ಮಿಲಿಯನ್ ಕಾಪಿಗಳು ಮಾರಾಟವಾದವು.
ಇವತ್ತು ಆಕೆ 15 ಬಿಲಿಯನ್ ಡಾಲರ್ ಬೆಲೆಬಾಳುವ ಒಂದು ಗ್ಲೋಬಲ್ ಬ್ರ್ಯಾಂಡ್ .
ನೆನಪಿದೆಯಾ 30 ನೇಯ ವಯಸ್ಸಿನಲ್ಲಿ ಆಕೆ ಆತ್ಮಹತ್ಯೆಯ ಕುರಿತು ಆಲೋಚಿಸಿದ್ದಳು.
ಯಾವತ್ತೂ ಎದೆಗುಂದಬೇಡಿ. ನಿಮ್ಮಲ್ಲಿ ನಿಮಗೆ ನಂಬಿಕೆಯಿರಲಿ. Be Passionate. ಕಷ್ಟಪಟ್ಟು ಇಷ್ಟಪಟ್ಟು ಕೆಲಸ ಮಾಡಿ. It’s never too late.
ಆಕೆ ಯಾರು ಗೊತ್ತಾ
ಅವಳ ಹೆಸರು J. K. ರೌಲಿಂಗ್. ಆಕೆ ಜಗತ್ಪ್ರಸಿದ್ಧ ಹ್ಯಾರಿ ಪಾಟರ್ ಸರಣಿಯ ಲೇಖಕಿ.

