ಮಾಸ್ಟರ್ ಕನ್ನಡಿ ಇದ್ದ ಹಾಗೆ : ಓಶೋ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಭೂಮಿಯ ಮೇಲಿರುವ
ನಕಲೀ ಗುರುಗಳ
ಮತ್ತು ಕಪಟಿ ಶಿಕ್ಷಕರ ಸಂಖ್ಯೆ
ಬ್ರಹ್ಮಾಂಡದಲ್ಲಿರುವ
ಒಟ್ಟು ನಕ್ಷತ್ರಗಳ ಸಂಖ್ಯೆಗಿಂತ ಹೆಚ್ಚು.

ಅಧಿಕಾರದ ಲಾಲಸೆ,
ಸ್ವಂತ ಹಿತಾಸಕ್ತಿಗಳೇ ಉಸಿರಾಗಿರುವ
ಇಂಥ ಮೋಸಗಾರರನ್ನ
ನಿಜದ ಮಾರ್ಗದರ್ಶಕರೆಂದು
ಗೊಂದಲ ಮಾಡಿಕೊಳ್ಳಬೇಡಿ.

ನಿಜದ ಅಧ್ಯಾತ್ಮ ಸಾಧಕ
ನಿಮ್ಮ ಗಮನವನ್ನ ತನ್ನೆಡೆಗೆ ಬಯಸುವುದಿಲ್ಲ,
ಸಂಪೂರ್ಣ ಶರಣಾಗತಿಯನ್ನ
ನಿಮ್ಮಿಂದ ನಿರೀಕ್ಷಿಸುವುದಿಲ್ಲ,
ನಿಮ್ಮ ಮೆಚ್ಚುಗೆ ಮತ್ತು ಹೊಗಳಿಕೆಯನ್ನ
ಸಹಿಸುವುದಿಲ್ಲ.

ನಿಜದ ಗುರು,
ಗಾಜಿನಂತೆ ಪಾರದರ್ಶಕ,
ಭಗವಂತನ ಬೆಳಕು ಹಾಯ್ದು ಹೋಗಲು
ಅವಕಾಶ ಮಾಡಿಕೊಡುತ್ತಾನೆ
ತನ್ನ ಮೂಲಕ.

~ ಶಮ್ಸ್ ತಬ್ರೀಝಿ


ಒಬ್ಬ ಝೆನ್ ಕವಿಯ ಪದ್ಯ ಹೀಗಿದೆ

“See his face but once,
Remember his name a thousand years.”

ಕವಿ ತನ್ನ ಮಾಸ್ಟರ್ ಬಗ್ಗೆ ಹೇಳುತ್ತಿದ್ದಾನೆ. ಒಮ್ಮೆ ನೀವು ಮಾಸ್ಟರ್ ಮುಖ ನೋಡಿದಿರಾದರೆ, ಅದನ್ನು ನೀವು ಸಾವಿರ ವರ್ಷಗಳಾದರೂ ಮರೆಯುವುದಿಲ್ಲ. ಏಕೆಂದರೆ ಆ ಕ್ಷಣದಲ್ಲಿ ನಿಮ್ಮನ್ನೇ ನೀವು ನೋಡಿಕೊಂಡಿರುತ್ತೀರ.

ಮಾಸ್ಟರ್ ಕನ್ನಡಿ ಇದ್ದ ಹಾಗೆ ನೀವು ಅವನ ಹತ್ತಿರ ಹೋದಂತೆಲ್ಲ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿಕ್ಕೆ ಶುರು ಮಾಡುತ್ತೀರಿ.

ಮತ್ತು ಈ ಅಧ್ಯಾತ್ಮಿಕ ಶಿಸ್ತು ಎನ್ನುವುದು ಬೇರೇನೂ ಅಲ್ಲ, ಮಾಸ್ಟರ್ ಗೆ ಹೆಚ್ಚು ಹತ್ತಿರವಾಗುತ್ತ ಹೋಗುವ ಪ್ರಕ್ರಿಯೆ so that, ಮಾಸ್ಟರ್ ಕಣ್ಣುಗಳನ್ನ , ಅವನ ಹಾವಭಾವಗಳನ್ನ, ನಿಮ್ಮ ಬುದ್ಧತ್ವವನ್ನ ಪಾರದರ್ಶಕವಾಗಿ ಕಂಡುಕೊಳ್ಳಬಹುದು.


—Øshó—
Dogen, the Zen Master: A Search and a Fulfillment; Ch #8: Secretly, a jewel in his robe pm in Gautam the Buddha Auditorium

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.