ಎಟಿಎಂ ಮೆಶೀನಿನ ಮುಂದೆ ನಿಂತ ಕೂಡಲೇ ಹಣ ಕೈಗೆ ಸಿಕ್ಕಿಬಿಡುವುದೇ? ಇಲ್ಲ ತಾನೆ? ಹಾಗೇ ಯಾವುದೂ ಧುತ್ತೆಂದು ದೊರೆತುಬಿಡುವುದಿಲ್ಲ. ಕಾಯಬೇಕು, ತಾಳಬೇಕು. ಆಗಷ್ಟೇ ನಿರೀಕ್ಷಿತ ಫಲ ದೊರೆಯುವುದು… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಬ್ಬಳು ಹೆಣ್ಣು ಮಗಳಿಗೆ ಹಣದ ಅವಶ್ಯಕತೆ ಇದ್ದುದರಿಂದ ಆಕೆ ATM ಗೆ ಬರುತ್ತಾಳೆ. ಅವಳು ಹಣ ತೆಗೆದುಕೊಳ್ಳಲು ಸಿದ್ಧಳಾದುತ್ತಿದ್ದಂತೆಯೇ , ATM ಸ್ಕ್ರೀನ್ ಮೇಲೆ ಒಂದು ಸೂಚನೆ ಮೂಡಿ ಬರುತ್ತದೆ.
Please insert your card.
ಅವಳು ತನ್ನ ATM ಕಾರ್ಡ್ ಇನ್ಸರ್ಟ್ ಮಾಡುತ್ತಿದ್ದಂತೆಯೇ ಇನ್ನೊಂದು ಮೆಸೇಜ್ ಮೂಡಿ ಬರುತ್ತದೆ ಸ್ಕ್ರೀನ್ ಮೇಲೆ.
Enter your PIN
ಆಕೆ ತನ್ನ ತನ್ನ ಪಿನ್ ಟೈಪ್ ಮಾಡುತ್ತಿದ್ದಂತೆಯೇ ಮತ್ತೊಂದು ಸೂಚನೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
Enter the amount
ಅವಳು ತನಗೆ ಬೇಕಾದ ಅಮೌಂಟ್ ಟೈಪ್ ಮಾಡುತ್ತಿದ್ದಂತೆಯೇ, ಮತ್ತೊಂದು ಸೂಚನೆ ಸ್ಕ್ರೀನ್ ಮೇಲೆ.
PLEASE WAIT !! YOUR TRANSACTION IS BEING PROCESSED.
ಈಗ ನನ್ನ ಮಾತು ಕೇಳಿ. ನೀವು ಮಾಡಬೇಕಾದ ಎಲ್ಲವನ್ನೂ ಮಾಡಿದ್ದೀರಿ. ಪರಿಶ್ರಮ ಮಾಡಿದ್ದೀರಿ, ಪ್ರಾರ್ಥನೆ ಮಾಡಿದ್ದೀರಿ. ಆದರೆ ನಿಮಗೆ ಸಹನೆ ಇಲ್ಲ. ಬದುಕಿನಲ್ಲಿ, ವ್ಯಾಪಾರದಲ್ಲಿ ಏನೂ ಆಗುತ್ತಿಲ್ಲ ಎನ್ನುವ ಅಸಹನೆ. ದಯವಿಟ್ಟು ಸಮಾಧಾನದಿಂದ ಕಾಯಿರಿ. ನಿಮ್ಮ ಜಾಗ ಬಿಟ್ಟು ಕದಲ ಬೇಡಿ ಏಕೆಂದರೆ YOUR REQUEST IS BEING PROCESSED.
ಇಲ್ಲಿ ಕೇಳಿ. ಯಾಕೆ ಆ ಹೆಣ್ಣು ಮಗಳು ಇನ್ನೂ ATM ಮಶೀನ್ ಮುಂದೆ ನಿಂತಿದ್ದಾಳೆ? ಏಕೆಂದರೆ ಅವಳು ತನ್ನ ಕಾರ್ಡ್ ಇನ್ಸರ್ಟ್ ಮಾಡಿದ್ದಾಳೆ, ತನ್ನ PIN ಎಂಟರ್ ಮಾಡಿದ್ದಾಳೆ.
ಅವಳಿಗೆ ಎಷ್ಟೋ ಅವಸರ ಇರಬಹುದು, ಆದರೆ ಈಗ ಅವಳು ಸಹನೆ ಕಳೆದುಕೊಂಡು ಅಲ್ಲಿಂದ ಹೊರಟು ಬಿಟ್ಟರೆ, ಅವಳಿಗೆ ಬರಬೇಕಾದ ಹಣ ಬೇರೆ ಇನ್ನಾರಿಗೋ ಸಿಗುತ್ತದೆ.
ದಯವಿಟ್ಟು ನಿಮ್ಮ ಪ್ರಯತ್ನ ವ್ಯರ್ಥ ಎಂದುಕೊಳ್ಳಬೇಡಿ.
ದಯವಿಟ್ಟು ಸಮಯ ಹಾಳಾಗುತ್ತಿದೆ ಎಂದುಕೊಳ್ಳಬೇಡಿ.
ದಯವಿಟ್ಟು ಈ ವ್ಯವಹಾರ ನಿಮಗೆ ತಕ್ಕುದಲ್ಲ ಎಂದುಕೊಳ್ಳಬೇಡಿ.
ಸ್ವಲ್ಪ ಸಹನೆಯಿಂದ ವೇಟ್ ಮಾಡಿ.
YOUR TRANSACTION IS BEING PROCESSED.

