ಗಾಂಧಿ ಮತ್ತು ಜನರಲ್ ಕಾರ್ಯಪ್ಪನವರ ನಡುವೆ ನಡೆದ ಕುತೂಹಲಕಾರಿ ಸಂಭಾಷಣೆಯ ಝಲಕ್ ಇಲ್ಲಿದೆ… । ಚಿದಂಬರ ನರೇಂದ್ರ
ಮೊನ್ನೆ ಮಾತಿನ ನಡುವೆ ಗೆಳೆಯರೊಬ್ಬರು , ಗೋಪಾಲ ಗಾಂಧಿ ಹೇಳಿದ ಒಂದು ಅನೆಕ್ಟೋಡ್ ಹೇಳಿದರು.
ಒಮ್ಮೆ ಮಹಾ ದಂಡನಾಯಕ ಜನರಲ್ ಕಾರ್ಯಪ್ಪ, ಗಾಂಧಿಯ ಭೇಟಿಗೆ ಬರುತ್ತಾರೆ. ಅವತ್ತು ಗಾಂಧಿಯವರ ಮೌನವ್ರತ ಇದ್ದುದರಿಂದ ಮರುದಿನ ಮತ್ತೆ ಬರುತ್ತಾರೆ, ಗಾಂಧಿಯವರ ಎದುರು ತಮ್ಮ ಸಂದಿಗ್ಧವನ್ನು ಹಂಚಿಕೊಳ್ಳುತ್ತಾರೆ, “ ಗಾಂಧೀಯವರೇ, ನಾನೊಬ್ಬ ಯೋಧ, ಯುದ್ಧ ಮಾಡುವುದು ನನ್ನ ಮುಖ್ಯ ಕರ್ತವ್ಯಗಳಲ್ಲೊಂದು. ಈ ಯುದ್ಧ ಮಾಡುವಾಗ ಅಹಿಂಸೆಯನ್ನು ಪಾಲಿಸುವುದು ಹೇಗೆ? “
ಗಾಂಧಿ ಒಂದು ಕ್ಷಣ ವಿಚಾರ ಮಾಡಿ ಹೇಳುತ್ತಾರೆ “ ಖಂಡಿತ ನನ್ನ ಬಳಿ ನಿಮ್ಮ ಪ್ರಶ್ನೆಗೆ ಉತ್ತರವಿಲ್ಲ. ಈ ಪ್ರಯೋಗ ಮಾಡಲು ನಿಮಗೆ ಅವಕಾಶವಿದೆ. ಯುದ್ಧ ಕಾಲದಲ್ಲಿ ನಿಮಗೆ ಸಾಧ್ಯವಾಗುವ ಹಾಗೆ ಅಹಿಂಸೆಯನ್ನು ಉಪಯೋಗಿಸಿ ಮತ್ತು ನಿಮ್ಮ ಅನುಭವವನ್ನು ನನ್ನ ಜೊತೆ ಹಂಚಿಕೊಳ್ಳಿ. ನಾನು ನಿಮ್ಮಿಂದ ಇದನ್ನು ಕಲಿಯಬೇಕು”
ಆದರೆ ಯುದ್ಧವಾದ ನಂತರ ಈ ಅನುಭವ ಪಡೆಯಲು ಗಾಂಧಿಯವರಿಗೆ ಸಾಧ್ಯವಾಗಲೇ ಇಲ್ಲ. ಅವರ ಕೊಲೆಯಾಗಿ ಹೋಗಿತ್ತು.

