ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಸ್ರುದ್ದೀನ್ ಒಬ್ಬ ಪುಟ್ಟ ಹುಡುಗನ ಜೊತೆ ಸಲೂನ್ ಪ್ರವೇಶಿಸಿದ.
“ನನಗೆ ಮೊದಲು ಹೇರ್ ಕಟ್ ಮಾಡಿ ನಂತರ ಈ ಹುಡುಗನಿಗೆ” ನಸ್ರುದ್ದೀನ್ ಸೀದಾ ಹೋಗಿ ಬಾರ್ಬರ್ ಚೇರ್ ಮೇಲೆ ಕುಳಿತುಕೊಂಡ.
ಸರಿ ಎಂದು ಬಾರ್ಬರ್ ಮೊದಲು ನಸ್ರುದ್ದೀನ್ ನ ಹೇರ್ ಕಟ್ ಮುಗಿಸಿ ಪುಟ್ಟ ಹುಡುಗನ ಹೇರ್ ಕಟ್ ಶುರು ಮಾಡಿದ. ಅದೇ ಸಮಯಕ್ಕೆ ನಸ್ರುದ್ದೀನ್, ಹುಡುಗನ ಹೇರ್ ಕಟ್ ಮುಗಿಯುವುದರೊಳಗಾಗಿ ಬರ್ತೀನಿ ಎನ್ನುತ್ತ ಸಲೂನ್ ನಿಂದ ಹೊರಗೆ ಹೋದ.
ಮಗುವಿನ ಹೇರ್ ಕಟ್ ಮುಗಿದು ಅರ್ಧ ಗಂಟೆಯಾದರೂ ನಸ್ರುದ್ದೀನ್ ವಾಪಸ್ ಬರಲಿಲ್ಲವಾದ್ದರಿಂದ ಕ್ಷೌರಿಕ ಮಗುವನ್ನ ಪ್ರಶ್ನೆ ಮಾಡಿದ, “ನಿನ್ನ ಅಪ್ಪ ಯಾವಾಗ ವಾಪಸ್ ಬರಬಹುದು?”
“ ಅವನು ನನ್ನ ಅಪ್ಪ ಅಲ್ಲ. ನಾನು ಅಂಗಡಿಗೆ ಹೊರಟಿದ್ದೆ, ಫ್ರೀ ಹೇರ್ ಕಟ್ ಮಾಡಸ್ತೀನಿ ಬಾ ಅಂತ ಅವನು ನನ್ನ ಇಲ್ಲಿಗೆ ಕರೆದುಕೊಂಡು ಬಂದ. ಅವನ್ಯಾರೋ ನನಗೆ ಗೊತ್ತಿಲ್ಲ” ಮಗು ಉತ್ತರಿಸಿತು.

