ಸಂಬಂಧಗಳಲ್ಲಿ ಆತ್ಮೀಯತೆ

ಆತ್ಮೀಯತೆ ಇಲ್ಲದ ಯಾವ ಸಂಬಂಧವೂ ದೀರ್ಘ ಕಾಲ ಬಾಳುವುದಿಲ್ಲ. ಆದರೆ ಆತ್ಮೀಯತೆ ಕೇವಲ ದೈನಂದಿನ ಒಡನಾಟಕ್ಕೆ ಸೀಮಿತವಲ್ಲ. ಭಾವನಾತ್ಮಕ, ದೈಹಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕವೆಂಬ ನಾಲ್ಕು ಬಗೆಯ ಆತ್ಮೀಯತೆಯನ್ನು ಬೆಳೆಸಿಕೊಂಡರಷ್ಟೆ ಸಂಬಂಧ ಪರಿಪೂರ್ಣವಾಗೋದು. ಈ ಆತ್ಮೀಯತೆಗಳ ಕಿರು ವಿವರ ಇಲ್ಲಿದೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಭಾವನಾತ್ಮಕ ಆತ್ಮೀಯತೆ ( Emotional Intimacy)

  • ನಿಮ್ಮ ಆಲೋಚನೆಗಳನ್ನ, ಭಾವನೆಗಳನ್ನ, ದೌರ್ಬಲ್ಯಗಳನ್ನ ಪರಸ್ಪರ ಹಂಚಿಕೊಳ್ಳುತ್ತ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಕಟ್ಟಿಕೊಳ್ಳಿ.
  • ನಿಮ್ಮ ಸಂಗಾತಿಯ ಕಾಳಜಿಗಳನ್ನ ಮತ್ತು ಅನುಭವಗಳನ್ನ ಕ್ರಿಯಾತ್ಮಕವಾಗಿ, ಅಂತಃಕರಣಪೂರ್ವಕವಾಗಿ ಕೇಳಿಸಿಕೊಳ್ಳಿ.
  • ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲು ನಿಮ್ಮ ನಡುವೆ ಸುರಕ್ಷಿತ ಮತ್ತು ಪೂರ್ವಾಗ್ರಹಪೀಡಿತವಲ್ಲದ ವೇದಿಕೆಯೊಂದನ್ನು ನಿರ್ಮಿಸಿಕೊಳ್ಳಿ.
  • ನಿಮ್ಮ ನಡುವಿನ ಭಾವನಾತ್ಮಕ ಸಂಪರ್ಕವನ್ನು ಆಳವಾಗಿಸಿಕೊಳ್ಳಲು ಇಬ್ಬರೂ ಸೇರಿ ಕಾಮನ್ ಆ್ಯಕ್ಟಿವಿಟಿಗಳಲ್ಲಿ ಭಾಗವಹಿಸಿ, ಕ್ವಾಲಿಟಿ ಟೈಂ ನಿಮ್ಮ ಆದ್ಯತೆಯಾಗಿರಲಿ.

ದೈಹಿಕ ಆತ್ಮೀಯತೆ ( Physical Intimacy)

  • ಕೈ ಹಿಡಿದುಕೊಳ್ಳುವುದು, ಅಪ್ಪಿಕೊಳ್ಳುವುದು ಮತ್ತು ಮುದ್ದಾಡುವಂಥ ದೈಹಿಕ ಸ್ಪರ್ಶದ ಕ್ರಿಯೆಗಳಲ್ಲಿ ತೊಡಗಿಕೊಳ್ಳಿ.
  • ಪರಸ್ಪರರ ಪ್ರೇಮ ಭಾಷೆಯನ್ನ ( Love language) ಶೋಧಿಸಿಕೊಳ್ಳುತ್ತ, ಹೇಗೆ ನೀವಿಬ್ಬರೂ ದೈಹಿಕ ಪ್ರೇಮವನ್ನು ಅಭಿವ್ಯಕ್ತಿಸುತ್ತೀರಿ ಮತ್ತು ಬಯಸುತ್ತೀರಿ ಎನ್ನುವುದನ್ನ ತಿಳಿದುಕೊಳ್ಳಿ.
  • ಪರಸ್ಪರರ ಬಯಕೆಗಳನ್ನ, ಮಿತಿಗಳನ್ನ, ಆದ್ಯತೆಗಳನ್ನ ಗೌರವಪೂರ್ಣವಾಗಿ, ಇಬ್ಬರಿಗೂ ಒಪ್ಪಿತವಾಗುವಂತೆ ಹಂಚಿಕೊಳ್ಳಿ.
  • ದೈಹಿಕ ಪ್ರೀತಿ ಮತ್ತು ಆತ್ಮೀಯತೆಯನ್ನ ನಿಮ್ಮ ನಡುವಿನ ಸಂಬಂಧದ ಬಹುಮುಖ್ಯವಾದ ಆದ್ಯತೆಯನ್ನಾಗಿಸಿಕೊಳ್ಳಿ.

ಬೌದ್ಧಿಕ ಆತ್ಮೀಯತೆ ( Intellectual Intimacy)

  • ನಿಮ್ಮ ಆಸಕ್ತಿ ಮತ್ತು ಉತ್ಕಟತೆಗಳನ್ನು ಒಳಗೊಂಡಂತೆ ಬೇರೆ ಬೇರೆ ವಿಷಯಗಳ ಕುರಿತಾದ ಪರಸ್ಪರರ ಬೌದ್ಧಿಕತೆಯನ್ನ ಉತ್ತೇಜಿಸುವಂಥ ಸಂಭಾಷಣೆಯಲ್ಲಿ ತೊಡಗಿಕೊಳ್ಳಿ.
  • ನಿಮ್ಮ ಆಸಕ್ತಿಯ ಪುಸ್ತಕಗಳನ್ನ, ವಸ್ತುಗಳನ್ನ ಅಥವಾ ವಿಡಿಯೋ – ಆಡಿಯೋ ಲಿಂಕ್, ಇತ್ಯಾದಿಗಳನ್ನ ಹಂಚಿಕೊಳ್ಳುತ್ತ ಪರಸ್ಪರರ ಬೌದ್ಧಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಿ.
  • ಅವಶ್ಯಕತೆ ಇದ್ದಾಗಲೆಲ್ಲ ಪರಸ್ಪರರ ದೃಷ್ಟಿಕೋನವನ್ನ ಗೌರವಪೂರ್ಣವಾಗಿ ಚಾಲೇಂಜ್ ಮಾಡುತ್ತ ನಿಮ್ಮ ಬೌದ್ಧಿಕ ಬೆಳವಣಿಗೆಯನ್ನು ಪೋಷಿಸಿಕೊಳ್ಳಿ ಮತ್ತು ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳಿ.
  • ಯಾವುದಾದರೂ ವಿಶೇಷ ವರ್ರ್ಕ್ ಶಾಪ್ ಅಟೆಂಡ್ ಮಾಡುವಂಥ ಅಥವಾ ಯಾವುದಾದರೂ ಹೊಸ ಕಾಮನ್ ಹವ್ಯಾಸವನ್ನು ಬೆಳೆಸಿಕೊಳ್ಳುವಂಥ, ಕೂಡಿ ಕಲಿಯುವಿಕೆಯನ್ನು ಬೆಂಬಲಿಸುವ ಆ್ಯಕ್ಟಿವಿಟಿಗಳಲ್ಲಿ ಭಾಗವಹಿಸಿ.

ಆಧ್ಯಾತ್ಮಿಕ ಆತ್ಮೀಯತೆ ( Spiritual Intimacy)

  • ಪರಸ್ಪರರ ನಂಬಿಕೆಗಳನ್ನ, ಮೌಲ್ಯಗಳನ್ನ, ಆಧ್ಯಾತ್ಮಿಕ ಆಚರಣೆಗಳನ್ನ ಮುಕ್ತವಾಗಿ, ಗೌರವಪೂರ್ಣವಾಗಿ ಚರ್ಚಿಸಿ.
  • ನಿಮ್ಮ ಅಧ್ಯಾತ್ಮಿಕ ಸಂಪರ್ಕವನ್ನು ಪೋಷಿಸುವ, ಇಬ್ಬರೂ ಹಂಚಿಕೊಳ್ಳಬಹುದಾದ ಅಧ್ಯಾತ್ಮಿಕ ಮತ್ತು ಫಿಲೊಸೊಫಿಕಲ್ ಆಸಕ್ತಿಗಳನ್ನು ಎಕ್ಸಪ್ಲೋರ್ ಮಾಡಿ.
  • ಪರಸ್ಪರರ ಅಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡಿ ಮತ್ತು ವೈಯಕ್ತಿಕ ನಂಬಿಕೆಗಳ ಶೋಧಿಸುವಿಕೆಗೆ ಪ್ರೋತ್ಸಾಹ ನೀಡಿ.
  • ಇಬ್ಬರೂ ಸೇರಿ ಧ್ಯಾನ, ಪ್ರಾರ್ಥನೆ ಅಥವಾ ಮೈಂಡ್ ಫುಲ್ ನೆಸ್ ನಂಥ ಅಧ್ಯಾತ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಿ.
Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.