ಟೆಸ್ಟ್ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ ವಿದ್ಯಾರ್ಥಿಗಳಿಗೆ ದೊಡ್ಡ ಪರೀಕ್ಷೆಯೇ ಕಾದಿತ್ತು! ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಂದು ದಿನ ನಾಲ್ಕು ಜನ ಕಾಲೇಜು ಹುಡುಗರು ನಾಳೆ ಕ್ಲಾಸ್ ನಲ್ಲಿ ಟೆಸ್ಟ್ ಅಂತ ಗೊತ್ತಿದ್ದರೂ ರಾತ್ರಿಯಿಡೀ ಪಾರ್ಟಿ ಮಾಡಿದರು. ಮರುದಿನ ಮುಂಜಾನೆ ಅವರು ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ಒಂದು ಪ್ಲಾನ್ ಮಾಡಿದರು. ನಾಲ್ವರೂ ತಮ್ಮ ಬಟ್ಟೆ ಕೊಳೆ ಮಾಡಿಕೊಂಡು ಟೀಚರ್ ರೂಮಿಗೆ ಹೋದರು. ಹಿಂದಿನ ರಾತ್ರಿ ತಮ್ಮ ಕಾರ್ ಪಂಕ್ಚರ್ ಆಯಿತೆಂದೂ, ಇಡೀ ರಾತ್ರಿ ಅದನ್ನು ತಳ್ಳಿಕೊಂಡು ಕ್ಯಾಂಪಸ್ ಗೆ ಬರಬೇಕಾಯಿತೆಂದೂ ತಮ್ಮ ಕಷ್ಟ ಹೇಳಿಕೊಂಡರು.
ಟೀಚರ್, ಈ ಹುಡುಗರ ಮಾತು ಸಾವಧಾನವಾಗಿ ಕೇಳಿ ಅವರೇ ಒಂದು ಸಲಹೆ ಕೊಟ್ಟರು, “ಹಾಗಾದರೆ ಇವತ್ತು ನೀವು ಟೆಸ್ಟ್ ಬರೆಯುವುದು ಬೇಡ, ನಾಳೆ ಬರೆಯೋರಂತೆ”. ಟೀಚರ್ ಮಾತು ಕೇಳಿ ಹುಡುಗರಿಗೆ ಬಹಳ ಖುಶಿಯಾಯಿತು.
ಮರುದಿನ ಟೆಸ್ಟ್ ಬರೆಯಲು ಬಂದ ನಾಲ್ವರೂ ಹುಡಗರನ್ನು ಟೀಚರ್ ನಾಲ್ಕು ಬೇರೆ ಬೇರೆ ರೂಮುಗಳಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆ ಹಂಚಿದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಎರಡೇ ಪ್ರಶ್ನೆಗಳಿದ್ದವು.
- ನಿಮ್ಮ ಹೆಸರು ………….. (೧)
- ನಿನ್ನೆ ಕಾರ್ ನ ಯಾವ ಟಯರ್ ಪಂಕ್ಚರ್ ಆಗಿತ್ತು
a. Front Right
b. Front Left
c. Back Right
d. Back Left
- ನಿನ್ನೆ ಕಾರ್ ನ ಯಾವ ಟಯರ್ ಪಂಕ್ಚರ್ ಆಗಿತ್ತು
ಈ ಕಥೆಯ ನೀತಿ ಏನೆಂದರೆ, ನಿಮ್ಮ ಕಾರ್ಯಾಚರಣೆಗಳನ್ನ ಪೂರ್ತಿಯಾಗಿ ಪ್ಲಾನ್ ಮಾಡಬೇಕು, ನಿಮ್ಮ ನಿರ್ಧಾರಗಳ ಹೊಣೆಯನ್ನು ನೀವೇ ಸ್ವತಃ ಹೊರಬೇಕು. ಬೇರೆಯವರ ಮೇಲೆ ನಿಮ್ಮ ಜನಾಬ್ದಾರಿಯನ್ನ ಪಾಸ್ ಮಾಡುವಂತಿಲ್ಲ.

