ನಸ್ರುದ್ದೀನನ ಗೆಳೆಯರು ಸೇರಾಡ್ರೆ, ನಸ್ರುದ್ದೀನ್ ಸವಾ ಸೇರು! ~ ಕನ್ನಡಕ್ಕೆ: ಚಿದಂಬರ ನರೇಂದ್ರ
ನಸ್ರುದ್ದೀನ್ ಮತ್ತು ಗೆಳೆಯರು ಕಾಫೀ ಹೌಸ್ ಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು.
“ನಾನು ಬೆಳೆದ ಸೌತೆಕಾಯಿ, ನನ್ನ ಕೈಯಷ್ಟು ಉದ್ದ ಇತ್ತು” ಒಬ್ಬ ಗೆಳೆಯ ಕೊಚ್ಚಿಕೊಂಡ.
“ನನ್ನ ತೋಟದ ಕುಂಬಳಕಾಯಿ, ಒಂದು ಕುರಿಯಷ್ಟು ದೊಡ್ಡದಾಗಿತ್ತು” ಇನ್ನೊಬ್ಬ ಗೆಳೆಯ ತನ್ನ ಬಗ್ಗೆ ಹೇಳಿಕೊಂಡ.
“ ನಾನು ಬೆಳೆದ ಕ್ಯಾಬೇಜ್ ಆನೆಯಷ್ಟು ದೊಡ್ಡದಿತ್ತು” ಮತ್ತೊಬ್ಬ ಗೆಳೆಯ ಸೊಕ್ಕು ಮಾಡಿದ.
“ನಿನ್ನೆಯಷ್ಟೇ ನಮ್ಮ ಸ್ಕೂಲ್ ಗ್ರೌಂಡ್ ನಷ್ಟು ದೊಡ್ಡದಾದ ಪಾತ್ರೆ ಖರೀದಿ ಮಾಡಿದೆ”. ನಸ್ರುದ್ದೀನ್ ತಾನೂ ಮಾತು ಮುಂದುವರೆಸಿದ.
“ ಸುಳ್ಳು, ಅಷ್ಟು ದೊಡ್ಡ ಪಾತ್ರೆ ಯಾರು, ಯಾಕೆ ಖರೀದಿ ಮಾಡುತ್ತಾರೆ” ಬಾಕಿ ಮೂವರು ಗೆಳೆಯರು ನಸ್ರುದ್ದೀನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
“ನೀವು ಮೂರು ಜನ ಬೆಳೆದ ತರಕಾರಿ ಬಳಸಿ ಪಲ್ಯ ಮಾಡಲು” ನಸ್ರುದ್ದೀನ್ ಉತ್ತರಿಸಿದ.

