ದೇವರು ನಮ್ಮನ್ನು ಸೃಷ್ಟಿ ಮಾಡುವಾಗ ಕೆಲವೊಂದು ನಿಯಮಗಳನ್ನು ರೂಪಿಸಿದ್ದಾನೆ. ಮಾನವ ಸಮಾಜ ಎಷ್ಟೇ ಬೆಳವಣಿಗೆ ಹೊಂದಿದರೂ ಈ ನಿಯಮಗಳನ್ನು ಮುರಿಯುವುದು ಸಾಧ್ಯವಿಲ್ಲ! ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ನೀವು ಯಾವಾಗ ಇನ್ನೊಬ್ಬರಿಗೆ ಒಳ್ಶೆಯದನ್ನು ಮಾಡುತ್ತೀರೋ ಆಗ ನೀವು ಸ್ವತಃ ಒಳ್ಳೆಯವರಾಗುತ್ತ ಹೋಗುತ್ತೀರಿ ~ Louis L. Mannnn
ನಿಮ್ಮ ಉದ್ದೇಶ ನೋವು ನೀಡುವುದಾಗಿದ್ದರೆ ಕೊನೆಗೆ ನೋವು ಉಣ್ಣುವವರು ನೀವೇ.
ನಿಮ್ಮ ಉದ್ದೇಶ ಮೋಸ ಮಾಡುವುದಾಗಿದ್ದರೆ ಕೊನೆಗೆ ನೀವೇ ಮೋಸ ಹೋಗುತ್ತೀರಿ.
ನಿಮ್ಮ ಉದ್ದೇಶ ಏನಾದರೂ ಕೊಡುವುದಾಗಿದ್ದರೆ ಕೊನೆಗೆ ಅದನ್ನು ಪಡೆದುಕೊಳ್ಳುವವರು ನೀವೇ.
ನಿಮ್ಮ ಉದ್ದೇಶ ಕಲಿಸುವುದಾಗಿದ್ದರೆ, ಕಲಿಯುವವರು ನೀವೇ.
ನಿಮ್ಮ ಉದ್ದೇಶ ಪ್ರಾಮಾಣಿಕವಾಗಿ ಪ್ರಶಂಸಿವುದಾಗಿದ್ದರೆ, ನೀವೇ ಹೊಗಳಲ್ಪಡುತ್ತೀರಿ.
ನಿಮ್ಮ ಉದ್ದೇಶ ಸಹಾಯ ಮಾಡುವುದಾಗಿದ್ದರೆ, ನೀವು ಕೂಡ ಸಹಾಯ ಮಾಡಲ್ಪಡುತ್ತೀರಿ.
ನಿಮ್ಮ ಉದ್ದೇಶ ಪೋಷಿಸುವುದಾಗಿದ್ದರೆ, ನೀವು ಸಾಮರ್ಥ್ಯಶಾಲಿಗಳಾಗುತ್ತೀರಿ.
ದೇವರು ನಮ್ಮನ್ನು ಸೃಷ್ಟಿ ಮಾಡುವಾಗ ಕೆಲವೊಂದು ನಿಯಮಗಳನ್ನು ರೂಪಿಸಿದ್ದಾನೆ. ಮಾನವ ಸಮಾಜ ಎಷ್ಟೇ ಬೆಳವಣಿಗೆ ಹೊಂದಿದರೂ ಈ ನಿಯಮಗಳನ್ನು ಮುರಿಯುವುದು ಸಾಧ್ಯವಿಲ್ಲ. ನೀವು ಏನೇ ಮಾಡಬಯಸುದರೂ ಅವು ವಾಪಸ್ ಬಂದು ನಿಮ್ಮನ್ನು ತಲುಪುತ್ತವೆ ಬೂಮರಾಂಗ್ ರೀತಿಯಲ್ಲಿ.
ನಿಮ್ಮ ಪ್ರೇರಣೆಗಳು ಅವುಗಳು ಯಾವ ರೀತಿಯವೇ ಇರಲಿ, ಅವುಗಳ ಉದ್ದೇಶದ ಆಧಾರದ ಮೇಲೆ ನೀವು ಬದುಕಿನಲ್ಲಿ ಮುಂದೆ ಅಥವಾ ಹಿಂದೆ ಮೂವ್ ಆಗುತ್ತೀರಿ.
ನಿಮ್ಮ ಉದ್ದೇಶಗಳ ಸಿನ್ಸಿಯಾರಿಟಿ ಮತ್ತು ಇಂಟಿಗ್ರಿಟಿ ನಿಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸುವಷ್ಟು ಪ್ರಚಂಡವಾಗಿರುತ್ತವೆ.
ನಿಮ್ಮ ಉದ್ದೇಶಗಳು ನಿಮ್ಮನ್ನು ನಿಯಂತ್ರಿಸುತ್ತವೆ.

