ನಸ್ರುದ್ದೀನನ ಭಾರದ ಲಾಜಿಕ್! : Tea time story

ಸಂಜೆಯ ಹೊತ್ತಿಗೆ ಕತ್ತರಿಸಿದ ಕಟ್ಟಿಗೆಗಳನ್ನೆಲ್ಲ ಬಂಡಲ್ ಮಾಡಿ ಅದನ್ನು ತಲೆಯ ಮೇಲೆ ಹೊತ್ತುಕೊಂಡು ತನ್ನ ಕತ್ತೆಯ ಮೇಲೆ ಏರಿ ಕುಳಿತ ನಸ್ರುದ್ದೀನ್. ಯಾಕೆ ಗೊತ್ತಾ? । ಕನ್ನಡಕ್ಕೆ: ಚಿದಂಬರ ನರೇಂದ್ರ

ಕಟ್ಟಿಗೆ ಕಟ್ ಮಾಡಿಕೊಂಡು ಬರಲು ನಸ್ರುದ್ದೀನ್ ಕಾಡಿಗೆ ಹೋಗಿದ್ದ.

ಸಂಜೆಯ ಹೊತ್ತಿಗೆ ಕತ್ತರಿಸಿದ ಕಟ್ಟಿಗೆಗಳನ್ನೆಲ್ಲ ಬಂಡಲ್ ಮಾಡಿ ಅದನ್ನು ತಲೆಯ ಮೇಲೆ ಹೊತ್ತುಕೊಂಡು ತನ್ನ ಕತ್ತೆಯ ಮೇಲೆ ಏರಿ ಕುಳಿತ ನಸ್ರುದ್ದೀನ್.

ನಸ್ರುದ್ದೀನ್ ನ ಸವಾರಿ ಶಹರವನ್ನು ಪ್ರವೇಶಿಸುತ್ತಿದ್ದಂತೆಯೇ, ಗೆಳೆಯನೊಬ್ಬ ಕೂಗು ಹಾಕಿದ,

“ಕಟ್ಟಿಗೆಯ ಹೊರೆ ತಲೆಯ ಮೇಲೆ ಏಕೆ ಹೊತ್ತುಕೊಂಡಿದ್ದೀಯ ನಸ್ರುದ್ದೀನ್, ನೋವಾಗೋದಿಲ್ವ?”

“ನೋವಾಗ್ತಿದೆ ಆದರೆ ಭಾರವನ್ನ ಕತ್ತೆಯೊಂದಿಗೆ ಹಂಚಿಕೊಳ್ತಾ ಇದೀನಿ”. ನಸ್ರುದ್ದೀನ್ ಉತ್ತರಿಸಿದ.

“ಅರ್ಥ ಆಗಲಿಲ್ಲ” ಗೆಳೆಯ ಆಶ್ಚರ್ಯಚಕಿತನಾಗಿ ನಸ್ರುದ್ದೀನ್ ನ ನೋಡಿದ.

“ಎಲ್ಲ ಭಾರ ಕತ್ತೆ ಮೇಲೆ ಹಾಕಬಾರದಲ್ವ. ಕತ್ತೆ ನನ್ನ ಹೊತ್ತುಕೊಂಡಿದೆ, ನಾನು ಈ ಕಟ್ಟಿಗೆಯ ಹೊರೆ ಹೊತ್ತುಕೊಂಡಿದೀನಿ. ಯಾರಿಗೂ ಭಾರ ಜಾಸ್ತಿ ಆಗಲಿಲ್ಲ”.
ನಸ್ರುದ್ದೀನ್ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.