ನಾವು ಪ್ರತಿಯೊಬ್ಬರೂ ಖುಶಿಯಾಗಿರುವ ಹಕ್ಕನ್ನು ಹೊಂದಿದ್ದೇವೆ. ಪ್ರತಿಯೊಬ್ಬರಿಗೂ ಮೌಲ್ಯ ಇದೆ ಮತ್ತು ನಾವು ಭೇಟಿ ಮಾಡುವ ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ ಖುಶಿಯಾಗಿರಲು ಪ್ರಯತ್ನ ಮಾಡುತ್ತಿದ್ದಾರೆ. ಇವತ್ತು ನಾವು ಪ್ರತಿಯೊಬ್ಬರನ್ನೂ ಅಂತಃಕರಣ ಮತ್ತು ಗೌರವದಿಂದ ಕಾಣುವ ಗಟ್ಟಿ ನಿರ್ಧಾರ ಮಾಡೋಣ… ~ ಸಂಗ್ರಹಾನುವಾದ । ಚಿದಂಬರ ನರೇಂದ್ರ
ಪ್ರತಿದಿನ ಮುಂಜಾನೆ , ಇವತ್ತು ನಾವು ಖುಶಿಯಾಗಿರೋದಾ ಅಥವಾ ಬೇಡ್ವಾ ಎನ್ನುವ ಆಯ್ಕೆಯೊಂದಿಗೆ ನಿದ್ದೆಯಿಂದ ಎದ್ದೇಳುತ್ತೇವೆ. ಬೆಳಕು ಹರಿಯುತ್ತಿದ್ದಂತೆ, ನಮಗೆ ಒಂದು ಫ್ರೆಶ್ ಶುರುವಾತಿಗೆ ಅವಕಾಶ, ಭರವಸೆ ಮತ್ತು ಧನಾತ್ಮಕತೆಯ ಮೇಲೆ ಫೋಕಸ್ ಮಾಡಲು ಮತ್ತು ನಮ್ಮ ಬಗ್ಗೆ ಹಾಗು ನಮ್ಮ ಮನಸ್ಥಿಯ ಬಗ್ಗೆ ಕಾಳಜಿ ಮಾಡಲು.
ನಮ್ಮ ವೈಯಕ್ತಿಕ ಖುಶಿಯ ಒಂದು ಬಹುಮುಖ್ಯ ಅಂಶ ಎಂದರೆ ನಮ್ಮಲ್ಲಿ ನಮಗೆ ಮತ್ತು ಖುಶಿಯಾಗಿರುವ ನಮ್ಮ ಹಕ್ಕಿನ ಬಗ್ಗೆ ನಮಗೆ ಎಷ್ಟು ನಂಬಿಕೆ ಇದೆ ಎನ್ನುವುದು. ಬಹಳಷ್ಟು ಬಾರಿ ನಾವು ನಮ್ಮ ಸಾಮರ್ಥ್ಯಗಳಲ್ಲಿ ಮತ್ತು ಖುಶಿಗಾಗಿ ಹಾತೊರೆಯುವ ನಮ್ಮ ಹಕ್ಕಿನಲ್ಲಿ ನಂಬಿಕೆ ಕಳೆದುಕೊಂಡು, ನಮ್ಮ ಖುಶಿಯನ್ನು ಹಾಳು ಮಾಡಿಕೊಂಡು ಬಿಟ್ಟಿರುತ್ತೇವೆ
ನಿಜ ಏನೆಂದರೆ ನಮಗೆ ಕೂಡ ಮಹತ್ವ ಇದೆ, ನಾವು ಪ್ರತಿಯೊಬ್ಬರೂ ಖುಶಿಯಾಗಿರುವ ಹಕ್ಕನ್ನು ಹೊಂದಿದ್ದೇವೆ. ಪ್ರತಿಯೊಬ್ಬರಿಗೂ ಮೌಲ್ಯ ಇದೆ ಮತ್ತು ನಾವು ಭೇಟಿ ಮಾಡುವ ಪ್ರತಿಯೊಬ್ಬರೂ ಈ ಜಗತ್ತಿನಲ್ಲಿ ಖುಶಿಯಾಗಿರಲು ಪ್ರಯತ್ನ ಮಾಡುತ್ತಿದ್ದಾರೆ. ಇವತ್ತು ನಾವು ಪ್ರತಿಯೊಬ್ಬರನ್ನೂ ಅಂತಃಕರಣ ಮತ್ತು ಗೌರವದಿಂದ ಕಾಣುವ ಗಟ್ಟಿ ನಿರ್ಧಾರ ಮಾಡೋಣ; ಜೊತೆಜೊತೆಗೆ, ಈ ಸೌಲಭ್ಯವನ್ನು ನಮಗೂ ವಿಸ್ತರಿಸಿಕೊಳ್ಳೋಣ. ಪ್ರತಿದಿನ ಮುಂಜಾನೆ ನಿದ್ದೆಯಿಂದ ಎದ್ದಾಗ ಈ ಮಾತುಗಳನ್ನ ಹೇಳಿಕೊಳ್ಳೋಣ,
I matter ….. ನಾನು ಎಲ್ಲರಿಂದಲೂ ಪ್ರೀತಿಸಲ್ಪಡುವ, ಗೌರವಿಸಲ್ಪಡುವ ಮಹತ್ವದ ವ್ಯಕ್ತಿ.
I am good enough …… ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಮತ್ತು ಎಲ್ಲರೂ ತಪ್ಪುಗಳನ್ನ ಮಾಡುತ್ತಾರೆ. ನಾನು ಅರ್ಹ ಮತ್ತು ಸಾಕಷ್ಟು ಯೋಗ್ಯ ಮನುಷ್ಯ.
I will keep trying ….. ನಾನು ಮಾಡುವುದು ಯಾವಾಗಲೂ ಸರಿ ಇರಲಾರದು ಆದರೆ ನಾನು ನಿರಂತರವಾಗಿ ಆ ದಿಕ್ಕಿನಲ್ಲಿ ಪ್ರಯತ್ನ ಮುಂದುವರೆಸುತ್ತೇನೆ .
I will stay positive…. ನಾನು ನನ್ನ ಬದುಕಿನ ಧನಾತ್ಮಕ ಸಂಗತಿಗಳ ಮೇಲೆ ಫೋಕಸ್ ಮಾಡುತ್ತೇನೆ, ಮತ್ತು ನನ್ನ ಬಳಿ ಇರುವ ಎಲ್ಲದರ ಬಗ್ಗೆ ನಾನು ಕೃತಜ್ಞನಾಗಿರುತ್ತೇನೆ.
ನೀನು ಮುಖ್ಯ ಮತ್ತು ಜಗತ್ತಿಗೆ ನಿನ್ನ ಅವಶ್ಯಕತೆ ಇದೆ ಹಾಗು ನಿನಗೆ ಖುಶಿಯಿಂದ ಇರುವ ಹಕ್ಕು ಇದೆ – ನಮಗೆಲ್ಲ ಈ ಹಕ್ಕು ಇದೆ. ಗಟ್ಚಿಯಾಗಿ ಬದುಕಿ, ನಿಮಗೆ ಎಷ್ಟು ಬಾರಿ ಬೇಕೋ ಅಷ್ಟು ಬಾರಿ ನೆನಪಿಸಿಕೊಳ್ಳಿ, ನಿಮಗೆ ಈ ಬದುಕಿನಲ್ಲಿ ಎಲ್ಲರಂತೆ ಖುಶಿಯಿಂದ ಬದುಕುವ ಹಕ್ಕು ಇದೆ. ಸಕಾರಾತ್ಮಕತೆ ಮತ್ತು ಕಾರುಣ್ಯ ಗಳೊಂದಿಗೆ ಬದುಕನ್ನು ಲೀಡ್ ಮಾಡಿ, ಅವು ವಾಪಸ್ ನಿಮ್ಮೆಡೆಗೆ ಹರಿದು ಬಂದು ನಿಮ್ಮನ್ನು ಖುಶಿಯಾಗಿಡಲಿ.

