“ಅಸ್ತಿತ್ವದ ಕುರಿತು ಬುದ್ಧನದು ಅತ್ಯಂತ ವಿಭಿನ್ನವಾದ ತಿಳುವಳಿಕೆ. ಅವನ ಪ್ರಕಾರ ಹುಟ್ಟು ಮತ್ತು ಸಾವು ಎನ್ನುವ ಸಂಗತಿಗಳು ಕೇವಲ ಪರಿಕಲ್ಪನೆಗಳೇ (notions) ಹೊರತು ವಾಸ್ತವವಲ್ಲ” ಅನ್ನುತ್ತಾರೆ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಅತ್ಯಂತ ದೊಡ್ಡ ಭಯ ಎಂದರೆ ಸತ್ತ ಮೇಲೆ ನಾವು ಏನೂ ಇಲ್ಲವಾಗಿಬಿಡುತ್ತೇವೆ (nothing) ಎನ್ನುವುದು. ನಮ್ಮ ಬಹುತೇಕರ ನಂಬಿಕೆ ಏನೆಂದರೆ, ನಮ್ಮ ಇಡೀ ಅಸ್ತಿತ್ವ , ಕೇವಲ ನಾವು ಹುಟ್ಟಿದ ಕ್ಷಣದಿಂದ ಅಥವಾ ನಾವು ತಾಯಿಯ ಗರ್ಭದಲ್ಲಿ conceive ಆದ ಕ್ಷಣದಿಂದ ನಾವು ಸಾಯುವ ಕ್ಷಣದವರೆಗಿನ ಲೈಫ್ ಸ್ಪ್ಯಾನ್ ಗೆ ಸೀಮಿತವಾಗಿದೆ ಎನ್ನುವುದು. ನಮ್ಮ ನಂಬಿಕೆ ಏನೆಂದರೆ ನಾವು ಹುಟ್ಟಿದ್ದು ನಂಥಿಂಗ್ ನಿಂದ ಸತ್ತ ಮೇಲೆ ನಾವು ನಥಿಂಗ್ ಆಗುತ್ತೇವೆ ಎನ್ನುವುದು. ಮತ್ತು ನಮ್ಮನ್ನು ತುಂಬಿಕೊಂಡಿರುವ ಇನ್ನೊಂದು ದೊಡ್ಡ ಭಯ ವಿನಾಶದ ಕುರಿತಾದದ್ದು.
ಆದರೆ ಅಸ್ತಿತ್ವದ ಕುರಿತು ಬುದ್ಧನದು ಅತ್ಯಂತ ವಿಭಿನ್ನವಾದ ತಿಳುವಳಿಕೆ. ಅವನ ಪ್ರಕಾರ ಹುಟ್ಟು ಮತ್ತು ಸಾವು ಎನ್ನುವ ಸಂಗತಿಗಳು ಕೇವಲ ಪರಿಕಲ್ಪನೆಗಳೇ (notions) ಹೊರತು ವಾಸ್ತವವಲ್ಲ. ಅವು ನಿಜ ಎಂದುಕೊಳ್ಳುವ ನಮ್ಮ ಅತ್ಯಂತ ಶಕ್ತಿಶಾಲಿ ಭ್ರಮೆ ನಮ್ಮ ಎಲ್ಲ ಸಂಕಟಗಳಿಗೂ ಮೂಲ ಕಾರಣ. ಬುದ್ಧ ಕಲಿಸಿದ್ದು ಹುಟ್ಟು ಎನ್ನುವುದು ಇಲ್ಲ, ಸಾವು ಎನ್ನುವುದು ಇಲ್ಲ ; ಈ ಅಸ್ತಿತ್ವಕ್ಕೆ ಬರುವುದು ಎನ್ನುವುದು ಇಲ್ಲ, ಈ ಅಸ್ತಿತ್ವದಿಂದ ಹೋಗುವುದು ಎನ್ನುವುದು ಇಲ್ಲ; ಒಂದೇ ಥರ (same) ಎನ್ನುವುದು ಇಲ್ಲ, ವಿಭಿನ್ನ (different) ಎನ್ನುವುದು ಇಲ್ಲ ; ಶಾಶ್ವತ ಸೆಲ್ಫ್ ಎನ್ನುವುದು ಇಲ್ಲ, ವಿನಾಶ ಎನ್ನುವುದೂ ಇಲ್ಲ.
ನಮ್ಮ ವಿನಾಶ ಸಾಧ್ಯವಿಲ್ಲ ಎನ್ನುವುದು ಯಾವಾಗ ನಮ್ಮ ತಿಳುವಳಿಕೆಯ ಭಾಗವಾಗುತ್ತದೆಯೋ ಆಗ ನಾವು ಭಯದಿಂದ ಲಿಬರೇಟ್ ಆಗುತ್ತೇವೆ. ಇದು ಒಂದು ದೊಡ್ಡ ರಿಲೀಫ್. ಆಗ ನಾವು ಬದುಕನ್ನ ಆನಂದಿಸುತ್ತ ಹೊಸ ರೀತಿಯಲ್ಲಿ ಅಪ್ರಿಷಿಯೇಟ್ ಮಾಡುವುದು ಸಾಧ್ಯವಾಗುತ್ತದೆ.

