ಯಾರು ಕಷ್ಟ ಕಾಲದಲ್ಲಿ ನಿಮ್ಮ ಜೊತೆ ಇರುವುದಿಲ್ಲವೋ, ನಿಮ್ಮ ಗೆಲುವಿನ ಕಾಲದಲ್ಲಿ ನಿಮ್ಮ ಜೊತೆ ಇರಲು ಅವರು ಅರ್ಹರಲ್ಲ! ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಅಪ್ಪ ಮಗಳು ಹಳ್ಳಿಯ ಹೊರಗಿನ ಫಾರ್ಮ್ ಹೌಸ್ ನಲ್ಲಿ ವಾಸವಾಗಿದ್ದರು. ಒಂದು ದಿನ ವ್ಯಾಪಾರದಲ್ಲಿ ಲಾಭ ಗಳಿಸಿದ ಅಪ್ಪ, ರುಚಿ ರುಚಿಯಾದ ಮಾಂಸದಡುಗೆ ಮಾಡಿ ಮಗಳಿಗೆ ಹೇಳಿದ,
“ಹಳ್ಳಿಯಲ್ಲಿರುವ ರಿಲೇಟಿವ್ಸ್ ನ ನಮ್ಮ ಮನೆಗೆ ಊಟಕ್ಕೆ ಬರುವಂತೆ ಹೇಳು, ಇವತ್ತು ಹಬ್ಬ ಮಾಡೋಣ”.
ಮಗಳು, ಹಳ್ಳಿಯ ಬೀದಿಗೆ ಹೋಗಿ ಕೂಗು ಹಾಕಿದಳು,
“ನಮ್ಮ ಮನೆಗೆ ಬೆಂಕಿ ಬಿದ್ದಿದೆ ಯಾರಾದರೂ ದಯವಿಟ್ಟು ಹೆಲ್ಪ್ ಮಾಡಿ”
ಕೆಲವೇ ಕೆಲವು ಜನರು ಮನೆ ಬಿಟ್ಟು ಹೊರಗೆ ಬಂದರು. ಬಾಕಿ ಜನ ತಮಗೆ ಏನೂ ಕೇಳಿಸಿಯೇ ಇಲ್ಲವೇನೋ ಎಂಬಂತೆ ಮನೆಯ ಬಾಗಿಲನ್ನೇ ತೆರೆಯಲಿಲ್ಲ.
ಮಗಳೊಂದಿಗೆ ಫಾರ್ಮ್ ಹೌಸಿಗೆ ಬಂದ ಜನ ರಾತ್ರಿಯವರೆಗೆ ಪಾರ್ಟಿ ಮಾಡಿದರು.
ಜನ ಎಲ್ಲ ತಮ್ಮ ಮನೆಗೆ ಹೋದ ಮೇಲೆ ಅಪ್ಪ, ಮಗಳನ್ನು ಪ್ರಶ್ನೆ ಮಾಡಿದ,
“ಪಾರ್ಟಿ ಗೆ ಬಂದ ಜನರಲ್ಲಿ ನಮ್ಮ ರಿಲೇಟಿವ್ಸ್ ಒಬ್ಬರೂ ಇರಲಿಲ್ಲವಲ್ಲ. ನೀವು ಯಾರಿಗೆ ಆಮಂತ್ರಣ ಕೊಟ್ಟಿದ್ದೆ?”
ಮಗಳು ಉತ್ತರಿಸಿದಳು,
“ನಮ್ಮ ಮನೆಗೆ ಬಂದವರು ಪಾರ್ಟಿಗೆ ಬಂದವರಲ್ಲ, ನಮ್ಮ ಮನೆಗೆ ಹತ್ತಿರಬಹುದಾಗಿದ್ದ ಬೆಂಕಿ ಆರಿಸಲು ಬಂದವರು. ನಮ್ಮ ಗೌರವಕ್ಕೆ, ಆತಿಥ್ಯಕ್ಕೆ , ಮತ್ತು ಮೇಜುವಾನಿಗೆ ಅರ್ಹರಾದವರು ಇವರು ಮಾತ್ರ”.
ಯಾರು ಕಷ್ಟ ಕಾಲದಲ್ಲಿ ನಿಮ್ಮ ಜೊತೆ ಇರುವುದಿಲ್ಲವೋ, ನಿಮ್ಮ ಗೆಲುವಿನ ಕಾಲದಲ್ಲಿ ನಿಮ್ಮ ಜೊತೆ ಇರಲು ಅವರು ಅರ್ಹರಲ್ಲ.

