ಶ್ರದ್ಧೆಯನ್ನ ಸಾಮಾನ್ಯವಾಗಿ ನಂಬಿಕೆ ಮತ್ತು ವಿಶ್ವಾಸ ಎಂದು ಅನುವಾದಿಸಲಾಗುತ್ತದೆಯಾದರೂ ಇದು ಕುರುಡು ನಂಬಿಕೆಯಲ್ಲ, ಇದು ಆಳದಿಂದ ಮೂಡಿಬಂದಿರುವ ದಿಟ್ಟ ಭರವಸೆ, ತಾರ್ಕಿಕ ತಿಳುವಳಿಕೆಯಿಂದಾಗಿ ಹೊರಹೊಮ್ಮಿದ ಆತ್ಮವಿಶ್ವಾಸ ~ ಸ್ವಾಮಿ ಶಿವಾನಂದ । ಕನ್ನಡಕ್ಕೆ: ಚಿದಂಬರ ನರೇಂದ್ರ
ಶರಣಾಗತಿ ಎಂದರೆ
ಎದುರು ಮಂಡಿಯೂರುವುದಲ್ಲ,
ಬೇರೆಲ್ಲ ವಿಷಯಗಳಲ್ಲಿ ಅನಾಸಕ್ತರಾಗುವುದಲ್ಲ.
ವಿಧಿ ಎಂದು ಹತಾಶರಾಗುವುದಲ್ಲ,
ಎದುರಾಳಿಯೆದುರು ಶಸ್ತ್ರತ್ಯಾಗ ಮಾಡುವುದಲ್ಲ,
ಬದಲಾಗಿ
ಈ ಎಲ್ಲದಕ್ಕೆ ತದ್ವಿರುದ್ಧವಾದುದು
ಅಪಾರ ಧೈರ್ಯದ ವಿಷಯ.
ಶರಣಾಗತಿಯೊಳಗೆ
ಹುಟ್ಟುವ ಶಕ್ತಿಯೇ ನಿಜದ ಶಕ್ತಿ.
ಬದುಕಿನ ದಿವ್ಯ ಸ್ವಾರಸ್ಯಕ್ಕೆ ಶರಣಾಗುವವರು,
ಇಡೀ ಜಗತ್ತು ಒಂದರ ಮೇಲೊಂದು
ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗಲೂ
ಅಚಲ ಪ್ರಶಾಂತತೆಯಲ್ಲಿ ಸ್ಥಿರವಾಗುವರು.
~ ಶಮ್ಸ್ ತಬ್ರೀಝಿ
ಶ್ರದ್ಧೆ ಎನ್ನುವುದು ಯಶಸ್ಸಿನ ಪಾಸ್ ವರ್ಡ.
ಶ್ರದ್ಧೆ ಎನ್ನುವುದು ಸಾಧಾರಣವನ್ನ ಅಸಾಧಾರಣದತ್ತ ಕರೆದೊಯ್ಯುವ ಬಲೆಟ್ ಟ್ರೇನ್. ಸಾಮಾನ್ಯವನ್ನ ಅಸಾಮಾನ್ಯಗೊಳಿಸುವ ದಿವ್ಯ ಔಷಧಿ.
ಶ್ರದ್ಧೆ ಎನ್ನುವುದು ನಂಬಿಕೆ, ವಿಶ್ವಾಸ, ಪ್ರಚೋದನೆ, ಮತ್ತು ಉದ್ದೇಶಗಳ ಸಹವರ್ತಿ. ಒಳಗಿನಿಂದ ತುಂಬಿಕೊಂಡು ಬರುವ ಧನಾತ್ಮಕ ಸಾಮರ್ಥ್ಯ, ಜನರ ಜಗತ್ತನ್ನ ಬದುಕನ್ನ ರೂಪಿಸುವ ಮಾಂತ್ರಿಕ ಶಕ್ತಿ.
ಯಾವಾಗ ನೀವು ಅಸ್ತಿತ್ವದ ಹರಿವಿಗೆ ಶರಣಾಗುತ್ತ ಬದುಕಿನ ನದಿಯೊಂದಿಗೆ ಒಂದಾಗುತ್ತೀರೋ ಆಗ ನೀವು ನಿಮ್ಮ ಉದ್ದೇಶದತ್ತ ನಿರಾಯಾಸವಾಗಿ ಮುನ್ನುಗ್ಗುತ್ತೀರಿ.
ಶ್ರದ್ಧೆಯನ್ನ ಸಾಮಾನ್ಯವಾಗಿ ನಂಬಿಕೆ ಮತ್ತು ವಿಶ್ವಾಸ ಎಂದು ಅನುವಾದಿಸಲಾಗುತ್ತದೆಯಾದರೂ ಇದು ಕುರುಡು ನಂಬಿಕೆಯಲ್ಲ, ಇದು ಆಳದಿಂದ ಮೂಡಿಬಂದಿರುವ ದಿಟ್ಟ ಭರವಸೆ, ತಾರ್ಕಿಕ ತಿಳುವಳಿಕೆಯಿಂದಾಗಿ ಹೊರಹೊಮ್ಮಿದ ಆತ್ಮವಿಶ್ವಾಸ.
ಶ್ರದ್ಧೆ ಎನ್ನುವುದು ಯಶಸ್ಸಿನ ಪ್ರಯಾಣದ ಬಹುಮುಖ್ಯ ಕೊಂಡಿ. ಅದು ನಿಮ್ಮನ್ನು ಫೋಕಸ್ಡ್ ಆಗಿ ಇರುವಂತೆ, ಮೈಂಡ್ ಫುಲ್ ಆಗಿ ಇರುವಂತೆ, ಸಮರ್ಪಣಾ ಭಾವವನ್ನು ಹೊಂದುವಂತೆ, ರಿಸ್ಕ್ ಗಳನ್ನು ತೆಗೆದುಕೊಳ್ಳುವಂತೆ ಪ್ರಚೋದಿಸುತ್ತದೆ.
ಯಾವುದನ್ನ ನೀವು ನಿಮ್ಮಿಂದ ಸಾಧ್ಯವೇ ಇಲ್ಲ ಎಂದುಕೊಂಡಿದ್ದಿರೋ ಅಂಥವನ್ನು ಸಾಧ್ಯ ಮಾಡಿ ತೋರಿಸುತ್ತದೆ ಶೃದ್ಧೆ .
ಶ್ರದ್ಧೆ ವಾಸಿ ಮಾಡುತ್ತದೆ, ಸೃಷ್ಟಿ ಮಾಡುತ್ತದೆ, ಅಚ್ಚರಿಗಳನ್ನು ಸಾಧ್ಯ ಮಾಡುತ್ತದೆ, ಪರ್ವತಗಳನ್ನು ಮೂವ್ ಮಾಡುತ್ತದೆ, ದೈವದ ಹುಡುಕಾಟದಲ್ಲಿ ಸರ್ಚ ಲೈಟ್ ನಂತೆ ಕೆಲಸ ಮಾಡುತ್ತದೆ.

