ಟಾಲ್ ಸ್ಟೊಯ್ ಗಳಿಸಿದ ಪೆನ್ನಿ!

ಆ ಹೆಣ್ಣು ಮಗಳು, “ ಎಲ್ಲಿ ಎಲ್ಲಿ ಟಾಲ್ ಸ್ಟೊಯ್” ಎಂದು ಸುತ್ತ ಮುತ್ತ ನೋಡತೊಡಗಿದಳು. “ ನೀನು ಹಣ ಕೊಟ್ಟಿಯಲ್ಲಾ ಆ ಮುದುಕ, ಅವನೇ ಟಾಲ್ ಸ್ಟೊಯ್” ಎಂದು ಜನ ಅವಳಿಗೆ ಹೇಳಿದಾಗ ಆಕೆಗೆ ಬಹಳ ಮುಜುಗರವಾಯ್ತು…. | ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಲಿಯೋ ಟಾಲ್ ಸ್ಟೊಯ್ ಟುಲಾ ರೈಲ್ವೇ ಸ್ಟೇಷನ್ ನ ಪ್ಲಾಟ್ ಫಾರ್ಮ ಮೇಲೆ ನಿಂತುಕೊಂಡಿರುವಾಗಲೇ ಕುರಿಯರ್ ರೈಲು ಪ್ಲಾಟ್ ಫಾರ್ಮ್ ಮೇಲೆ ಬಂದು ನಿಂತುಕೊಂಡಿತು. ಫಸ್ಟ್ ಕ್ಲಾಸ್ ಕಂಪಾರ್ಟಮೆಂಟ್ ಇಂದ ಗಡಿಬಿಡಿಯಲ್ಲಿ ಇಳಿದ ಒಬ್ಬ ವ್ಯಕ್ತಿ  ಸ್ವಲ್ಪ ದೂರದಲ್ಲಿದ್ದ ತಿಂಡಿಯ ಅಂಗಡಿಯತ್ತ ಹೆಜ್ಜೆ ಹಾಕಿದ. ಕೆಲ ಕ್ಷಣಗಳ ನಂತರ ಅದೇ ಕಂಪಾರ್ಟಮೆಂಟ್ ನಿಂದ ಇಳಿದ ಒಬ್ಬ ಹೆಣ್ಣು ಮಗಳು “ಜಾರ್ಜ್ ಜಾರ್ಜ್”ಎಂದು ಅವನನ್ನು ಕೂಗತೊಡಗಿದಳು. ಆದರೆ ಜಾರ್ಜ್ ಗೆ ಅವಳ ಮಾತು ಕೇಳಿಸಲೇ ಇಲ್ಲ, ಅವನು ಮುಂದೆ ಮುಂದೇ ಹೋಗುತ್ತಲೇ ಇದ್ದ.

ಆ ಹೆಣ್ಣು ಮಗಳು ಗಾಬರಿಯಲ್ಲಿ ಸುತ್ತ ಮುತ್ತ ನೋಡಿದಾಗ ಅವಳಿಗೆ ಅಲ್ಲಿ ಒಬ್ಬ ಮುದುಕ ನಿಂತಿರುವುದು ಕಾಣಿಸಿತು. ಆ ವಯೋವೃದ್ಧ ವ್ಯಕ್ತಿ ಟಾಲ್ ಸ್ಟೊಯ್ ಎನ್ನುವುದು ಆ ಹೆಣ್ಣುಮಗಳಿಗೆ ಗೊತ್ತಾಗಲಿಲ್ಲ. ಆಕೆ ಅವನ ಹತ್ತಿರ ಬಂದು ಬೇಡಿಕೊಂಡಳು, “ಓಲ್ಡ್ ಮ್ಯಾನ್ ನೀವು ಅಲ್ಲಿ ದೂರ ಹೊರಟಿರುವ ವ್ಯಕ್ತಿಯನ್ನು ಕರೆದುಕೊಂಡು ಬರುವಿರಾದರೆ , ನಾನು ನಿಮಗೆ ಒಂದು ಪೆನ್ನಿ ಹಣ ಕೊಡುತ್ತೇನೆ”.

ಅವಳ ಮಾತು ಕೇಳಿ ಟಾಲ್ ಸ್ಟೊಯ್ ಗೆ ಆಶ್ಚರ್ಯವಾಯಿತಾದರೂ ಅವನು ಅದನ್ನು ತೋರಿಸಿಕೊಳ್ಳದೇ ಆಕೆ ಕೇಳಿದಂತೆ ಆ ವ್ಯಕ್ತಿಯನ್ನು ಹೋಗಿ ಕರೆದುಕೊಂಡುಬಂದ. ತನ್ನ ಮಾತಿನಂತೆ ಅವಳು ಟಾಲ್ ಸ್ಟೊಯ್ ಕೈಯಲ್ಲಿ ಒಂದು ಪೆನ್ನಿ ನಾಣ್ಯ ಇಟ್ಟಳು.

ಈ ಘಟನೆಯನ್ನು ನೋಡುತ್ತ ನಿಂತಿದ್ದ ಸುತ್ತ ಮುತ್ತಲಿನವರು ಆಶ್ಚರ್ಯದಿಂದ ಆ ಹೆಣ್ಣು ಮಗಳನ್ನ ಪ್ರಶ್ನೆ ಮಾಡಿದರು, “ ನೀನು ಟಾಲ್ ಸ್ಟೊಯ್ ನ ನೋಡಿದೀಯಾ”

ಆ ಹೆಣ್ಣು ಮಗಳು, “ ಎಲ್ಲಿ ಎಲ್ಲಿ ಟಾಲ್ ಸ್ಟೊಯ್” ಎಂದು ಸುತ್ತ ಮುತ್ತ ನೋಡತೊಡಗಿದಳು. “ ನೀನು ಹಣ ಕೊಟ್ಟಿಯಲ್ಲಾ ಆ ಮುದುಕ, ಅವನೇ ಟಾಲ್ ಸ್ಟೊಯ್” ಎಂದು ಜನ ಅವಳಿಗೆ ಹೇಳಿದಾಗ ಆಕೆಗೆ ಬಹಳ ಮುಜುಗರವಾಯ್ತು.

ಆಕೆ ಟಾಲ್ ಸ್ಟೊಯ್ ಹತ್ತಿರ ಹೋಗಿ “ ನನ್ನದು ತಪ್ಪಾಯಿತು, ನೀವು ಯಾರೆಂದು ನನಗೆ ಗೊತ್ತಾಗಲಿಲ್ಲ. ಆ ಒಂದು ಪೆನ್ನಿ ವಾಪಸ್ ಕೊಟ್ಟುಬಿಡಿ” ಎಂದು ಕೇಳಿಕೊಂಡಾಗ

ಟಾಲ್ ಸ್ಟೊಯ್ ನಗುತ್ತ, “ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿ ಗಳಿಸಿದ ಒಂದು ಪೆನ್ನಿ ಎಂದರೆ ಅದು ಇದೇ ಇರಬೇಕು. ನಾನು ಇದನ್ನ ವಾಪಸ್ ಕೊಡುವುದಿಲ್ಲ” ಎನ್ನುತ್ತ ಹಣ ವಾಪಸ್ ಕೊಡಲು ನಿರಾಕರಿಸಿಬಿಟ್ಟ.


This anecdote, from Ivan Nazhivin’s biography “Tolstoy’s Soul,”captures Tolstoy’s humility and humor, even in the face of mistaken identity.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.