“ಗೆದ್ದವರಿಗೆ ಎಲ್ಲ ಹಣ್ಣು ತಿನ್ನುವ ಅವಕಾಶವಿತ್ತಲ್ಲ, ಯಾಕೆ ಹೀಗೆ ಮಾಡಿದಿರಿ?” ಎಂದು ಆ ಮಾನವ ಶಾಸ್ತ್ರಜ್ಞ ಮಕ್ಕಳನ್ನು ಕೇಳಿದಾಗ, ಆ ಮಕ್ಕಳು ಕೊಟ್ಟ ಉತ್ತರ ಏನು ಗೊತ್ತಾ?: ಚಿದಂಬರ ನರೇಂದ್ರ
ಒಬ್ಬ ಮಾನವ ಶಾಸ್ತ್ರಜ್ಞ ಆಫ್ರಿಕನ್ ಬುಡಕಟ್ಟಿನ ಮಕ್ಕಳನ್ನ ಒಂದು ಆಟಕ್ಕೆ ಆಹ್ವಾನಿಸುತ್ತಾನೆ. ಅವನು ಬಾಸ್ಕೆಟ್ ನಲ್ಲಿ ಹಣ್ಣುಗಳನ್ನ ತುಂಬಿ ಒಂದು ಮರದ ಬಳಿ ಇಟ್ಟು , ಯಾರು ಮೊದಲು ಓಡಿ ಹೋಗಿ ಆ ಮರವನ್ನು ತಲುಪುತ್ತಾರೋ ಅವರಿಗೆ ಆ ಬಾಸ್ಕೆಟ್ ನಲ್ಲಿಯ ಎಲ್ಲ ಹಣ್ಣುಗಳು ಬಹುಮಾನವಾಗಿ ಸಿಗುತ್ತವೆ ಎಂದು ಘೋಷಣೆ ಮಾಡುತ್ತಾನೆ.
ಒಂದು, ಎರಡು, ಮೂರು …. ಎಂದು ಕೂಗುತ್ತ ಅವನು ರೇಸ್ ನ ಶುರುವಾತನ್ನು ಘೋಷಿಸಿದಾಗ, ಅಲ್ಲಿ ಅವನಿಗೊಂದು ಆಶ್ಚರ್ಯ ಕಾದಿರುತ್ತದೆ. ಎಲ್ಲ ಮಕ್ಕಳು ಗಟ್ಟಿಯಾಗಿ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಓಡಿ ಹೋಗಿ, ಎಲ್ಲರೂ ಆ ಮರವನ್ನು ಒಂದೇ ಸಮಯಕ್ಕೆ ತಲುಪಿ ಅಲ್ಲಿ ಬಾಸ್ಕೆಟ್ ನಲ್ಲಿದ್ದ ಹಣ್ಣುಗಳನ್ನು ಹಂಚಿಕೊಳ್ಳುತ್ತಾರೆ.
“ಗೆದ್ದವರಿಗೆ ಎಲ್ಲ ಹಣ್ಣು ತಿನ್ನುವ ಅವಕಾಶವಿತ್ತಲ್ಲ, ಯಾಕೆ ಹೀಗೆ ಮಾಡಿದಿರಿ? “ ಎಂದು ಆ ಮಾನವ ಶಾಸ್ತ್ರಜ್ಞ ಮಕ್ಕಳನ್ನು ಕೇಳಿದಾಗ, ಆ ಮಕ್ಕಳು ಕೊಟ್ಟ ಉತ್ತರ,
“ಉಬುಂಟು” (Ubuntu).
ಬೇರೆ ಎಲ್ಲರೂ ಸೋತು ದುಃಖದಲ್ಲಿರುವಾಗ, ಒಬ್ಬರು ಮಾತ್ರ ಗೆಲುವಿನ ಖುಶಿಯ ಆಚರಿಸುವುದು ಹೇಗೆ ಸಾಧ್ಯ?
ಅವರ ಭಾಷೆಯಲ್ಲಿ ಉಬುಂಟು ಎಂದರೆ, “ನಾವು ಇರುವ ಕಾರಣಕ್ಕೇ ನಾನು ಇರುವುದು” (I exist because we exist).
Source : Karen Pavlansky

