ಗುಲಾಬಿ ತೋಟದಲ್ಲಿ ಜಾರಿ ಬಿದ್ದರೂ ನಸ್ರುದ್ದೀನನ ಮೀಸೆ ಮಣ್ಣಾಗಲಿಲ್ಲ! ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ಒಂದು ದಿನ ಸಂಜೆ ಮರಳಿ ಮನೆಗೆ ಹೊರಟಿದ್ದ ನಸ್ರುದ್ದೀನ್ ತನ್ನ ನಿತ್ಯದ ದಾರಿ ಬಿಟ್ಟು ಪಕ್ಕದ ಗುಲಾಬಿ ಗಾರ್ಡನ್ ಮೂಲಕ ಹಾಯ್ದು ಹೋಗುತ್ತಿದ್ದ ದಾರಿಯಲ್ಲಿ ಹೊರಟ. ಗಾರ್ಡನ್ ತುಂಬ ಗುಲಾಬಿ ಹೂಗಳು ಅರಳಿದ್ದವು, ಹೂಗಳ ಸುಗಂಧ ಎಲ್ಲೆಡೆ ಹರಡಿಕೊಂಡಿತ್ತು.
ಗಾರ್ಡನ್ ನಲ್ಲಿ ನಡೆಯುತ್ತಿದ್ದ ನಸ್ರುದ್ದೀನ್ ಜಾರಿ ಕೆಳಗೆ ಬಿದ್ದ. ಗುಲಾಬಿಯ ಮುಳ್ಳುಗಳು ತರಚಿ ನಸ್ರುದ್ದೀನ್ ತೀವ್ರವಾಗಿ ಗಾಯಗೊಂಡ. ಅವನ ಬಟ್ಟೆ ಹರಿದಿತ್ತು, ದೇಹದಿಂದ ರಕ್ತ ಸೋರುತ್ತಿತ್ತು.
ಆದರೂ ನಸ್ರುದ್ದೀನ್ ಬೇಸರ ಮಾಡಿಕೊಳ್ಳಲಿಲ್ಲ,
“ ಇಂಥ ಸುಂದರ ಗಾರ್ಡನ್ ನಲ್ಲಿಯೇ ನನಗಾಗಿ ಇಂಥ ದುರಾದೃಷ್ಟ ಕಾಯುತ್ತಿತ್ತಾದರೆ, ನಿತ್ಯದ ರಸ್ತೆಯಲ್ಲಿ ಹೋಗಿದ್ದರೆ ನನಗೆ ಎಂಥ ಅಪಘಾತ ಆಗಬಹುದಿತ್ತು” ನಸ್ರುದ್ದೀನ್ ಸಮಾಧಾನ ಮಾಡಿಕೊಂಡ.

