ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಂದು ಸಲ ಮುದುಕ ನಾವಿಕನೊಬ್ಬ ಸಿಕ್ಕಿದ
ಕತೆ ಹೇಳಿದ
ಮೂವತ್ತು ವರ್ಷದ ಹಿಂದೆ
ನನ್ನ ಮಗಳನ್ನ ನಾವಿಕನೊಬ್ಬ ಓಡಿಸಿಕೊಂಡು ಹೋದ
ಈ ಲೋಕದಲ್ಲಿ ನನ್ನವರು ಅಂತ ಇದ್ದದ್ದು ಮಗಳು ಮಾತ್ರ
ಮನಸಲ್ಲೇ ಇಬ್ಬರಿಗೂ ಶಾಪ ಹಾಕಿದೆ
ಎರಡು ಮೂರು ತಿಂಗಳಲ್ಲೇ
ಹುಡುಗ ನಾವಿಕನ ಹಡಗು ಮುಳುಗಿ ಕಡಲ ತಳ ಸೇರಿತು
ನನ್ನ ಮಗಳೂ ಇಲ್ಲವಾದಳು ನನ್ನ ಪಾಲಿಗೆ
ಹುಡುಗನನ್ನ ಜೊತೆಗೆ ನನ್ನ ಮಗಳನ್ನು ಕೂಡ ಶಾಪವಿಕ್ಕಿ ಸಾಯಿಸಿಬಿಟ್ಟೆ
ಈಗ ನಾನು ಬದುಕಿರುವ ತನಕ ದೇವರೇ ನನ್ನ ಕ್ಷಮಿಸು ಅಂತ ಬೇಡಿಕೊಳ್ಳುವ ಗತಿ ನನಗೆ
ಅವನ ಶಾಪ ನಿಜವಾಯಿತು ಅನ್ನುವ ಜಂಬ ಮೂವತ್ತು ವರ್ಷವಾದರೂ ಉಳಿದೇ ಇತ್ತು
ಆ ಮುದುಕನ ಮಾತಿನಲ್ಲಿ

