ಯಶಸ್ವಿಯಾಗಬಯಸುವ ಮಹಿಳೆಯರಿಗೆ ಇಲ್ಲಿವೆ ಕೆಲವು ಸಕ್ಸಸ್ ಸೂತ್ರ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಬ್ಬ ಯಶಸ್ವಿ ಮಹಿಳೆಯನ್ನ ಅವರ ಸಕ್ಸಸ್ ನ ಗುಟ್ಟು ಏನು ಎಂದು ಕೇಳಿದಾಗ ಅವರು ಮುಗುಳ್ನಗುತ್ತ ಹೀಗೆ ಹೇಳಿದರು:
- ಯಾವಾಗ ನಾನು ಸಣ್ಣ ಫೈಟ್ ಗಳನ್ನ ಸಣ್ಣ ಜನರಿಗೆ ಬಿಡುತ್ತ ಮುಂದುವರೆದೆನೋ ಆಗ ನಾನು ಯಶಸ್ವಿಯಾಗತೊಡಗಿದೆ.
- ನನ್ನ ಬಗ್ಗೆ ಗಾಸಿಪ್ ಮಾಡುವವರೊಂದಿಗೆ ಫೈಟ್ ಮಾಡುವುದನ್ನ ನಿಲ್ಲಿಸಿದೆ.
- ಮೊದಲು ನಾನು ಮನೆಯ ಜನರೊಂದಿಗಿನ ಫೈಟ್ ನಿಲ್ಲಿಸಿದೆ.
- ಅಟೆನ್ಷನ್ ಸಲುವಾಗಿ ಫೈಟ್ ಮಾಡುವುದನ್ನ ನಿಲ್ಲಿಸಿದೆ.
- ಜನರಿಗೆ ನನ್ನಿಂದ ಇರುವ ನಿರೀಕ್ಷೆಗಳಿಗಾಗಿ ಫೈಟ್ ಮಾಡುವುದನ್ನ ನಿಲ್ಲಿಸಿದೆ.
- ನಾನು ನನ್ನ ಹಕ್ಕುಗಳಿಗಾಗಿ ವಿವೇಚನಾರಹಿತ ಜನರೊಡನೆ ಫೈಟ್ ಮಾಡುವುದನ್ನ ನಿಲ್ಲಿಸಿದೆ.
- ಎಲ್ಲರನ್ನೂ ಖುಶಿಗೊಳಿಸಬೇಕೆಂದು ಮಾಡುವ ಹಲವಾರು ಫೈಟ್ ಗಳನ್ನ ನಿಲ್ಲಿಸಿದೆ.
- ನನ್ನ ಕುರಿತ ಅವರ ವಿಚಾರ ತಪ್ಪು ಎನ್ನುವುದನ್ನ ಪ್ರೂವ್ ಮಾಡುವ ಕೆಲಸ ಬಿಟ್ಟುಬಿಟ್ಟೆ.
- ಇಂಥ ಫೈಟ್ ಗಳನ್ನೆಲ್ಲ, ಫೈಟ್ ಮಾಡಲು ಬೇರೆ ವಿಷಯ ಇಲ್ಲದ ಜನರಿಗೆ ಬಿಟ್ಟುಬಿಟ್ಟೆ. ಮತ್ತು ನಾನು ನನ್ನ ವಿಜನ್ ಗಾಗಿ ಫೈಟ್ ಮಾಡಲು ಶುರು ಮಾಡಿದೆ, ನನ್ನ ಕನಸುಗಳಿಗಾಗಿ, ನನ್ನ ಐಡಿಯಾಗಳಿಗಾಗಿ, ನನ್ನ ನಿಯತಿಗಾಗಿ ಫೈಟ್ ಮಾಡಲು ಶುರು ಮಾಡಿದೆ.
- ಸಣ್ಣ ಫೈಟ್ ಗಳನ್ನ ಬಿಟ್ಟ ದಿನದಿಂದ ನಾನು ಯಶಸ್ವಿಯಾಗುತ್ತ ಹೋದೆ, ತೃಪ್ತಳಾಗುತ್ತ ಹೋದೆ.
ನೀವೂ ಅಷ್ಟೇ; ಕೆಲವು ಫೈಟ್ ಗಳನ್ನು ನೀವು ಮಾಡಲೇಬೇಕಾಗಿದೆ, ಅವುಗಳಿಗಾಗಿ ನಿಮ್ಮ ಸಮಯ ಮೀಸಲಾಗಿಡಿ. ನಿಮ್ಮ ಫೈಟ್ ಗಳನ್ನ ವಿವೇಕಯುತವಾಗಿ ಆಯ್ಕೆ ಮಾಡಿಕೊಳ್ಳಿ.

